ಟಿಕ್‌ಟಾಕ್‌ಗೆ ಬಂದರು ಐಂದ್ರಿತಾ ರೇ: ಮೊದಲ ವಿಡಿಯೋದಲ್ಲೇ ಮಾದಕ ನೃತ್ಯ
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಬೆಂಗಾಲಿ ಬೆಡಗಿ ಐಂದ್ರಿತಾ ರೇ, ಈಗ ಟಿಕ್‌ಟಾಕ್‌ಗೂ ಕಾಲಿಟ್ಟಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯವಾಗುತ್ತಿರುವ ಟಿಕ್‌ಟಾಕ್ ಅನ್ನು ಪ್ರತಿ ತಿಂಗಳೂ 120 ಮಿಲಿಯನ್‌ಗೂ ಅಧಿಕ ಬಳಕೆದಾರರು ಉಪಯೋಗಿಸುತ್ತಿದ್ದಾರೆ. ಅದಕ್ಕೀಗ ಐಂದ್ರಿತಾ ರೇ ಲೇಟೆಸ್ಟ್ ಎಂಟ್ರಿ ಕೊಟ್ಟಿದ್ದಾರೆ.
Recommended Video
ಆಸ್ಟ್ರೇಲಿಯಾದ ಗಾಯಕಿ ಟೋನ್ಸ್ ಆಂಡ್ ಐ ಹಾಡಿರುವ 'ಮಂಕಿ ಡ್ಯಾನ್ಸ್' ಹಾಡಿಗೆ ಐಂದ್ರಿತಾ ರೇ ಮಾದಕವಾಗಿ ನರ್ತಿಸಿದ್ದಾರೆ. ಈ ಮೂಲಕ ಟಿಕ್‌ಟಾಕ್‌ಗೆ ಎಂಟ್ರಿ ಕೊಟ್ಟು ಮೊದಲ ಬಾರಿಗೆ ಕಾಣಿಸಿಕೊಂಡ ಖುಷಿಯನ್ನು ಇನ್‌ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
'ಕೊನೆಗೂ ಟಿಕ್‌ಟಾಕ್‌ಗೆ ಬಂದಿದ್ದೇನೆ. ಟಿಕ್‌ಟಾಕ್‌ಗೆ ಬಂದು ನನ್ನ ಜತೆ ಸೇರಿಕೊಳ್ಳಿ. ಸಿಲ್ಲಿ ಕೆಲಸಗಳನ್ನು ಒಟ್ಟಿಗೆ ಮಾಡೋಣ. ಟಿಕ್‌ಟಾಕ್‌ನಲ್ಲಿ ನನ್ನನ್ನು ಫಾಲೋ ಮಾಡಿ' ಎಂದು ಅಭಿಮಾನಿಗಳಿಗೆ ಮಲೆನಾಡಿನ ಸೊಸೆ ಐಂದ್ರಿತಾ ರೇ ಆಹ್ವಾನ ನೀಡಿದ್ದಾರೆ.
ನೆರಿಗೆ ಸರಿ ಮಾಡಿದ್ದ ದಿಗಂತ್
ಇತ್ತೀಚೆಗೆ ಇಶಾ ಫೌಂಡೇಷನ್‌ನ ಶಿವರಾತ್ರಿ ಕಾರ್ಯಕ್ರಮಕ್ಕೆ ತೆರಳಿದ್ದ ಐಂದ್ರಿತಾ ಅವರ ಸೀರೆ ನೆರಿಗೆಯನ್ನು ಪತಿ ದಿಗಂತ್ ಸರಿಪಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು. ದಿಗಂತ್ 'ಪಂಚರಂಗಿ' ಚಿತ್ರದಲ್ಲಿ ನಾಯಕಿಗೆ ಸೀರೆ ಉಡಿಸುವ ದೃಶ್ಯವಿತ್ತು. ಆ ಸಿನಿಮಾದ ದೃಶ್ಯವನ್ನು ನೆನಪಿಸಿರುವ ಐಂದ್ರಿತಾ, ಸೀರೆ ಉಡಿಸುವ ದೃಶ್ಯ ಉಪಯೋಗಕ್ಕೆ ಬರುತ್ತಿದೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದರು.
ಹಿಂದಿ ವೆಬ್ ಸೀರೀಸ್‌ನಲ್ಲಿ ಐಂದ್ರಿತಾ
ಮದುವೆ ಬಳಿಕ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿದ್ದ ಐಂದ್ರಿತಾ, ಪ್ರಸ್ತುತ ವೆಬ್ ಸೀರೀಸ್‌ನಲ್ಲಿ ನಟಿಸುತ್ತಿದ್ದಾರೆ. ಹಿಂದಿಯ 'ಕ್ಯಾಸಿನೋ-ಮೈ ಗೇಮ್, ಮೈ ರೂಲ್ಸ್'ನಲ್ಲಿ ಐಂದ್ರಿತಾ ರೇ ಅಭಿನಯಿಸುತ್ತಿದ್ದಾರೆ. ಈ ಸೀರೀಸ್‌ನಲ್ಲಿ ಕರಣ್ ವೀರ್ ಬೋರಾ, ಸುಧಾಂಶು ಪಾಂಡೆ, ಮಂದನಾ ಕರೀಮಿ, ರೋಮಿತ್ ರಾಜ್ ಮುಂತಾದವರು ಕೂಡ ಇದ್ದಾರೆ.

ಮತ್ತೆ ತೆರೆ ಮೇಲೆ ದಿಗಂತ್-ಐಂದ್ರಿತಾ ಜೋಡಿ
'ಮೇಲುಕೋಟೆ ಮಂಜ' ಚಿತ್ರದ ಬಳಿಕ ಐಂದ್ರಿತಾ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಈಗ ಪತ್ರಕರ್ತ ವಿನಾಯಕ ಕೋಡ್ಸರ ನಿರ್ದೇಶನದ ಚಿತ್ರದ ಮೂಲಕ ಪುನಃ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. 'ಮನಸಾರೆ', 'ಪಾರಿಜಾತ'ದಲ್ಲಿ ಜತೆಯಾಗಿ ನಟಿಸಿದ್ದ ದಿಗಂತ್-ಐಂದ್ರಿತಾ ದಂಪತಿ ಮತ್ತೆ ಜೋಡಿಯಾಗಿರುವುದು ಈ ಚಿತ್ರದ ವಿಶೇಷ.

ಸೋಷಿಯಲ್ ಮೀಡಿಯಾದಲ್ಲಿ ಆಂಡಿ ಮಿಂಚು
ಐಂದ್ರಿತಾ ರೇ ಮದುವೆ ಬಳಿಕ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರದೆ ಇದ್ದರೂ ಅಭಿಮಾನಿಗಳಿಂದ ದೂರವಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಒಂದಿಲ್ಲೊಂದು ಅಪ್‌ಡೇಟ್‌ಗಳನ್ನು ನೀಡುತ್ತಿರುತ್ತಾರೆ. ಮದುವೆಯಾದ ಬಳಿಕವೂ ತಾವು ಬದಲಾಗಿಲ್ಲ ಎಂಬ ಸೂಚನೆ ನೀಡುವಂತೆ ಸಾಕಷ್ಟು ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











