For Quick Alerts
  ALLOW NOTIFICATIONS  
  For Daily Alerts

  ನಟಿ ಐಂದ್ರಿತಾ ರೇ ಕೊಟ್ಟ ಏಟಿಗೆ ಕನ್ನಡ ಚಿತ್ರರಂಗದವರ ತಿರುಗೇಟು.!

  By Harshitha
  |

  ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ತೀರಾ ಅಪರೂಪ ಆಗಿರುವ ನಟಿ ಐಂದ್ರಿತಾ ರೇ, ನಿನ್ನೆ ನಡೆದ 'ನಿರುತ್ತರ' ಸುದ್ದಿಗೋಷ್ಠಿಯಲ್ಲಿ ಕನ್ನಡ ಚಿತ್ರರಂಗದ ಕಠೋರ ಸತ್ಯವನ್ನು ಬಾಯ್ಬಿಟ್ಟರು.

  ''ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ನಾಯಕರಿಗೆ ಸಿಗುವ ಸಂಭಾವನೆಯಲ್ಲಿ ಕೇವಲ 5% ನಷ್ಟು ನಾಯಕಿಯರಿಗೆ ಕೊಡುವುದಿಲ್ಲ. ಕ್ಯಾರಾವ್ಯಾನ್ ಸೌಲಭ್ಯ ಕೂಡ ಇಲ್ಲ. ಮರದ ಕೆಳಗೆ ನಾನು ಬಟ್ಟೆ ಬದಲಾಯಿಸಿದ್ದೇನೆ. ಹೀಗಾಗಿ ನಾನು ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ'' ಎಂದರು 'ಮನಸಾರೆ' ಬೆಡಗಿ.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

  ತಮಗಾದ ಕರಾಳ ಅನುಭವದ ಬಗ್ಗೆ ಮಾಧ್ಯಮಗಳ ಮುಂದೆ ನಟಿ ಐಂದ್ರಿತಾ ರೇ ಮನಬಿಚ್ಚಿ ಮಾತನಾಡುತ್ತಿದ್ದಂತೆ, ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು, ನಾಯಕ ನಟಿಯರು ಕಣ್ಣು ಕೆಂಪಗೆ ಮಾಡಿಕೊಂಡು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.[ಐಂದ್ರಿತಾಗೂ ಮೊದಲೇ ಸ್ಯಾಂಡಲ್ ವುಡ್ ಬಗ್ಗೆ ಉರಿದುಬಿದ್ದಿದ್ದ ರಮ್ಯಾ.!]

  ಬನ್ನಿ, ಯಾರೆಲ್ಲಾ ಏನು ಹೇಳಿದ್ದಾರೆ ಅಂತ ನೋಡೋಣ ಕೆಳಗಿರುವ ಸ್ಲೈಡ್ ಗಳಲ್ಲಿ....

  ನಿರ್ದೇಶಕಿ ರೂಪಾ ಐಯ್ಯರ್

  ನಿರ್ದೇಶಕಿ ರೂಪಾ ಐಯ್ಯರ್

  ''ಹೀರೋಗೆ ಕಂಪೇರ್ ಮಾಡಿಕೊಳ್ಳುವುದು ಯಾಕೆ? ಮಹಿಳಾ ಪ್ರಧಾನ ಚಿತ್ರ ಬಂದಾಗ ಹೀರೋಯಿನ್ ಗೆ ಹೆಚ್ಚು ಪೇಮೆಂಟ್ ಕೊಡ್ತಾರಲ್ಲಾ? ಅವರವರ ಕೆಲಸಕ್ಕೆ ತಕ್ಕಂತೆ ಪೇಮೆಂಟ್ ಕೊಡ್ತಾರೆ. ಇಷ್ಟ ಇದ್ರೆ ಕೆಲಸ ಮಾಡ್ಬೇಕು, ಇಲ್ಲಾ ಅಂದ್ರೆ ಒಪ್ಪಿಕೊಳ್ಳಲೇ ಬಾರದು. ನಾನು ನನ್ನ 'ಚಂದ್ರ' ಸಿನಿಮಾಗೆ ಹೀರೋಯಿನ್ ಗೆ ಹೆಚ್ಚು ಸಂಭಾವನೆ ಕೊಟ್ಟಿದ್ದೇನೆ''

  ನಿರ್ದೇಶಕ ಪ್ರಶಾಂತ್ ರಾಜ್

  ನಿರ್ದೇಶಕ ಪ್ರಶಾಂತ್ ರಾಜ್

  ''ಸಂಭಾವನೆ ವಿಚಾರದಲ್ಲಿ ದೊಡ್ಡ ದೊಡ್ಡ ನಟರೂ ಕೂಡ ತಾರತಮ್ಯ ಎದುರಿಸಿದ್ದಾರೆ. ನಾಯಕಿಯರಿಗೆ ನಟರಿಗೆ ನೀಡುವಷ್ಟು ಸರಿಸಮಾನವಾಗಿ ಸಂಭಾವನೆ ಕೊಡುವುದಿಲ್ಲ ನಿಜ. ಟಾಪ್ ಹೀರೋಯಿನ್ ಗಳಿಗೆ ಹೆಚ್ಚು ಸಂಭಾವನೆ ನೀಡುತ್ತಾರೆ ಅಷ್ಟೆ. ಇಂಡಸ್ಟ್ರಿ ಫಾರ್ಮುಲಾ ಇರುವುದೇ ಹಾಗೇ. ಬಾಲಿವುಡ್ ನಲ್ಲೂ ಅಷ್ಟೆ, ಶಾರುಖ್ ಖಾನ್ ಗೆ ಸಿಗುವಷ್ಟು ಸಂಭಾವನೆ ದೀಪಿಕಾ ಪಡುಕೋಣೆಗೆ ಸಿಗುವುದಿಲ್ಲ. ಇನ್ನೂ ಸೌಕರ್ಯಗಳ ಬಗ್ಗೆ ಪ್ರೊಡಕ್ಷನ್ ಕಂಪನಿ ನೋಡಿಕೊಂಡು ಸಿನಿಮಾ ಒಪ್ಪಿಕೊಂಡರೆ ಒಳ್ಳೆಯದ್ದು''

  ನಿರ್ದೇಶಕ ಶಶಾಂಕ್

  ನಿರ್ದೇಶಕ ಶಶಾಂಕ್

  ''ಐಂದ್ರಿತಾ ರೇ ಹಾಗೆ ಮಾತನಾಡಿದ್ದಾರೆ ಅಂದ್ರೆ ನನಗೆ ನಂಬೋಕೆ ಆಗಲ್ಲ. ಅವರು ಸ್ಟಾರ್ ನಟಿ. ಸ್ಟಾರ್ ಗಳಿಗೆ ಸೌಕರ್ಯ ಇಲ್ಲ ಅಂದ್ರೆ, ಅವರು ಸೆಟ್ ನಲ್ಲಿ ಇರುವುದೇ ಇಲ್ಲ''

  ಸುಷ್ಮಾ ವೀರ್

  ಸುಷ್ಮಾ ವೀರ್

  ''ಹೀರೋಗಳಿಗೆ Physical Strength ಜಾಸ್ತಿ ಬೇಕು. ಸ್ಟಂಟ್ ಮಾಡಲು ಹೆಚ್ಚು ದಿನ ಪ್ರ್ಯಾಕ್ಟೀಸ್ ಬೇಕಾಗುತ್ತೆ. ಅದಕ್ಕೆ ಅವರ ಸಂಭಾವನೆ ಹೆಚ್ಚಿರಬಹುದು. ದಿನಗಳ ವರಮಾನದಲ್ಲಿ ಲೆಕ್ಕಾಚಾರ ಇದೆ ಹೀರೋ ಹಾಗೂ ಹೀರೋಯಿನ್ ಗಳ ಮಧ್ಯೆ''

  ಸುಷ್ಮಾವೀರ್

  ಸುಷ್ಮಾವೀರ್

  ''ವಿಜಯಶಾಂತಿ, ರೇಖಾ, ಮಾಲಾಶ್ರೀ ರವರ ಸಂಭಾವನೆ ಹೀರೋಗಳಿಗಿಂತ ಹೆಚ್ಚು. ಹೀಗಾಗಿ ತಾರತಮ್ಯ ಅನ್ನೋದು ಇಲ್ಲಾ''

  ನಿರ್ಮಾಪಕ ಎನ್.ಎಂ.ಸುರೇಶ್

  ನಿರ್ಮಾಪಕ ಎನ್.ಎಂ.ಸುರೇಶ್

  ''ಕನ್ನಡ ಚಿತ್ರರಂಗದಲ್ಲಿ ನಾವು ನಾಯಕಿಯರಿಗೆ ಕೊಡುವಷ್ಟು ಬೆಲೆ ಯಾರೂ ಕೊಡುವುದಿಲ್ಲ. ಐಂದ್ರಿತಾ ರೇ ಆಡಿರುವ ಮಾತು ತಪ್ಪು. ನಾನು ಅದಕ್ಕೆ ಖಂಡಿಸುತ್ತೇನೆ''

  ನಿರ್ಮಾಪಕ ಉಮೇಶ್ ಬಣಕರ್

  ನಿರ್ಮಾಪಕ ಉಮೇಶ್ ಬಣಕರ್

  ''ಸೌಲಭ್ಯಗಳ ವಿಚಾರದಲ್ಲಿ ಐಂದ್ರಿತಾ ರೇ ಆಡಿರುವ ಮಾತು ಒಪ್ಪಿಕೊಳ್ಳುತ್ತೇನೆ. ಒಕ್ಕೂಟದ ಮೀಟಿಂಗ್ ನಡೆದಾಗ ಕಲಾವಿದರಿಗಾಗಿ ಒಂದು ಕ್ಯಾರಾವ್ಯಾನ್ ಕೊಡಲೇಬೇಕು ಎಂಬ ನಿರ್ಣಯ ಆಗಿದೆ. ಯಾವುದೋ ಒಂದು ವಿಚಾರ ಇಟ್ಕೊಂಡು ಇಡೀ ಇಂಡಸ್ಟ್ರಿಯನ್ನ ಕೆಟ್ಟದಾಗಿ ಬಿಂಬಿಸುವುದು ತಪ್ಪು''

  'ಭಜರಂಗಿ' ನಿರ್ಮಾಪಕ ಮಂಜುನಾಥ್

  'ಭಜರಂಗಿ' ನಿರ್ಮಾಪಕ ಮಂಜುನಾಥ್

  ''ಐಂದ್ರಿತಾ ಮಾಡುತ್ತಿರುವ ಆರೋಪದಲ್ಲಿ ಅರ್ಥ ಇಲ್ಲ. ನಾಯಕನಿಗೆ ಕೊಡುವಷ್ಟು ಸಂಭಾವನೆ ನಾಯಕಿಗೆ ಕೊಡಲು ಸಾಧ್ಯವಿಲ್ಲ. 'ಭಜರಂಗಿ' ಸಿನಿಮಾದಲ್ಲಿ ಅವರು ಕೇಳಿದ ಸಂಭಾವನೆ ನಾನು ನೀಡಿದ್ದೇನೆ''

  ಎಸ್.ನಾರಾಯಣ್

  ಎಸ್.ನಾರಾಯಣ್

  ''ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಾಯಕಿಯರಿಗೆ ಗೌರವ ಕೊಟ್ಟಿದ್ದೇವೆ. ಅವರಿಗೆ ಯಾವುದೋ ಕೆಟ್ಟ ಅನುಭವ ಆಗಿರ್ಬೇಕು, ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ''

  English summary
  Kannada Producer NM Suresh, Manjunath, Director S.Narayan, Roopa Iyer, Shashank and Prashanth raj have expressed their opinion on Actress Aindrita Ray's displeasure over Gender gap for remuneration in Kannada Film Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X