»   » ನಟಿ ಐಂದ್ರಿತಾ ರೇಗೆ ಹುಟ್ಟುಹಬ್ಬ ತಂದ ಕಿರಿಕಿರಿ..!

ನಟಿ ಐಂದ್ರಿತಾ ರೇಗೆ ಹುಟ್ಟುಹಬ್ಬ ತಂದ ಕಿರಿಕಿರಿ..!

Posted By:
Subscribe to Filmibeat Kannada

ನಟಿ ಐಂದ್ರಿತಾ ರೇ ಗೆ ನಿನ್ನೆ (ಏಪ್ರಿಲ್ 4)ರಂದು ಹುಟ್ಟುಹಬ್ಬದ ಸಂಭ್ರಮ. 30ನೇ ವಸಂತಕ್ಕೆ ಕಾಲಿಟ್ಟಿರುವ ಐಂದ್ರಿತಾಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಐಂದ್ರಿತಾ ಬರ್ತಡೆಯನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು.

ಆದ್ರೆ ವಾಸ್ತವ ಏನಂದ್ರೆ, ಐಂದ್ರಿತಾ ಹುಟ್ಟುಹಬ್ಬ ನಿನ್ನೆ ಅಲ್ಲ. ಬದಲಾಗಿ ಏಪ್ರಿಲ್ 16 ರಂದು. ವಿಕಿಪೀಡಿಯಾ ಮತ್ತು ಇತರ ಜಾಲತಾಣಗಳಲ್ಲಿ ಐಂದ್ರಿತಾ ಬರ್ತಡೆ ಏಪ್ರಿಲ್ 4 ರಂದು ಅಂತ ತಪ್ಪಾಗಿ ದಾಖಲಾಗಿರುವುದರಿಂದ ಅನೇಕ ಅಭಿಮಾನಿಗಳು ಅದನ್ನ ನಂಬಿ ಹುಟ್ಟುಹಬ್ಬ ಆಚರಿಸಿದರು.

Aindrita Ray clarifies confusion regarding her birthday

ಬರ್ತಡೆಗೆ ಇನ್ನೂ ಹನ್ನೆರಡು ದಿನಗಳು ಇರುವ ಮುನ್ನವೇ ಶುಭಾಶಯಗಳು ಶುರುವಾಗಿದ್ದಕ್ಕೆ, ಕನ್ಫ್ಯೂಷನ್ ನಿಲ್ಲಲಿ ಅಂತ ಐಂದ್ರಿತಾ, ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹುಟ್ಟುಹಬ್ಬದ ದಿನಾಂಕವನ್ನ ಸ್ಪಷ್ಟಪಡಿಸಿದ್ದಾರೆ.

''ಮುಂಚಿತವಾಗಿ ಶುಭಾಶಯಗಳನ್ನ ಕೋರಿರುವ ಎಲ್ಲರಿಗೂ ಧನ್ಯವಾದಗಳು. ಆದ್ರೆ, ನನ್ನ ಹುಟ್ಟುಹಬ್ಬ ಇದೇ ತಿಂಗಳ 16 ರಂದು. ವಿಕಿ ಮತ್ತು ಗೂಗಲ್ ನಲ್ಲಿರುವ ನನ್ನ ಫೇಕ್ ಪ್ರೊಫೈಲ್ ಗಳಲ್ಲಿ ತಪ್ಪಾಗಿದೆ'' ಅಂತ ಐಂದ್ರಿತಾ ರೇ ಟ್ವೀಟ್ ಮಾಡಿದ್ದಾರೆ. [ದಿಗಂತ್ ಜೊತೆ ಐಂದ್ರಿತಾ ಕಬಡ್ಡಿ ಆಟ ನೋಡಿ]

ಆ ಮೂಲಕ ಎಲ್ಲಾ ಕನ್ಫ್ಯೂಷನ್ ಗೆ ಬ್ರೇಕ್ ಹಾಕಿರುವ ಐಂದ್ರಿತಾ, ತಮ್ಮ ಬಿಜಿ ಶೆಡ್ಯೂಲ್ ನಲ್ಲಿ ಈ ಕಿರಿಕಿರಿಯಿಂದ ತಪ್ಪಿಸಿಕೊಂಡಿದ್ದಾರೆ. ಅಂದ್ಹಾಗೆ, ಐಂದ್ರಿತಾ ಈಗ ಬೆಂಗಾಲಿ ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ. 'ಬಚ್ಚನ್' ಅನ್ನುವ ಬೆಂಗಾಲಿ ಸಿನಿಮಾದಲ್ಲಿ ಐಂದ್ರಿತಾ ಅಭಿನಯಿಸುತ್ತಿದ್ದಾರೆ.

English summary
Many of Actress Aindrita Ray's fans celebrated her birthday yesterday as few websites including Wikipedia mentioned her birthday on April 4th. But the reality is, Aindrita's birthday on April 16th. The Actress clarified this on her twitter account.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X