For Quick Alerts
  ALLOW NOTIFICATIONS  
  For Daily Alerts

  ಮೊನ್ನೆ ಒಂದು, ಇವತ್ತು ಇನ್ನೊಂದು ಚಿತ್ರ ಶುರು ಮಾಡಿದ ಚಿರು ಸರ್ಜಾ

  |

  ಕವಿ ಪೂರ್ಣಚಂದ್ರ ತೇಜಸ್ವಿಯವರ 'ಜುಗಾರಿ ಕ್ರಾಸ್' ಕಾದಂಬರಿ ಸಿನಿಮಾ ಆಗ್ತಿದ್ದು, ಅದಕ್ಕೆ ಚಿರಂಜೀವಿ ಸರ್ಜಾ ನಾಯಕ. ಈ ಸಿನಿಮಾ ಮೊನ್ನೆಯಷ್ಟೆ ಅಂದ್ರೆ ಭಾನುವಾರ ಅಧಿಕೃತವಾಗಿ ಸೆಟ್ಟೇರಿದೆ. ಅಷ್ಟರಲ್ಲೇ ಇನ್ನೊಂದು ಚಿತ್ರಕ್ಕೆ ಚಿರು ಸರ್ಜಾ ಚಾಲನೆ ನೀಡಿದ್ದಾರೆ.

  ಹೌದು, ಚಿರು ಸರ್ಜಾ ಮತ್ತು ನವನಿರ್ದೇಶಕ ನವೀನ್ ರೆಡ್ಡಿ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ 'ಖಾಕಿ' ಚಿತ್ರದ ಮುಹೂರ್ತ ಸಮಾರಂಭ ಇಂದು ನಡೆದಿದೆ. ಚಿತ್ರದ ಮೊದಲ ದೃಶ್ಯಕ್ಕೆ ಚಿರು ಪತ್ನಿ ಮೇಘನಾ ರಾಜ್ ಕ್ಲಾಪ್ ಮಾಡಿ ಶುಭಕೋರಿದರು.

  'ಜುಗಾರಿ ಕ್ರಾಸ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

  ನವೀನ್ ರೆಡ್ಡಿ ನಿರ್ದೇಶನವಿರುವ ಈ ಚಿತ್ರಕ್ಕೆ ವಿದ್ಯಾದರ್ ಚಿತ್ರಕಥೆ ಮಾಡಿದ್ದಾರೆ. ರಿತ್ವೀಕ್ ಮುರಳಿಧರ್ ಸಂಗೀತ ನೀಡುತ್ತಿದ್ದಾರೆ.

  ತರುಣ್ ಟಾಕೀಸ್ ನಿರ್ಮಾಣ ಮಾಡ್ತಿರುವ ಈ ಸಿನಿಮಾದಲ್ಲಿ ಚಿರು ಕೇಬಲ್ ಆಪರೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

  ಇನ್ನುಳಿದಂತೆ 'ಜುಗಾರಿ ಕ್ರಾಸ್' ಚಿತ್ರವನ್ನ ಟಿ ಎಸ್ ನಾಗಾಭರಣ ನಿರ್ದೇಶನ ಮಾಡುತ್ತಿದ್ದು, ಕಡ್ಡಿಪುಡಿ ಚಂದ್ರು ಬಂಡವಾಳ ಹಾಕಿದ್ದಾರೆ. ಈ ಚಿತ್ರದ ಮುಹೂರ್ತಕ್ಕೆ ರಾಕಿಂಗ್ ಯಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು.

  ಈ ಎರಡು ಚಿತ್ರಗಳನ್ನ ಬಿಟ್ಟರೇ ರಾಜಾಮಾರ್ತಂಡ, ರಣಂ, ಸಿಂಗಂ, ಹಾಗೂ ತೆಲುಗಿನ ಕ್ಷಣಂ ರೀಮೇಕ್ ಚಿತ್ರದಲ್ಲಿ ಯುವಸಾಮ್ರಾಟ್ ನಟಿಸುತ್ತಿದ್ದಾರೆ.

  English summary
  Debutant director Naveen Reddy's Chiranjeevi Sarja-starrer has been titled Khaki. With the tagline, The Power of Common Man.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X