Don't Miss!
- Sports
IND vs NZ 2nd T20: ಭಾರತ vs ನ್ಯೂಜಿಲೆಂಡ್ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- News
ಫೇಸ್ಬುಕ್ ಪ್ರೀತಿ: ಉತ್ತರ ಪ್ರದೇಶದ ಯುವಕನನ್ನು ಮದುವೆಯಾಗಲು ಸ್ವೀಡನ್ನಿಂದ ಬಂದ ಯುವತಿ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಂದನ್ ಶೆಟ್ಟಿಯನ್ನು ಏಕವಚನದಲ್ಲಿ ನಿಂದಿಸಿದ ಅಹೋರಾತ್ರ: ಕಾರಣ ಏನು?
ಅಹೋರಾತ್ರ ಈ ಹೆಸರು ನಿಮಗೆ ಪರಿಚಯ ಇರಬಹುದು. ಇಲ್ಲದೇನು ಇರ ಬಹುದು. ಕಳೆದ ಬಾರಿ ನಟ ಸುದೀಪ್ ಬಗ್ಗೆ ಮಾತನಾಡಿದಾಗಲೇ ಈ ವ್ಯಕ್ತಿ ಯಾರು ಎನ್ನುವುದು ಹಲವರಿಗೆ ಗೊತ್ತಾಗಿದ್ದು. ನಟ ಸುದೀಪ್ ವಿಚಾರದಲ್ಲಿ ಏನೇನೋ ಮಾತನಾಡಿ ಸುದ್ದಿ ಆಗಿದ್ದರು. ಈಗ ಮತ್ತೆ ಅಹೋರಾತ್ರ ಹೆಸರು ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಚಂದನ್ ಶೆಟ್ಟಿ. ಈ ಹಿಂದೆ ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದ ರಮ್ಮಿ ಜಾಹೀರಾತು.
ಹೌದು, ಇದ್ದಕ್ಕಿದ್ದ ಹಾಗೆ ಚಂದನ್ ಶೆಟ್ಟಿಯನ್ನು ನಿಂದಿಸಿ ವಿಡಿಯೋ ಒಂದನ್ನು ಹರಿ ಬಿಟ್ಟಿದ್ದಾರೆ ಅಹೋರಾತ್ರ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಂದನ್ ಶೆಟ್ಟಿ ಜೊತೆಗೆ ನಿವೇದಿತಾ ಗೌಡ ಬಗ್ಗೆಯೂ ಈ ವಿಡಿಯೋದಲ್ಲಿ ಮಾತನಾಡಲಾಗಿದೆ.
Niveditha
Gowda:
ನಿವೇದಿತಾ
ಗೌಡ
ಕರೆಗೆ
ಬೆದರಿ
ಚಂದನ್
ಶೆಟ್ಟಿ
ಓಡಿ
ಬಂದಿದ್ದೇಕೆ?
ಚಂದನ್ ಶೆಟ್ಟಿ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯೂಸಿ ಆಗಿದ್ದಾರೆ. ಆದರೆ ಇದ್ದಕ್ಕಿದ್ದ ಹಾಗೆ ಅಹೋರಾತ್ರ ಚಂದನ್ ಶೆಟ್ಟಿ ವಿಡಿಯೋ ಮಾಡಿ, ವಿಡಿಯೋದಲ್ಲಿ ಚಂದನ್ ಶೆಟ್ಟಿಯನ್ನು ನಿಂದಿಸಿ ಫೇಸ್‌ಬುಕ್‌ನಲ್ಲಿ ಹರಿ ಬಿಟ್ಟಿದ್ದಾರೆ. ಇದಕ್ಕೆ ಸಾಕಷ್ಟು ಪರ ವಿರೋಧ ಕಮೆಂಟ್‌ಗಳು ಬಂದಿವೆ.
ಚಂದನ್ ಶೆಟ್ಟಿ ನಿಂದಿಸಿ ಅಹೋರಾತ್ರ ವಿಡಿಯೋ!
ವಿಡಿಯೋದಲ್ಲಿ ಅಹೋರಾತ್ರ ಹೇಳಿದ್ದು ಹೀಗೆ. "ಹೇ ಚಂದನ್ ಶೆಟ್ಟಿ ಇತ್ತೀಚೆಗೆ ಮದುವೆ ಆಗಿದ್ದೀಯಾ, ಮದುವೆ ಆಗಿರೋ ಗಂಡಸು, ಗಂಡಸು ತರ ಬದುಕಬೇಕು. ಹೆಂಡತಿ ಮುಂದೆ ತಲೆ ಎತ್ತಿ ನಿಲ್ಲೋ ತರ ಬದುಕಬೇಕು. ನಾನು ಜೂಜು ಆಡಿಸಿದ್ದೀನಿ. ಅದರಿಂದ ಜನ ಸಾಯುತ್ತಾರೆ. ಅವರು ರಕ್ತ ಹರಿಸಿ, ದುಡಿದಿರುವ ಹಣ ಅದು. ಅದನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆ ದುಡ್ಡಲ್ಲಿ ನಿನಗೆ ನೆಕ್ಲೆಸ್ ತಂದಿದ್ದೀನಿ ಅಂತ ಯಾವ ಮುಖ ಇಟ್ಟುಕೊಂಡು ಹೇಳುತ್ತೀರೊ." ಎಂದು ವಿಡಿಯೋದಲ್ಲಿ ಕಿಡಿಕಾರಿದ್ದಾರೆ.
Niveditha
Gowda:
ಸಿಹಿ
ಸುದ್ದಿ;
ತಂದೆ,
ತಾಯಿ
ಆಗ್ತಿದ್ದಾರೆ
ನಿವೇದಿತಾ
ಗೌಡ,
ಚಂದನ್
ಶೆಟ್ಟಿ!

ಚಂದನ್ ಶೆಟ್ಟಿ ಕುಟುಂಬದ ಬಗ್ಗೆಯೂ ಅಹೋರಾತ್ರ ಕಿಡಿ!
"ತಲೆ ಹರಟೆಗಳು ಇದು ಒಳ್ಳೆಯದಲ್ಲ, ಹೇಳಿದಷ್ಟು ಹೆಚ್ಚು ಮಾಡುತ್ತಾ ಇದ್ದೀರಲ್ಲಾ ನೀವು. ಜುಜಾಡಿ ಅಂತ ಕರ್ನಾಟಕದ ಜನರನ್ನು ಹಾಳು ಮಾಡುತ್ತಿದ್ದೀರ ನೀವು. ಜೂಜಾಡಿ ಜೂಜಾಡಿ ಅಂತ ಸಾಯ್ತಾ ಇದ್ದಿರಲ್ಲಾ ನೀವು. ಇದು ಒಳ್ಳೆಯದಲ್ಲ." ಎಂದು ತಮ್ಮ ವಿಡಿಯೋ ಮೂಲಕ ಅಹೋರಾತ್ರ ಕಿಡಿ ಕಾರಿದ್ದಾರೆ. ಇದಕ್ಕೆ ನೆಟ್ಟಿಗರು ಅಹೋರಾತ್ರನನ್ನು ಪ್ರಶ್ನೆ ಮಾಡಿದ್ದಾರೆ.

ಇದ್ದಕ್ಕಿದ್ದ ಹಾಗೆ ವಿಡಿಯೋ ವೈರಲ್!
ಚಂದನ್ ಶೆಟ್ಟಿ ಈ ಹಿಂದೆ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅಹೋರಾತ್ರ ಈ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈಗ ಯಾಕೆ ಈ ವಿಡಿಯೋ ವೈರಲ್ ಆಗುತ್ತಿದೆ. ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಅಥವಾ ಇದು ಈ ಹಿಂದೆ ಹರಿ ಬಿಟ್ಟಿದ್ದ ವಿಡಿಯೋನಾ ಎನ್ನುವುದು ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಈ ಬಗ್ಗೆ ಚಂದನ್ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಧ್ರುವ ಸರ್ಜಾನನ್ನು ಹೊಗಳಿದ ಅಹೋರಾತ್ರ!
ಇನ್ನು ವಿಡಿಯೋದಲ್ಲಿ ಮಾತನಾಡುತ್ತಾ ಅಹೋರಾತ್ರ ನಟ ಧ್ರುವ ಸರ್ಜಾ ಬಗ್ಗೆ ಕೂಡ ಮಾತನಾಡಿದ್ದಾರೆ. ಧ್ರುವ ಬಾಡಿ ಬಿಲ್ಡಿಂಗ್ ಬಗ್ಗೆ ಮಾತನಾಡಿದ್ದು, ಪ್ಯಾನ್ ಇಂಡಿಯಾ ಅಲ್ಲ ಇಂಟರ್‌ನ್ಯಾಷನಲ್ ಸಿನಿಮಾ ಮಾಡುವಂತೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ ನಿಮ್ಮ ಗ್ಯಾಂಗ್‌ನಿಂದ ಚಂದನ್ ಶೆಟ್ಟಿಯನ್ನು ಹೊರಹಾಕು ಅಂತಾನೂ ಹೇಳಿದ್ದಾರೆ. ಚಂದನ್ ಶೆಟ್ಟಿ ಬಗ್ಗೆ ಅಹೋರಾತ್ರ ಇದ್ದಕ್ಕಿದ್ದ ಹಾಗೆ ಇಷ್ಟೆಲ್ಲಾ ಟೀಕೆ ಮಾಡಿರೋದ್ಯಾಕೆ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ.