For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಫಾರಂ ಹೌಸ್‌ಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ್

  |

  ನಟ ದರ್ಶನ್ ಅವರ ಮೈಸೂರಿನ ಫಾರಂ ಹೌಸ್‌ ಗೆ ಇಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿದ್ದರು.

  ಫಾರಂ ಹೌಸ್‌ಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್ ಅವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನಟ ದರ್ಶನ್, ಫಾರಂ ಹೌಸ್ ಅನ್ನು ತೋರಿಸಿದ್ದಾರೆ.

  ಫಾರಂ ಹೌಸ್ ಅನ್ನು ಸುತ್ತುಹಾಕಿದ ಬಿ.ಸಿ.ಪಾಟೀಲ್, ದರ್ಶನ್ ಹೇಗೆ ವೈಜ್ಞಾನಿಕವಾಗಿ ಫಾರಂ ಹೌಸ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂಬುದನ್ನು ನೋಡಿ ಅಭಿನಂದಿಸಿದರು.

  ಈ ಹಿಂದೆ ಸಹ ಸಚಿವ ಬಿ.ಸಿ.ಪಾಟೀಲ್ ಅವರು ದರ್ಶನ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ದರ್ಶನ್ ಹಾಗೂ ಬಿ.ಸಿ.ಪಾಟೀಲ್ ಅವರುಗಳು ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆ.

  ಬಿ.ಸಿ.ಪಾಟೀಲ್ ಮಾತ್ರವೇ ಅಲ್ಲದೆ ಹಲವಾರು ರಾಜಕಾರಣಿಗಳೊಟ್ಟಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ ನಟ ದರ್ಶನ್. ದರ್ಶನ್ ಭೇಟಿಗೆ ಹಲವು ರಾಜಕಾರಣಿಗಳು ಬರುತ್ತಲಿರುತ್ತಾರೆ. ಉಪಚುನಾವಣೆ ಸಮಯದಲ್ಲಿ ಮುನಿರತ್ನ ಪರವಾಗಿ ಪ್ರಚಾರವನ್ನೂ ಮಾಡಿದ್ದರು ನಟ ದರ್ಶನ್.

  ದರ್ಶನ್ ಫಾರ್ಮ್ ಹೌಸ್ ನೋಡಿ BC ಪಾಟೀಲ್ ಫುಲ್ ಹ್ಯಾಪಿ | Filmibeat Kannada

  ಮೈಸೂರಿನಲ್ಲಿ ಫಾರಂ ಹೌಸ್ ಹೊಂದಿರುವ ನಟ ದರ್ಶನ್ ಹಲವು ಪ್ರಾಣಿಗಳನ್ನು ಸಾಕಿದ್ದಾರೆ. ಹಸು, ಎತ್ತು, ಕುರಿ, ಮೇಕೆ, ಮೊಲ, ಕೋಳಿ, ಕುದುರೆಗಳು ಇನ್ನೂ ಹಲವು ರೀತಿಯ ಪ್ರಾಣಿಗಳು ದರ್ಶನ್ ಅವರ ಫಾರಂ ಹೌಸ್.

  English summary
  Agriculture minister BC Patil visited Darshan's farm house today. They both have good friendship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X