For Quick Alerts
  ALLOW NOTIFICATIONS  
  For Daily Alerts

  'ದರ್ಶನ್ ಏಳಿಗೆ ಸಹಿಸದೆ ಇಂತಹ ಕೇಸ್ ಹಾಕಲಾಗುತ್ತಿದೆ': ಬಿಸಿ ಪಾಟೀಲ್

  |

  ಚಲನಚಿತ್ರ ನಟ ದರ್ಶನ್ ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಇಂದ್ರಜಿತ್ ಲಂಕೇಶ್ ಆರೋಪದ ಬಗ್ಗೆ ಕೃಷಿ ಸಚಿವ ಬಿಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ 'ಕೌರವ' ಖ್ಯಾತಿಯ ನಟ ದಾಸನ ಪರ ನಿಲುವು ವ್ಯಕ್ತಪಡಿಸಿದರು.

  ''ದರ್ಶನ್ ಬಹಳ ಮುಗ್ದ, ಕೆಳಹಂತದಿಂದ ಈ ಮಟ್ಟಕ್ಕೆ ಬೆಳೆದು ಬಂದಿರುವ ನಟ. ಅವರ ಏಳಿಗೆ ಸಹಿಸಲಾಗದವರು ದುರುದ್ದೇಶದಿಂದ ಇಂತಹ ಕೇಸ್‌ಗಳನ್ನು ಹಾಕುತ್ತಿರಬಹುದು ಎನ್ನುವುದು ನನ್ನ ಭಾವನೆ'' ಎಂದಿದ್ದಾರೆ.

  'ಕೌರವ' ಬಿಸಿ ಪಾಟೀಲ್ ಭೇಟಿ ಮಾಡಿದ ಡಿ-ಬಾಸ್ ದರ್ಶನ್'ಕೌರವ' ಬಿಸಿ ಪಾಟೀಲ್ ಭೇಟಿ ಮಾಡಿದ ಡಿ-ಬಾಸ್ ದರ್ಶನ್

  ಇನ್ನು ದರ್ಶನ್ ಅವರ ಮೇಲೆ ಹಲ್ಲೆ ಆರೋಪಗಳು ಬಂದಿರುವ ಹಿನ್ನೆಲೆ ಕೃಷಿ ಇಲಾಖೆಯ ರಾಯಭಾರಿ ಸ್ಥಾನದಿಂದ ತೆಗೆದುಹಾಕುವ ತೀರ್ಮಾನ ಆಗುತ್ತದೆಯೇ ಎಂದು ಪ್ರಶ್ನಿಸಿದ್ದಕ್ಕೆ ''ಅಂತಹ ಯಾವುದೇ ಕೆಲಸ ಅವರು ಮಾಡಿಲ್ಲ ಅಂತ ನನಗೆ ಮನವರಿಕೆ ಇದೆ'' ಎಂದಿದ್ದಾರೆ. ಮುಂದೆ ಓದಿ...

  ದರ್ಶನ್ ವಿರುದ್ಧ ಪಿತೂರಿ

  ದರ್ಶನ್ ವಿರುದ್ಧ ಪಿತೂರಿ

  ''ದರ್ಶನ್ ಬಹಳ ಸರಳ ಹಾಗೂ ದೊಡ್ಡ ಹೃದಯ ಹೊಂದಿರುವ ಹುಡುಗ. ಆ ರೀತಿ ಯಾವ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ ಎನ್ನುವುದು ನನ್ನ ಭಾವನೆ'' ಎಂದು ಬಿಸಿ ಪಾಟೀಲ್ ಡಿ ಬಾಸ್‌ಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ .

  ಪ್ರಚೋದನೆಯಿಂದ ಬಂದ ಮಾತು

  ಪ್ರಚೋದನೆಯಿಂದ ಬಂದ ಮಾತು

  ಸಾರ್ವಜನಿಕವಾಗಿ ತಲೆ ತೆಗಿತೀನಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಸಿ ಪಾಟೀಲ್, ''ನಾನು ಆ ದಿನ ಹೇಳಿಕೆ ನೋಡಿದೆ, ನೀವು ಏನೇನೋ ಕೇಳಬೇಡಿ ರೆಕ್ಕ ಪುಕ್ಕ ಎಲ್ಲ ಬರುತ್ತೆ ಅಂತ ಅಂದ್ರು. ಮತ್ತೆ ಪ್ರಚೋದನೆ ಮಾಡಿ ಪ್ರಶ್ನೆ ಕೇಳಿದ್ದಕ್ಕೆ ಆ ಮಾತು ಬಂತೇ ಹೊರತು ದರ್ಶನ್ ಹೃದಯದಿಂದ ಆ ಮಾತು ಹೇಳಿದ್ದಲ್ಲ, ದರ್ಶನ್ ಆ ರೀತಿ ಹುಡುಗ ಅಲ್ಲ'' ಎಂದು ಬಿಸಿ ಪಾಟೀಲ್ ಬೆಂಬಲ ಸೂಚಿಸಿದರು.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟಿಟಿ ಕುರಿತು ಹೇಳಿಕೆಗೆ ಬಿಸಿ ಪಾಟೀಲ್ ಪ್ರತಿಕ್ರಿಯೆಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟಿಟಿ ಕುರಿತು ಹೇಳಿಕೆಗೆ ಬಿಸಿ ಪಾಟೀಲ್ ಪ್ರತಿಕ್ರಿಯೆ

  ರಾಯಭಾರಿ ಜವಾಬ್ದಾರಿ ಹಿಂತೆಗೆಯುವ ನಿರ್ಧಾರ ಇಲ್ಲ

  ರಾಯಭಾರಿ ಜವಾಬ್ದಾರಿ ಹಿಂತೆಗೆಯುವ ನಿರ್ಧಾರ ಇಲ್ಲ

  ನಟ ದರ್ಶನ್ ಅವರು ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ. ಈಗ ಹಲ್ಲೆ ಆರೋಪಗಳು ಬಂದಿರುವ ಹಿನ್ನಲೆ ಆ ಸ್ಥಾನದಿಂದ ಕೆಳಗಿಳಿಸಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿ ಪಾಟೀಲ್, ''ಅಂತಹ ಯಾವುದೇ ನಿರ್ಧಾರ ಇಲ್ಲ. ದರ್ಶನ್ ಸಹ ಅಂತಹ ಯಾವ ಕೆಲಸವೂ ಮಾಡಿಲ್ಲ'' ಎಂದರು.

  ಇಂದ್ರಜಿತ್ ಲಂಕೇಶ್ ಕೊಟ್ಟ ದೂರಿನಲ್ಲಿ ಏನಿದೆ? | Filmibeat Kannada
  ದರ್ಶನ್ ಜೊತೆ ಬಿಸಿ ಪಾಟೀಲ್ ಉತ್ತಮ ಬಾಂಧವ್ಯ

  ದರ್ಶನ್ ಜೊತೆ ಬಿಸಿ ಪಾಟೀಲ್ ಉತ್ತಮ ಬಾಂಧವ್ಯ

  ಕೃಷಿ ಸಚಿವ ಬಿಸಿ ಪಾಟೀಲ್ ಜೊತೆ ನಟ ದರ್ಶನ್ ಉತ್ತಮ ಒಡನಾಟ ಹೊಂದಿದ್ದಾರೆ. ಆ ಕಾರಣದಿಂದಲೇ ಕೃಷಿ ಇಲಾಖೆಗೆ ಡಿ ಬಾಸ್ ರಾಯಭಾರಿ ಜವಾಬ್ದಾರಿ ಸಿಕ್ಕಿದ್ದು. ದರ್ಶನ್ ಅವರ ತೋಟಕ್ಕೆ ಖುದ್ದು ಬಿಸಿ ಪಾಟೀಲ್ ಹಲವು ಬಾರಿ ಭೇಟಿ ನೀಡಿದ್ದರು. ಬಿಸಿ ಪಾಟೀಲ್ ನಿವಾಸಕ್ಕೆ ದರ್ಶನ್ ಭೇಟಿ ನೀಡಿದ್ದರು.

  English summary
  Karnataka Agriculture Minister BC Patil React About Darshan Controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X