For Quick Alerts
  ALLOW NOTIFICATIONS  
  For Daily Alerts

  ಚುನಾವಣೆ ಮುಗಿದರೂ ಮಂಡ್ಯ ಸಂಸದೆಗೆ ಕಾಡುತ್ತಿದ್ದಾರೆ 'ನಕಲಿ ಸುಮಲತಾ'!

  |
  ಸುಮಲತಾಗೆ ಪದೇ ಪದೇ ಕಾಡುತ್ತಿರುವ ಸಮಸ್ಯೆ ಇದೆ..! | Sumalatha Ambareesh | FILMIBEAT KANNADA

  ಅಡೆ ತಡೆಗಳ ನಡುವೆ ಚುನಾವಣೆ ಗೆದ್ದ ಸುಮಲತಾ ಮಂಡ್ಯ ಸಂಸದೆ ಪಟ್ಟ ಪಡೆದಿದ್ದಾರೆ. ಆದರೆ, ಈಗಲೂ ಸುಮಲತಾರಿಗೆ ನಕಲಿ ಸುಮಲತಾರಿಂದ ಹಾವಳಿ ಮಾತ್ರ ಕಡಿಮೆ ಆಗಿಲ್ಲ.

  ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಸುಮಲತಾ ಸಾಕಷ್ಟು ತೊಂದರೆಗಳು ಎದುರಿಸಬೇಕಾಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಎದುರು ಸ್ಪರ್ಧೆ ಮಾಡಿದ್ದರಿಂದಲೇ ಹೀಗಾಗುತ್ತೆ ಎಂಬ ಆರೋಪ ಇತ್ತು.

  ನಟಿ ಸುಮಲತಾ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ

  ಸುಮಲತಾ ಎಂಬ ಹೆಸರಿನ ಮೂವರು ಮಹಿಳೆಯನ್ನು ಚುನಾವಣಾ ಕಣಕ್ಕೆ ಇಳಿಸಿ, ಮತದಾರರಿಗೆ ಗೊಂದಲ ಮಾಡುವ ಪ್ರಯತ್ನ ನಡೆದಿತ್ತು. ಇದರಿಂದ ಸುಮಲತಾರಿಗೆ ಕೊಂಚ ಕಷ್ಟ ಆಗಿತ್ತು. ಅದೆನೇ ಇದ್ದರೂ ಎಲ್ಲವನ್ನು ಮೀರಿ ಅವರು ವಿಜಯ ಸಾಧಿಸಿದ್ದರು.

  ಆದರೆ, ಚುನಾವಣೆ ಮುಗಿಸಿದರೂ ಸುಮಲತಾ ಅಂಬರೀಶ್ ರಿಗೆ ನಕಲಿ ಸುಮಲತಾ ರಿಂದ ಆಗುತ್ತಿರುವ ತೊಂದರೆ ನಿಂತಿಲ್ಲ.

  ಸುಮಲತಾ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ

  ಸುಮಲತಾ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ

  ನಟಿ, ಸಂಸದೆ ಸುಮಲತಾ ಅಂಬರೀಶ್ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ ''ಮತ್ತೆ ನಕಲಿ 'ಸುಮಲತಾ'ಗಳ ಹಾವಳಿ!. ಸ್ನೇಹಿತರೆ ಇದು ನನ್ನ ಹೆಸರಿನಲ್ಲಿ ತೆರೆದಿರುವ ಫೇಕ್ ಅಕೌಂಟ್. ನನ್ನ ಅಕೌಂಟ್ ಗೆ ನೀಲಿ ಬಣ್ಣದ ವೆರಿವೈ ಗುರುತು ಇದೆ. ಈ ನಕಲಿ ಖಾತೆಗಳನ್ನು ಹೇಗೆ ತಡೆಯುವುದು.'' ಎಂದು ಮಾಹಿತಿ ನೀಡಿದ್ದಾರೆ.

  ಚಿರಂಜೀವಿ ಪಾರ್ಟಿಯಲ್ಲಿ ಸುಮಲತಾ ಡ್ಯಾನ್ಸ್: ಅಪಪ್ರಚಾರಕ್ಕೆ ತುತ್ತಾದ ಮಂಡ್ಯ ಸಂಸದೆ

  ಡಿಕೆಶಿ ಬಗ್ಗೆ ನಕಲಿ ಸುಮಲತಾ ಪೋಸ್ಟ್

  ಡಿಕೆಶಿ ಬಗ್ಗೆ ನಕಲಿ ಸುಮಲತಾ ಪೋಸ್ಟ್

  ಸುಮಲತಾ ಅವರ ನಕಲಿ ಫೇಸ್ ಬುಕ್ ಖಾತೆ ಬಳಸಿಕೊಂಡು ಡಿಕೆ ಶಿವಕುಮಾರ್ ವಿರುದ್ಧ ಪೋಸ್ಟ್ ಮಾಡಲಾಗಿದೆ. ''ನ್ಯಾಯದ ಮುಂದೆ ಎಲ್ಲರೂ ಒಂದೇ. ಅವರು ಮಾಡಿದ್ದನ್ನು ಅವರು ಅನುಭವಿಸುತ್ತಾರೆ. ಇದಕ್ಕಾಗಿ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುವುದು ಸರಿಯಲ್ಲ'' ಎಂದು ನಕಲಿ ಫೇಸ್ ಬುಕ್ ಖಾತೆಯಲ್ಲಿ ಬರೆಯಲಾಗಿದೆ.

  ಇತ್ತೀಚಿಗಷ್ಟೆ ಸುಮಲತಾ ಹಳೆ ವಿಡಿಯೋ ವೈರಲ್

  ಇತ್ತೀಚಿಗಷ್ಟೆ ಸುಮಲತಾ ಹಳೆ ವಿಡಿಯೋ ವೈರಲ್

  ಇತ್ತೀಚಿಗಷ್ಟೆ ಸೋಷಿಯಲ್ ಮೀಡಿಯಾದಲ್ಲಿ ಸುಮಲತಾ ಅವರ ಹಳೆಯ ವಿಡಿಯೋವೊಂದನ್ನು ವೈರಲ್ ಮಾಡಲಾಗಿತ್ತು. ನಟ ಚಿರಂಜೀವಿ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಮಲತಾ ಡ್ಯಾನ್ಸ್ ಮಾಡಿದ್ದರು. ಆ ಹಳೆಯ ವಿಡಿಯೋವನ್ನು ಈಗ ವೈರಲ್ ಮಾಡಿ, ರಾಜ್ಯದ ಜನ ಮಳೆಯಿಂದ ಕಷ್ಟದಲ್ಲಿ ಇದ್ದಾಗ ಸುಮಲತಾ ಮಜಾ ಮಾಡುತ್ತಿದ್ದಾರೆ ಎಂದು ಬಿಂಬಿಸಲಾಗಿತ್ತು.

  'ನಿಖಿಲ್ ಸೂಪರ್ ಆಗಿ ಆಕ್ಟ್ ಮಾಡಿದ್ದಾನೆ' ಅಂದ್ರು ಸುಮಲತಾ

  ಈ ಹಿಂದೆಯೂ ಇದೇ ಸಮಸ್ಯೆ ಆಗಿತ್ತು

  ಈ ಹಿಂದೆಯೂ ಇದೇ ಸಮಸ್ಯೆ ಆಗಿತ್ತು

  ಈ ಹಿಂದೆ ಕಳೆದ ಜನವರಿ ತಿಂಗಳಿನಲ್ಲಿಯೂ ಸುಮಲತಾ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದು, ಇದರ ವಿರುದ್ಧ ಗರಂ ಆಗಿದ್ದರು. ತಮ್ಮ ಹೆಸರಿನಲ್ಲಿ ಯಾರೋ ಫೇಕ್ ಫೇಸ್ ಬುಕ್ ಅಕೌಂಟ್ ಓಪನ್ ಮಾಡಿದ್ದಾರೆ ಎಂದು ಜನರ ಗಮನಕ್ಕೆ ತಂದಿದ್ದರು. ಇಷ್ಟೆಲ್ಲ ಆಗಿದ್ದರೂ, ಸೈಬರ್ ಕ್ರೈಮ್ ಗೆ ದೂರು ನೀಡಿದ್ದರೂ, ಪದೇ ಪದೇ ಸುಮಲತಾ ಇಂತಹ ಸಂದರ್ಭಗಳನ್ನು ಎದುರಿಸುತ್ತಿದ್ದಾರೆ.

  English summary
  Again fake facebook account created in the name of kannada actress, Mandya MP Sumalatha Ambareesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X