For Quick Alerts
  ALLOW NOTIFICATIONS  
  For Daily Alerts

  ನಟಿ ಐಂದ್ರಿತಾ ರೇ ಕೋಪಕ್ಕೆ ಕಾರಣವಾದ ಹೋಟೆಲ್ ಸಿಬ್ಬಂದಿ.!

  By Bharath Kumar
  |

  ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಅವರ ಹೋಟೆಲ್ ವೊಂದರ ವಿರುದ್ಧ ಬೇಸರ ಮಾಡಿಕೊಂಡಿರುವ ಘಟನೆ ನಡೆದಿದೆ. ವಿಮಾನ ನಿಲ್ದಾಣದಲ್ಲಿರುವ 'ಟಿಫೆನ್ ಸೆಂಟರ್ ರೆಸ್ಟೋರೆಂಟ್' ವಿರುದ್ಧ ಐಂದ್ರಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಟ್ವಿಟ್ಟರ್ ನಲ್ಲಿ ಹೋಟೆಲ್ ವಿರುದ್ಧ ಕಿಡಿಕಾರಿರುವ ಐಂದ್ರಿತಾ ಹೋಟೆಲ್ ಗೆ ಹೋಗುವ ಜನರಿಗೆ ಸಿಬ್ಬಂದಿಯವರು ಯಾವುದೇ ರೀತಿಯಲ್ಲಿ ಸಹಕಾರಿಯಾಗುವಂತೆ ವರ್ತಿಸುವುದಿಲ್ಲ. ಉತ್ತಮ ಸೇವೆಯನ್ನ ಒದಗಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

  ಸ್ನೇಹಿತೆ ರಮ್ಯಾ ಹಾದಿಯಲ್ಲೇ ಹೆಜ್ಜೆ ಹಾಕಿದ ಐಂದ್ರಿತಾಸ್ನೇಹಿತೆ ರಮ್ಯಾ ಹಾದಿಯಲ್ಲೇ ಹೆಜ್ಜೆ ಹಾಕಿದ ಐಂದ್ರಿತಾ

  ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಐಂದ್ರಿತಾ ರೇ ''ಟಿಫೆನ್ ಸೆಂಟರ್ ರೆಸ್ಟೋರೆಂಟ್ ಸಿಬ್ಬಂದಿ ತುಂಬ ಅಸಡ್ಡೆಯ ವರ್ತನೆ ತೋರುತ್ತಾರೆ. ಹಣ ನೀಡಿ ಕಾಯುವಂತಾಗಿದೆ. ಇದರಿಂದ ವಿಮಾನಕ್ಕೂ ತಡವಾಗುತ್ತೆ. ವಿಮಾನಕ್ಕೆ ವಿಳಂಬವಾಗಿದ್ದರೂ ತಿಂಡಿ ನೀಡಲು ತಡ ಮಾಡ್ತಾರೆ. ಯಾರೂ ಕೂಡ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ'' ಎಂದು ಆಂಡಿ ಬೇಸರ ವ್ಯಕ್ತಪಡಿಸಿದ್ದಾರೆ.

  ಅಂದ್ಹಾಗೆ, ಇದು ಯಾವ ವಿಮಾನ ನಿಲ್ದಾಣದಲ್ಲಿ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಬಹುಶಃ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರಬಹುದು ಎನ್ನಲಾಗಿದೆ. ಯಾಕಂದ್ರೆ, ಬೇರೆ ದೇಶ ಅಥವಾ ರಾಜ್ಯದ ಏರ್ ಪೋರ್ಟ್ ಆಗಿದ್ರೆ ಖಂಡಿತಾ ಹೆಸರು ನಮೂದಿಸುತ್ತಿದ್ದರು.

  ಮನಸಾರೆ ಜೋಡಿಗೆ ಶುರುವಾಯ್ತು ಪ್ರಾಣಿ ಕಾಳಜಿಮನಸಾರೆ ಜೋಡಿಗೆ ಶುರುವಾಯ್ತು ಪ್ರಾಣಿ ಕಾಳಜಿ

  ಸದ್ಯ, ಐಂದ್ರಿತಾ ರೇ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿರುವ 'Rambo 2' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದನ್ನ ಬಿಟ್ಟರೇ ನಟ ದಿಗಂತ್ ಜೊತೆ ಸೇರಿ ಪರಿಸರ ಕಾಳಜಿ ತೋರುವ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

  English summary
  Kannada Actress Aindritha Ray has taken her twitter account to express their displeasure against Tiffin Centre restaurant at airport.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X