»   » ಬಿಗ್ ಬಾಸ್ ಮನೆಯಿಂದ ಬಂದ ನಂತರ ಊರು ಬಿಟ್ಟ ಸಂಯುಕ್ತ ಹೆಗಡೆ

ಬಿಗ್ ಬಾಸ್ ಮನೆಯಿಂದ ಬಂದ ನಂತರ ಊರು ಬಿಟ್ಟ ಸಂಯುಕ್ತ ಹೆಗಡೆ

Posted By:
Subscribe to Filmibeat Kannada
ಬಿಗ್ ಬಾಸ್ ಗಲಾಟೆ ನಂತರ ಶ್ರೀ ಲಂಕಾಗೆ ಹಾರಿದ ಸಂಯುಕ್ತ ಹೆಗ್ಡೆ | FIlmibeat Kannada

ಸಂಯುಕ್ತ ಹೆಗಡೆ.. ಕಳೆದ ವರ್ಷ ಬಿಡುಗಡೆಯಾದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಾಯಕ ನಟಿ. ಮೊದಲ ಸಿನಿಮಾದಲ್ಲೇ ಸಖತ್ ಪ್ರಖ್ಯಾತಿ ಪಡೆದುಕೊಂಡ ನಟಿ. ಒಂದೇ ಸಿನಿಮಾದಲ್ಲಿ ಸಾವಿರಾರು ಅಭಿಮಾನಿಗಳು ಈ ನಟಿಗೆ ಹುಟ್ಟಿಕೊಂಡಿದ್ದರು.

ಆನ್ ಸ್ಕ್ರೀನ್ ನಲ್ಲಿ ಸಖತ್ ಎನರ್ಜಿ ಆಗಿ ಅಭಿನಯಿಸುತ್ತಾರೆ ಅನ್ನೋ ಉದ್ದೇಶಕ್ಕೆ ಸಂಯುಕ್ತ ಅವರಿಗೆ ಆಫರ್ ಗಳು ಕೂಡ ಸಾಲಾಗಿ ಬಂದವು. ಸಂಯುಕ್ತ ಹೆಗಡೆ ಒಂದೆರೆಡು ಸಿನಿಮಾಗಳಿಗೆ ಅಡ್ವಾನ್ಸ್ ಪಡೆದು ನಂತರ ಅಭಿನಯಿಸೋದಿಲ್ಲ ಎಂದು ಕಿರಿಕ್ ಮಾಡಿದ್ದು ಉಂಟು.

'ಕಿರಿಕ್ ಪಾರ್ಟಿ' ಸಿನಿಮಾಗೆ ನಾಯಕಿ ಆಗಿದ್ದಕ್ಕೋ ಏನೋ ಈ ನಾಯಕಿ ಹೋದೆಲೆಲ್ಲಾ ಕಿರಿಕ್ ಅನ್ನೋ ಪಟ್ಟ ಕಟ್ಟಿಕೊಂಡರು. ಇತ್ತೀಚಿಗೆ ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗೆ ಹೊಡೆದು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಹಾಗಾದ್ರೆ ಸಂಯುಕ್ತ ಹೆಗಡೆ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಇದಕ್ಕೆ ಉತ್ತರ.. ಇಲ್ಲಿದೆ ಮುಂದೆ ಓದಿ

ಇನ್‌ಸ್ಟಾಗ್ರಾಂ ನಲ್ಲಿ ಸಂಯುಕ್ತ

ಬಿಗ್ ಬಾಸ್ ಮನೆಯಿಂದ ಹೊರಬಂದ ನಟಿ ಸಂಯುಕ್ತ ಹೆಗಡೆ ನಂತರ ಪ್ರತ್ಯಕ್ಷ ಆಗಿದ್ದು ಇನ್‌ಸ್ಟಾಗ್ರಾಂ ನಲ್ಲಿ. "ಹಿಂದಿಗಿಂತಲೂ ಸ್ಟ್ರಾಂಗ್ ಆಗಿ ಮತ್ತು ಇನ್ನೂ ಬೆಟರ್ ಆಗಿ ನಾನು ಮತ್ತೆ ತಿರುಗಿ ಬಂದಿದ್ದೇನೆ" ಎಂದು ಸ್ಟೇಟಸ್ ಅಪ್ಡೇಟ್ ಮಾಡಿದ್ದಾರೆ.

ಪ್ರವಾಸದಲ್ಲಿ ನಟಿ ಸಂಯುಕ್ತ

ನಟಿ ಸಂಯುಕ್ತ ಬಿಗ್ ಬಾಸ್ ನಿಂದ ಬಂದ ನಂತರ ಪ್ರವಾಸಕ್ಕಾಗಿ ಶ್ರೀಲಂಕಾಗೆ ಹೋಗಿದ್ದಾರೆ. ಈ ಮೂಲಕ ಒಂದಿಷ್ಟು ದಿನ ವಿವಾದಗಳಿಂದ ದೂರ ಉಳಿದುಕೊಳ್ಳುವ ಪ್ಲಾನ್ ಮಾಡಿದ್ದಾರೆ.

ಕಿರಿಕ್ ಪಾರ್ಟಿ ಸಂಯುಕ್ತ

ಕೇವಲ ರಿಯಾಲಿಟಿ ಶೋ ನಲ್ಲಿ ಮಾತ್ರವಲ್ಲದೆ ನಟಿ ಸಂಯುಕ್ತ ಸಿನಿಮಾಗಳಲ್ಲೂ ಕಿರಿಕ್ ಮಾಡಿರುವ ಉದಾಹರಣೆಗಳು ಸಾಕಷ್ಟಿದೆ. ಪ್ರಚಾರದಲ್ಲಿ ಭಾಗಿಯಾಗದೆ, ಚಿತ್ರತಂಡದ ಸಂಪರ್ಕಕ್ಕೂ ಸಿಗದೆ ಆಟ ಆಡಿಸಿದ್ದಾರೆ.

ಟಾಲಿವುಡ್ ನಲ್ಲಿ ಕಿರಿಕ್ ಪಾರ್ಟಿ ಸಿನಿಮಾ

ಟಾಲಿವುಡ್ ನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಂಯುಕ್ತ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗ್ಲೆ ಚಿತ್ರೀಕರಣ ಮುಗಿದಿದ್ದು ಫೆಬ್ರವರಿ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಗಳಿವೆ.

English summary
Kannada actress samyukta hegde after leaving the big boss, the actress is on a trip to Sri Lanka, Samyuktha's Telugu film Kirik Party will be released in February.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X