»   » ಯಶ್ ಹುಟ್ಟುಹಬ್ಬದ ವಿಶೇಷವಾಗಿ ಅನೌನ್ಸ್ ಆದ ಚಿತ್ರಗಳಿವು

ಯಶ್ ಹುಟ್ಟುಹಬ್ಬದ ವಿಶೇಷವಾಗಿ ಅನೌನ್ಸ್ ಆದ ಚಿತ್ರಗಳಿವು

Posted By:
Subscribe to Filmibeat Kannada

ಓಡೋ ಕುದುರೆ ನೋಡಿ ಉರ್ಕೊಬೇಡಿ ತಾಖತ್ತಿದ್ರೆ ತಡಿರಿ..ಎಂದು ಹಾಡಿನ ಮೂಲಕ ಹೇಳಿದ್ದ ನಾಯಕ ಯಶ್ ನಿಜಕ್ಕೂ ಕನ್ನಡ ಸಿನಿಮಾರಂದಲ್ಲಿ ಈಗ ಓಡೋ ಕುದುರೆ. ನಾಳೆ (ಜನವರಿ 8) ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಅಭಿನಯದ ಚಿತ್ರಗಳು ಇನ್ನು ಮುಂದೆ ಸಾಲು ಸಾಲಾಗಿ ಬರುತ್ತವೆ.

ಈಗಾಗಲೇ ಕೆಲಸ ಮಾಡಿ ಹಿಟ್ ಚಿತ್ರಗಳನ್ನ ನೀಡಿರುವ ಪ್ರೊಡ್ಯೂಸರ್ ಗಳ ಜೊತೆಯಲ್ಲಿ ಯಶ್ ಮತ್ತೊಮ್ಮೆ ಆಕ್ಟ್ ಮಾಡುತ್ತಿದ್ದಾರೆ. ಕೆ ಜಿ ಎಫ್ ಸಿನಿಮಾದ ಟೀಸರ್ ಗಾಗಿ ಕಾದಿರುವ ಅಭಿಮಾನಿಗಳ ಮುಂದೆ ಯಶ್ ಮತ್ತಷ್ಟು ಸಿನಿಮಾಗಳ ಮೂಲಕ ಬರಲಿದ್ದಾರೆ.

ಮತ್ತೆ ಒಂದಾದ್ರು ರಾಕಿಂಗ್ ಸ್ಟಾರ್ ಯಶ್ ಮತ್ತು ಜಯಣ್ಣ

ಬರ್ತಡೇ ಸ್ಪೆಷಲ್ ಆಗಿ ಹೊಸ ಸಿನಿಮಾಗಳ ಪೋಸ್ಟರ್ ಗಳು ಬಿಡುಗಡೆ ಮಾಡಿಲಾಗಿದೆ. ಹಾಗಾದ್ರೆ ಯಶ್ ಯಾವ ಯಾವ ಚಿತ್ರಗಳಲ್ಲಿ ಆಕ್ಟ್ ಮಾಡುತ್ತಾರೆ? ಯಾರು ಯಶ್ ಅಭಿನಯದ ಚಿತ್ರಗಳನ್ನ ನಿರ್ದೇಶನ ಮಾಡುತ್ತಾರೆ? ಕಂಪ್ಲೀಟ್ ಮಾಹಿತಿ ಇಲ್ಲಿದೆ. ಮುಂದೆ ಓದಿ.

ಯಶ್ ಗಾಗಿ ಎರಡು ಚಿತ್ರ ನಿರ್ಮಾಣ

ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳು ಯಶ್ ಜೊತೆ ಕೆಲಸ ಮಾಡಲು ಮುಂದಾಗಿದ್ದು ಬರ್ತಡೇ ಸ್ಪೆಷಲ್ ಆಗಿ ಹೊಸ ಚಿತ್ರಗಳನ್ನ ಅನೌನ್ಸ್ ಮಾಡಲಾಗಿದೆ. ಎ ಹರ್ಷ ನಿರ್ದೇಶನದ 'ರಾಣ' ಸಿನಿಮಾದಲ್ಲಿ ಯಶ್ ಅಭಿನಯಿಸುತ್ತಿದ್ದಾರೆ. ಚಿತ್ರವನ್ನ ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡಲಿದ್ದಾರೆ.

ರಾಜಹುಲಿ ಚಿತ್ರಕ್ಕೆ ಗಂಡುಗಲಿ ಮಂಜು ಬಂಡವಾಳ

'ರಾಜಹುಲಿ' ಸಿನಿಮಾದ ನಂತರ ಮತ್ತೆ ಕೆ ಮಂಜು ಯಶ್ ಅಭಿನಯದ ಚಿತ್ರಕ್ಕೆ ಹಣ ಹಾಕಲಿದ್ದು ಪ್ರೊಡಕ್ಷನ್ 40 ಹೆಸರಿನಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಕೆ ಮಂಜು.

ರಾಕ್ ಲೈನ್ ಪ್ರೊಡಕ್ಷನ್ಸ್ ನಲ್ಲಿ ಚಿತ್ರ

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ರಾಕ್ ಲೈನ್ ವೆಂಕಟೇಶ್ ಅವರ ಬಳಿ ರಾಕಿಂಗ್ ಸ್ಟಾರ್ ಡೇಟ್ಸ್ ಇರುವುದರಿಂದ ಪ್ರೊಡಕ್ಷನ್ 44 ಹೆಸರಿನಲ್ಲಿ ರಾಕ್ಲೈನ್ ಪ್ರೊಡಕ್ಷನ್ಸ್ ನಿಂದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.

ಮಫ್ತಿ ನಿರ್ದೇಶಕನ ಜೊತೆ ಸಿನಿಮಾ

'ಮಫ್ತಿ' ಸಿನಿಮಾದ ನಂತರ ಡೈರೆಕ್ಟರ್ ನರ್ತನ್ ಯಶ್ ಅವರಿಗೆ ಚಿತ್ರವನ್ನ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಅದರಂತೆಯೇ ಜಯಣ್ಣ ಕಂಬೈನ್ಸ್ ನಲ್ಲಿ ಯಶ್ ಅಭಿನಯಿಸುತ್ತಿರುವ ಮತ್ತೊಂದು ಸಿನಿಮಾವನ್ನ ನರ್ತನ್ ನಿರ್ದೇಶಿಸಲಿದ್ದಾರೆ.

English summary
After KGF movie, kannada actor Yash has acting in four films, four movies posters are released for yash birthday. Yash is acting in the prestigious production companys of Kannada .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X