»   » 'ಅಯೋಗ್ಯ'ನ ಜೊತೆ ನಟಿಸುತ್ತಿಲ್ಲ ಐಂದ್ರಿತಾ

'ಅಯೋಗ್ಯ'ನ ಜೊತೆ ನಟಿಸುತ್ತಿಲ್ಲ ಐಂದ್ರಿತಾ

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಸೆಟ್ಟೇರಿದ 'ಅಯೋಗ್ಯ' ಚಿತ್ರ ಟೈಟಲ್ ನಿಂದಲೇ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಸತೀಶ್ ನೀನಾಸಂ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದ ಮುಹೂರ್ತ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಕೋರಿದ್ದರು.

'ಅಯೋಗ್ಯ' ಚಿತ್ರದಲ್ಲಿ ಸತೀಶ್ ನೀನಾಸಂಗೆ ಜೋಡಿಯಾಗಿ ನಟಿ ಐಂದ್ರಿತಾ ರೇ ಅಭಿನಯಿಸುತ್ತಾರೆ ಎನ್ನಲಾಗುತ್ತಿತ್ತು. ಆದ್ರೆ, ಈ ಚಿತ್ರದಲ್ಲಿ ಐಂದ್ರಿತಾ ಬಣ್ಣ ಹಚ್ಚುತ್ತಿಲ್ಲ. ಹೀಗಾಗಿ, 'ಅಯೋಗ್ಯ'ನಿಗಾಗಿ ನಾಯಕಿಯ ಹುಡುಕಾಟ ಮುಂದುವರೆದಿದೆ.

Aindrita Ray Not part of Ayogya Kannada Movie

ಯೋಗರಾಜ್ ಭಟ್ ಅವರ ಬಳಿ ಸುಮಾರು 10 ವರ್ಷಕ್ಕೂ ಹೆಚ್ಚು ಕಾಲದಿಂದ, ಸಹಾಯಕನಾಗಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಮಹೇಶ್ ಕುಮಾರ್ ಈಗ ಸ್ವತಂತ್ರವಾಗಿ ನಿರ್ದೇಶಕನಾಗಿ ಅಯೋಗ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಅಯೋಗ್ಯ' ಗ್ರಾಮ ಪಂಚಾಯ್ತಿ ಸದಸ್ಯ ಈ ನೀನಾಸಂ ಸತೀಶ.!

Aindrita Ray Not part of Ayogya Kannada Movie

ನೀನಾಸಂ ಸತೀಶ್ ಅವರ ಜೊತೆ ಈ ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ಹಿರಿಯ ನಟಿ ಸರಿತ, ರವಿಶಂಕರ್, ರಂಗಾಯಣ ರಘು, ತಬಲಾ ನಾಣಿ, ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಬಳಗ ಇದೆ. ಜೊತೆಗೆ ಯೋಗರಾಜ್ ಭಟ್ ಅವರ ಸಾಹಿತ್ಯ ಮತ್ತು ಹರಿಕೃಷ್ಣ ಅವರ ಸಂಗೀತವಿದೆ. ಸುರೇಶ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

English summary
Kannada Actress Aindrita Ray Not part of Ayogya Kannada Movie. The Movie Directed by Mahesh Kumar and Neenasam Sathish in lead Role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada