For Quick Alerts
  ALLOW NOTIFICATIONS  
  For Daily Alerts

  ನಿರ್ಮಾಣ ಸಂಸ್ಥೆಯಿಂದ ರಿಜೆಕ್ಟ್ ಆಗಿತ್ತು ರಜನಿ - ಶಂಕರ್ ಸಿನಿಮಾ

  |

  ಶಂಕರ್ ಭಾರತ ಚಿತ್ರರಂಗದ ಶಕ್ತಿಶಾಲಿ ನಿರ್ದೇಶಕರಲ್ಲಿ ಒಬ್ಬರು. ರಜನಿಕಾಂತ್ ಇಂಡಿಯನ್ ಸ್ಕ್ರೀನ್ ನ ಸೂಪರ್ ಸ್ಟಾರ್. ಹೀಗಿದ್ದರೂ, ಇವರಿಬ್ಬರ ಸಿನಿಮಾ ರಿಜೆಕ್ಟ್ ಆಗುತ್ತಂತೆ.

  ಶಂಕರ್ ಮತ್ತು ರಜನಿಕಾಂತ್ ಕಾಂಬಿನೇಶನ್ ನಲ್ಲಿ ಇದುವರೆಗೆ ಮೂರು ಸಿನಿಮಾಗಳು ಬಂದಿದೆ. ಇವುಗಳಲ್ಲಿ ಲೇಟೆಸ್ಟ್ ಆಗಿ ಬಿಡುಗಡೆಯಾದ ಸಿನಿಮಾ '2.೦'. ಇದೇ ಸಿನಿಮಾ ಒಂದು ನಿರ್ಮಾಣ ಸಂಸ್ಥೆಯಿಂದ ಈ ಹಿಂದೆ ರಿಜೆಕ್ಟ್ ಆಗಿತಂತೆ.

  ಸಂಭಾವನೆ ಕುರಿತು 27 ವರ್ಷದ ಹಿಂದೆ ರಜನಿ ಹೇಳಿದ್ದ ಮಾತು ಸಖತ್ ವೈರಲ್

  '2.O' ಸಿನಿಮಾ ತಮಿಳು ಚಿತ್ರರಂಗದ ಘನತೆ ಹೆಚ್ಚಿಸಿದ್ದ ಸಿನಿಮಾ. ತಾಂತ್ರಿಕತೆಯಲ್ಲಿ ಸಿನಿಮಾ ಹೊಸ ಅಧ್ಯಾಯ ಬರೆದಿತ್ತು. ಇಂತಹ ಸಿನಿಮಾ ಮೊದಲು AGS ಪ್ರೊಡಕ್ಷನ್ಸ್ ಹೌಸ್ ರಿಜೆಕ್ಟ್ ಮಾಡಿತ್ತು. ಆ ನಂತರ LYCA ಪ್ರೊಡಕ್ಷನ್ಸ್ ಚಿತ್ರದ ನಿರ್ಮಾಣಕ್ಕೆ ಮುಂದಾಯಿತು.

  ಮೊದಲು '2.O' ಚಿತ್ರದ ನಿರ್ಮಾಣಕ್ಕಾಗಿ AGS ಪ್ರೊಡಕ್ಷನ್ಸ್ ಹೌಸ್ ಅನ್ನು ನಿರ್ದೇಶಕ ಶಂಕರ್ ಮತ್ತು ನಟ ರಜನಿಕಾಂತ್ ಸಂಪರ್ಕ ಮಾಡಿದ್ದರು. ಚಿತ್ರದ ಬಜೆಟ್ 250 ಕೋಟಿ ಆಗಲಿದೆ ಎಂದು ತಿಳಿಸಿದ್ದರು. ಆದರೆ, AGS ಪ್ರೊಡಕ್ಷನ್ಸ್ ಹೌಸ್ 150 ಕೋಟಿವರೆಗೆ ಬಂಡವಾಳ ಹಾಕಲು ಮಾತ್ರ ರೆಡಿ ಇತ್ತು.

  ಚೀನಾದಲ್ಲಿ ರಜನಿಕಾಂತ್ ಚಿತ್ರಕ್ಕೆ ಭಾರಿ ಮುಖಭಂಗ

  ಮಾತುಕತೆಗಳ ನಂತರ ಡಿಲ್ ಓಕೆ ಆಗದೆ ಇದ್ದ ಕಾರಣ, ಈ ಸಿನಿಮಾವನ್ನು AGS ಪ್ರೊಡಕ್ಷನ್ಸ್ ಹೌಸ್ ರಿಜೆಕ್ಟ್ ಮಾಡಿತ್ತು. ಅಂದಹಾಗೆ, '2.O' ಸಿನಿಮಾದ ಈ ಕುತೂಹಲಕಾರಿ ವಿಷಯ ಇತ್ತೀಚಿಗಷ್ಟೆ ತಿಳಿದುಬಂದಿದೆ.

  English summary
  AGS production house rejected Shankar and Rajinikanth '2.0' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X