For Quick Alerts
  ALLOW NOTIFICATIONS  
  For Daily Alerts

  ಪತ್ನಿ ಮಾಡಿದ ಆರೋಪ ನಿಜವೇ.? 'ಅಗ್ನಿಸಾಕ್ಷಿ' ನಟ ರಾಜೇಶ್ ಧ್ರುವ ಹೇಳುವುದೇನು.?

  |

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ಕೊಟ್ಟಿರುವವರು ಬೇರೆ ಯಾರೂ ಅಲ್ಲ.. ರಾಜೇಶ್ ಧ್ರುವ ಕೈಹಿಡಿದ ಪತ್ನಿ ಶ್ರುತಿ.!

  ಕಿರುತೆರೆ ನಟ ರಾಜೇಶ್ ಧ್ರುವ ಮಾನಸಿಕ ಕಿರುಕುಳ ನೀಡುತ್ತಿದ್ದು, ವರದಕ್ಷಿಣೆ ತಂದಿಲ್ಲ ಅಂತ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಪತ್ನಿ ಶ್ರುತಿ ಆರೋಪಿಸಿದ್ದಾರೆ. ಜೊತೆಗೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ.

  ಲಿವಿಂಗ್ ಟು ಗೆದರ್ ರಿಲೇಶನ್ ಶಿಪ್ ನಲ್ಲಿದ್ದ ರಾಜೇಶ್ ಧ್ರುವ-ಶ್ರುತಿ 2017 ರಲ್ಲಿ ಕುಟುಂಬದವರ ಸಮ್ಮತಿ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೀಗ ಅವರ ದಾಂಪತ್ಯದಲ್ಲಿ ಬಿರುಗಾಳಿ ಬೀಸಿದೆ.

  ''ಮದುವೆ ಆಗಿಲ್ಲ ಎಂದು ಹೇಳಿಕೊಂಡು ತಿರುಗುವ ರಾಜೇಶ್ ಧ್ರುವ ಬೇರೆ ಯುವತಿಯರ ಜೊತೆಗೆ ಅಫೇರ್ ಹೊಂದಿದ್ದಾರೆ'' ಎಂಬುದು ಶ್ರುತಿ ಆರೋಪ. ಪತ್ನಿ ಮಾಡಿರುವ ಈ ಎಲ್ಲಾ ಆರೋಪಕ್ಕೆ ರಾಜೇಶ್ ಧ್ರುವ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಓದಿರಿ...

  ಮೂರು ಕಂಪ್ಲೇಂಟ್ ದಾಖಲಾಗಿದೆ

  ಮೂರು ಕಂಪ್ಲೇಂಟ್ ದಾಖಲಾಗಿದೆ

  ''ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ಮೂರು ಕಂಪ್ಲೇಂಟ್ ದಾಖಲಾಗಿದೆ. ಯಾರು ಯಾರಿಗೆ ಕಿರುಕುಳ ಕೊಟ್ಟಿದ್ದಾರೆ ಅನ್ನೋದು ದೂರಿನಲ್ಲೇ ಉಲ್ಲೇಖವಾಗಿದೆ'' ಎಂದು ಪತ್ನಿ ಶ್ರುತಿಗೆ ತಿರುಗೇಟು ಕೊಟ್ಟಿದ್ದಾರೆ ನಟ ರಾಜೇಶ್ ಧ್ರುವ.

  'ಅಗ್ನಿಸಾಕ್ಷಿ' ನಟ ಅಖಿಲ್ ವಿರುದ್ಧ ದೂರು ಕೊಟ್ಟ ಪತ್ನಿ ಶ್ರುತಿ.!

  ಆಗ ಯಾಕೆ ವರದಕ್ಷಿಣೆ ಕಿರುಕುಳದ ಆರೋಪ ಬರಲಿಲ್ಲ.?

  ಆಗ ಯಾಕೆ ವರದಕ್ಷಿಣೆ ಕಿರುಕುಳದ ಆರೋಪ ಬರಲಿಲ್ಲ.?

  ''ಕಳೆದ ವರ್ಷದ ಜುಲೈ ತಿಂಗಳಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲಾಗಿದೆ. ಆಗ ಯಾಕೆ ನನ್ನ ಮೇಲೆ ಶ್ರುತಿ ವರದಕ್ಷಿಣೆ ಕಿರುಕುಳದ ಆರೋಪ ಮಾಡಿಲ್ಲ.? ವರದಕ್ಷಿಣೆ ಕಿರುಕುಳ ಆರೋಪ ಮಾಡುತ್ತಿರುವವರು ಸಾಕ್ಷಿ ಕೊಡಲು ಹೇಳಿ..'' ಅಂತಾರೆ ರಾಜೇಶ್ ಧ್ರುವ

  ಎಲ್ಲದಕ್ಕೂ ಅನುಮಾನ ಪಡ್ತಾರೆ

  ಎಲ್ಲದಕ್ಕೂ ಅನುಮಾನ ಪಡ್ತಾರೆ

  ''ನಮ್ಮಿಬ್ಬರ ನಡುವೆ ಮನಸ್ತಾಪ ಇದೆ. ಕೂತು ಮಾತನಾಡಿದರೂ, ಸಮಸ್ಯೆ ಬಗೆಹರಿದಿಲ್ಲ. ನಾನು ಏನೇ ಮಾಡಿದರೂ ಅನುಮಾನ ಪಡುತ್ತಾರೆ. ನಾನು ನಟ ಆಗಿರುವ ಕಾರಣಕ್ಕೆ ನ್ಯೂಸ್ ಚಾನೆಲ್ ಗೆ ಹೇಳುತ್ತೇನೆ ಎಂದು ಹೆದರಿಸುತ್ತಾರೆ'' - ರಾಜೇಶ್ ಧ್ರುವ.

  ತಾಯಿಗೆ ಮಾನಸಿಕ ಹಿಂಸೆ ನೀಡುವ ಶ್ರುತಿ

  ತಾಯಿಗೆ ಮಾನಸಿಕ ಹಿಂಸೆ ನೀಡುವ ಶ್ರುತಿ

  ''ನನ್ನ ತಾಯಿಗೆ ಶ್ರುತಿ ಮಾನಸಿಕ ಹಿಂಸೆ ನೀಡಿದ್ದಾರೆ. ಶ್ರುತಿ ಮಾಂಸಹಾರಿ. ಹೊರಗೆ ಮಾಂಸ ತಿಂದು ಮನೆಯಲ್ಲಿ ಮಡಿ-ಮೈಲಿಗೆಯನ್ನ ಹಾಳು ಮಾಡುತ್ತಾರೆ. ನನ್ನ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ'' - ರಾಜೇಶ್ ಧ್ರುವ

  English summary
  'Agnisakshi' serial Actor Rajesh Dhruva reacts upon his wife Shruthi's complaint

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X