For Quick Alerts
  ALLOW NOTIFICATIONS  
  For Daily Alerts

  ದುನಿಯಾ ಸೂರಿ ಕಡ್ಡಿಪುಡಿ ಸೇರಿದ ಐಂದ್ರಿತಾ ರೇ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಹ್ಯಾಟ್ರಿಕ್ ಪಂಡಿತೆ ರಾಧಿಕಾ ಪಂಡಿತ್ ನಟನೆ ಹಾಗೂ ದುನಿಯಾ ಸೂರಿ ನಿರ್ದೇಶನದ 'ಕಡ್ಡಿಪುಡಿ' ಚಿತ್ರಕ್ಕೆ ನಟಿ ಐಂದ್ರಿತಾ ರೈ ಸೇರಿಕೊಂಡಿದ್ದಾರೆ. ಹಾಗಿದ್ದರೆ ಈ ಚಿತ್ರದಲ್ಲಿ ಐಂದ್ರಿತಾ ರೈ ನಾಯಕಿಯರಲ್ಲೊಬ್ಬರೇ ಅಥವಾ 'ಐಟಂ ಡಾನ್ಸ್' ಏನಾದರೂ ಮಾಡಲಿದ್ದಾರೆಯೇ? "ಇದ್ಯಾವುದೂ ಅಲ್ಲ, 'ಅತಿಥಿ ಪಾತ್ರ"ಎಂಬ ವಿಷಯವನ್ನು ಸ್ವತಃ 'ಕಡ್ಡಿಪುಡಿ' ನಿರ್ದೇಶಕ ದುನಿಯಾ ಸೂರಿ ಸ್ಪಷ್ಟಪಡಿಸಿದ್ದಾರೆ.

  ಶೂಟಿಂಗ್ ಹಂತದಲ್ಲಿರುವ ದುನಿಯಾ ಸೂರಿ ನಿರ್ದೇಶನದ 'ಕಡ್ಡಿಪುಡಿ' ಚಿತ್ರಕ್ಕೆ ಈಗಾಗಲೇ ಬೆಂಗಳೂರು, ಮೈಸೂರು ಸೇರಿದಂತೆ ಸತತವಾಗಿ ಹಲವು ಕಡೆ ಚಿತ್ರೀಕರಣ ನಡೆಸಲಾಗಿದೆ. ಶಿವರಾಜ್ ಕುಮಾರ್ ಜೊತೆ ಇದೇ ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿರುವ ರಾಧಿಕಾ ಪಂಡಿತ್, ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಇದೀಗ ರಾಧಿಕಾ ಪಂಡಿತ್ ಮಾತ್ರವಲ್ಲದೇ ಐಂದ್ರಿತಾ ರೈ ಅವರನ್ನೂ ಕೂಡ 'ಕಡ್ಡಿಪುಡಿ'ಯಲ್ಲಿ ನೋಡಬಹುದೆಂಬ ಮಾಹಿತಿ ಬಂದಿದೆ.

  ಬೆಂಗಳೂರಿನ ಬಸವನಗುಡಿ ಹಾಗೂ ಗಾಂಧಿ ಬಜಾರಿನ ಸುತ್ತಮುತ್ತ 'ಕಡ್ಡಿಪುಡಿ' ಚಿತ್ರಕ್ಕೆ ಮಾಡಿರುವ ಫೋಟೋ ಶೂಟ್ ಎಲ್ಲರ ಗಮನಸೆಳೆದಿದೆ. ಶಿವಣ್ಣ ಹಾಗೂ ರಾಧಿಕಾ ಪಂಡಿತ್ ಜೋಡಿ ಗಾಂಧಿ ಬಜಾರಿನ ಅಂಗಡಿ ಮುಂದೆ ನಿಂತು ಫೋಟೋ ಶೂಟ್ ಗೆ ಕೊಟ್ಟಿರುವ ಫೋಸ್ ನೋಡಿದ ಮೇಲೆ ಬರಲಿರುವ ದುನಿಯಾ ಸೂರಿಯ ಈ 'ಕಡ್ಡಿಪುಡಿ' ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಜಾಸ್ತಿಯಾಗಿದೆ, ಸಹಜವಾಗಿ ಅದು ನಿರೀಕ್ಷೆಗೆ ತಿರುಗಿದೆ.

  ಈಗಂತೂ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಲಿರುವ ಐಂದ್ರಿತಾ ರೈ ಬಗ್ಗೆ ಪ್ರೇಕ್ಷಕರು ಕಸನು ಕಾಣಲಾರಂಭಿಸಿದ್ದಾರೆ. ಇತ್ತೀಚಿಗೆ ಕಡಿಮೆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಐಂದ್ರಿತಾ ರೈ ಬಗ್ಗೆ ಉದ್ಯಮದಲ್ಲಿ ಟಾಕ್ ಆರಂಭವಾಗಿತ್ತು. ಇದೀಗ ಅವರು ಮೊದಲಿನಂತೆ ಕನ್ನಡ ಚಿತ್ರಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ದಿಗಂತ್ ಜೊತೆ ಐಂದ್ರಿತಾ ಮದುವೆ ಆಗಲಿದ್ದಾರೆಂಬ ಮಾತಿಗೆ ಇತ್ತೀಚಿಗಷ್ಟೇ ಉತ್ತರ ಸಿಕ್ಕಿದೆ. (ಒನ್ ಇಂಡಿಯಾ ಕನ್ನಡ)

  English summary
  Actress Aindrita Ray acts in Duniya Soori direction upcoming movie Kaddipudi. Shivarajkumar and Radhika Pandit are in the Lead Role of this movie and shooting is going for this movie in and around the Bangalore and Mysore. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X