For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ

  By Suneetha
  |

  ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಸರಿಯಾದ ಸ್ಥಾನಮಾನ, ಗೌರವ, ಜೊತೆಗೆ ಸಮನಾದ ಸಂಭಾವನೆ ಸಿಗುತ್ತಿಲ್ಲ ಎಂದು ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಅವರು ಮಾಧ್ಯಮದ ಮುಂದೆ ಆರೋಪ ಮಾಡಿರುವುದಲ್ಲದೇ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.

  ನಟಿ ಐಂದ್ರಿತಾ ರೇ ಅವರು ನಿರ್ದೇಶಕಿ ಅಪೂರ್ವ ಕಾಸರವಳ್ಳಿ ಅವರು ನಿರ್ದೇಶನ ಮಾಡಿರುವ 'ನಿರುತ್ತರ' ಚಿತ್ರದಲ್ಲಿ ಮಿಂಚಿದ್ದು, ಇತ್ತೀಚೆಗೆ ಆ ಚಿತ್ರದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಚಿತ್ರರಂಗದ ಕೆಲವು ಕಹಿ ಸತ್ಯಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ.[ನಾಗತಿಹಳ್ಳಿ ವಿರುದ್ಧ ಐಂದ್ರಿತಾ ಬಾಯ್ಬಿಟ್ಟ ಕಟು ಸತ್ಯ]

  ಕನ್ನಡ ಚಿತ್ರರಂಗದಲ್ಲಿ ನಾಯಕಿಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ? ಇಲ್ಲಿ ನಾಯಕಿಯರಿಗೆ ಸಿಗುತ್ತಿರುವ ಸ್ಥಾನಮಾನ ಏನು? ಕನ್ನಡ ಚಿತ್ರರಂಗದಲ್ಲಿ ನಾಯಕಿಯರು ಪಡುವ ಪಾಡಿನ ಬಗ್ಗೆ ಐಂದ್ರಿತಾ ಬಾಯ್ಬಿಟ್ಟಿದ್ದಾರೆ.[ನಟಿ ಐಂದ್ರಿತಾ ರೇಗೆ ಸೆಟ್ಸ್ ನಲ್ಲಿ ಕಪಾಳಮೋಕ್ಷ!]

  ಅಲ್ಲದೆ ಇತ್ತೀಚೆಗೆ ತಾನು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಡಿಮೆಯಾಗಿರುವುದಕ್ಕೂ ಕಾರಣ ನೀಡಿದ್ದಾರೆ. ಅಷ್ಟಕ್ಕೂ ಐಂದ್ರಿತಾ ಅವರು ಕನ್ನಡ ಚಿತ್ರರಂಗದ ಬಗ್ಗೆ ಬಾಯ್ಬಿಟ್ಟ ಕಹಿ ಸತ್ಯಗಳೇನು? ನೋಡಿ ಕೆಳಗಿನ ಸ್ಲೈಡುಗಳಲ್ಲಿ...

  ಐಂದ್ರಿತಾ ಏನಂತಾರೆ?

  ಐಂದ್ರಿತಾ ಏನಂತಾರೆ?

  "ನನಗೆ ಹೆಚ್ಚು ಸಂಭಾವನೆ ಬೇಕು, ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ, ಸ್ಥಾನಮಾನ ಸಿಗದ ಕಾರಣ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಾನು ಕಾಣಿಸಿಕೊಂಡಿಲ್ಲ". ನಟಿ ಐಂದ್ರಿತಾ[ಡೈರೆಕ್ಟರ್ ಗೆ 'ಬಾಸ್ಟರ್ಡ್' ಎಂದರೇ ಐಂದ್ರಿತಾ ರೇ ?]

  ಹೀರೋಯಿನ್ ಅಂದ್ರೆ ಗ್ಲಾಮರ್

  ಹೀರೋಯಿನ್ ಅಂದ್ರೆ ಗ್ಲಾಮರ್

  "ಕನ್ನಡ ಸಿನಿಮಾದಲ್ಲಿ ಗ್ಲಾಮರ್ ಗೋಸ್ಕರ ಮಾತ್ರ ಹೀರೋಯಿನ್ ಬೇಕು. ಇಲ್ಲಾಂದ್ರೆ ಇಲ್ಲ. ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಉತ್ತಮ ಪಾತ್ರಗಳೇ ಸಿಗುತ್ತಿಲ್ಲ" - ಐಂದ್ರಿತಾ[ಕಡ್ಡಿಪುಡಿಯಲ್ಲಿ ಬೆತ್ತಲೆ ಬೆನ್ನು ತೋರಿದ ಐಂದ್ರಿತಾ]

  ಬೇಧ-ಭಾವ ನಡೆಯುತ್ತಿದೆ

  ಬೇಧ-ಭಾವ ನಡೆಯುತ್ತಿದೆ

  "ಕನ್ನಡ ಚಿತ್ರರಂಗದಲ್ಲಿ ಹೀರೋ ಮತ್ತು ಹೀರೋಯಿನ್ ನಡುವೆ ಸಾಕಷ್ಟು ಬೇಧ-ಭಾವ ಮಾಡುತ್ತಾರೆ. ಹೀರೋಗೆ ಸಿಗುವ ಮನ್ನಣೆ-ಗೌರವ ಹಿರೋಯಿನ್ ಗೆ ಸಿಗುವುದಿಲ್ಲ. ಹೀರೋಗಳಿಗೆ ಶೂಟಿಂಗ್ ಸಂದರ್ಭದಲ್ಲಿ ಸೆಟ್ ನಲ್ಲಿ ಬಟ್ಟೆ ಬದಲಾಯಿಸಲು ಕ್ಯಾರವಾನ್ ಇರುತ್ತೆ. ಆದರೆ ಹಿರೋಯಿನ್ ಗಳಿಗೆ ಇರೋದಿಲ್ಲ. ನಾನು ಎಷ್ಟೋ ಬಾರಿ ಮರದ ಅಡ್ಡದಲ್ಲಿ ಡ್ರೆಸ್ಸ್ ಚೇಂಜ್ ಮಾಡಿದ್ದೀನಿ" - ಐಂದ್ರಿತಾ

  ಸಂಭಾವನೆಯಲ್ಲಿ ಸಮಾನತೆ ಇಲ್ಲ

  ಸಂಭಾವನೆಯಲ್ಲಿ ಸಮಾನತೆ ಇಲ್ಲ

  "ಇನ್ನು ಸಂಭಾವನೆ ವಿಚಾರಕ್ಕೆ ಬಂದರೆ ಕನ್ನಡ ಚಿತ್ರರಂಗದಲ್ಲಿ ಹೀರೋಗೆ ಸಿಗುವ ಶೇ.10ರಷ್ಟು ಅಲ್ಲ ಶೇ 5ರಷ್ಟು ಸಂಭಾವನೆಯೂ ನಾಯಕಿಯರಿಗೆ ಸಿಗುತ್ತಿಲ್ಲ. ಬೇರೆ ಚಿತ್ರರಂಗದಲ್ಲೂ ನಾಯಕಿಯರಿಗೆ ಕಡಿಮೆ ಸಂಭಾವನೆ ಇದೆ. ಆದರೆ ಇಲ್ಲಿ ತೀರಾ ಕಡಿಮೆ ಇದೆ. ಇದಕ್ಕೂ ನಿಜಕ್ಕೂ ವಿಷಾದಕರ ಸಂಗತಿ" ಎಂದು ಐಂದ್ರಿತಾ ಆರೋಪಿಸಿದ್ದಾರೆ.

  ನಾನು ಯಾರನ್ನೂ ದೂರುತ್ತಿಲ್ಲ

  ನಾನು ಯಾರನ್ನೂ ದೂರುತ್ತಿಲ್ಲ

  'ನಾನು ನಿರ್ದೇಶಕರು ಅಥವಾ ನಿರ್ಮಾಪಕರನ್ನು ದೂರುತ್ತಿಲ್ಲ, ಬದ್ಲಾಗಿ ಚಿತ್ರರಂಗದಲ್ಲಿ ಇರುವ ಇಂತಹ ಧೋರಣೆ ಬದಲಾಗಬೇಕು. ಚಿತ್ರದ ನಾಯಕ ಮತ್ತು ನಾಯಕಿಯರ ಸಂಭಾವನೆ ಸಮನಾಗಿರಬೇಕು' ಎಂದು ಐಂದ್ರಿತಾ ಹೇಳಿದ್ದಾರೆ.

  ನಿರ್ಮಾಪಕರು ಏನಂತಾರೆ?

  ನಿರ್ಮಾಪಕರು ಏನಂತಾರೆ?

  'ಐಂದ್ರಿತಾ ಅವರು ಈ ರೀತಿ ಆರೋಪ ಮಾಡುತ್ತಿರುವುದಕ್ಕೆ ಯಾವುದೇ ಅರ್ಥ ಇಲ್ಲ. ಯಾಕೆಂದರೆ ಒಬ್ಬ ನಾಯಕನಿಗೆ ಕೊಡುವಷ್ಟೇ ಸಂಭಾವನೆ ಒಬ್ಬ ನಾಯಕಿಗೆ ಕೊಡಲು ಆಗುವುದಿಲ್ಲ. ಮಾತ್ರವಲ್ಲದೇ ಮಾಲಾಶ್ರೀ ಅವರನ್ನು ಹೊರತುಪಡಿಸಿ ಇಲ್ಲಿಯವರೆಗೆ ಯಾವೊಬ್ಬ ನಾಯಕಿ ಕೂಡ ಹೀರೋಗಿಂತ ಹೆಚ್ಚು ಸಂಭಾವನೆ ಪಡೆದಿಲ್ಲ. -'ಭಜರಂಗಿ' ಚಿತ್ರದ ನಿರ್ಮಾಪಕ.

  'ಭಜರಂಗಿ'ಯಲ್ಲಿ ತೊಂದರೆ ಆಗಿಲ್ಲ

  'ಭಜರಂಗಿ'ಯಲ್ಲಿ ತೊಂದರೆ ಆಗಿಲ್ಲ

  "ಭಜರಂಗಿ' [ಶಿವಣ್ಣ ಅಭಿನಯದ 'ಭಜರಂಗಿ' ಚಿತ್ರ ವಿಮರ್ಶೆ] ಚಿತ್ರದಲ್ಲಿ ಕಥೆ ಕೇಳಿ ಅವರಿಗೆ ಇಷ್ಟ ಆಯ್ತು, ಅಲ್ಲದೇ ಅವರು ಕೇಳಿದ ಸಂಭಾವನೆ ಕೂಡ ನಾವು ನೀಡಿದ್ದೇವೆ. ಅವರು ಕೂಡ ನಮಗೆ ಸೆಟ್ ನಲ್ಲಾಗಲಿ, ಶೂಟಿಂಗ್ ಸಂದರ್ಭದಲ್ಲಾಗಲಿ ಯಾವುದೇ ರೀತಿಯ ಆರೋಪ ಮಾಡಿಲ್ಲ. ಸಿನಿಮಾ ಚೆನ್ನಾಗಿ ಮುಗಿಸಿಕೊಟ್ಟಿದ್ದಾರೆ".- ಭಜರಂಗಿ ನಿರ್ಮಾಪಕ

  ನಿರ್ಮಾಪಕ ಎಸ್ ನಾರಾಯಣ್

  ನಿರ್ಮಾಪಕ ಎಸ್ ನಾರಾಯಣ್

  "ನಮ್ಮ ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಾಯಕಿಯರಿಗೆ ಅವರಿಗೆ ಕೊಡಬೇಕಾದದ್ದನ್ನೆಲ್ಲಾ ಕೊಟ್ಟಿದ್ದೇವೆ. ಅಲ್ಲದೇ ಬೇರೆ ಭಾಷೆಯ ನಾಯಕಿಯರು ಕನ್ನಡ ಚಿತ್ರರಂಗಕ್ಕೆ ಬಂದರೆ ಅವರನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಅದಕ್ಕಿಂತ ಹೆಚ್ಚಾಗಿ ನಾವು ನಮ್ಮ ಕನ್ನಡದ ಹುಡುಗಿಯರನ್ನು ಟ್ರೀಟ್ ಮಾಡುತ್ತೇವೆ". ಎಸ್ ನಾರಾಯಣ್

  ಪಾಪದ ಹುಡುಗಿ ಐಂದ್ರಿತಾ

  ಪಾಪದ ಹುಡುಗಿ ಐಂದ್ರಿತಾ

  "ಐಂದ್ರಿತಾ ಅವರು ತುಂಬಾ ಪಾಪದ ಹುಡುಗಿ ಅವರು ಈ ಥರ ಸುಮ್ಮ-ಸುಮ್ಮನೇ ಆರೋಪ ಮಾಡುವವರಲ್ಲಾ, ನನ್ನ ಸಿನಿಮಾದಲ್ಲಿ ಮಗು ಥರ ಕೆಲಸ ಮಾಡಿ ಕೊಟ್ಟಿದ್ದಾರೆ ಯಾವುದೇ ತೊಂದರೆ ಕೊಟ್ಟಿಲ್ಲ. ಇವೆಲ್ಲಾ ಸಣ್ಣ ವಿಷಯ. ಅವರಿಗೆ ಎಲ್ಲೋ ಈ ಥರದ ಕೆಟ್ಟ ಅನುಭವ ಆಗಿರಬೇಕು ಅದಕ್ಕೆ ಅವರು ಈ ಥರ ಮಾತನಾಡಿದ್ದಾರೆ" - ಎಸ್ ನಾರಾಯಣ್

  English summary
  Kannada Actress Aindrita Ray expresses displeasure over gender pay gap and perks for heroines in sandalwood. And also Actress Aindrita given the statement about kannada film industry 'Sandalwood is Male domination industry'. Here is the details check it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X