»   » ಕ್ವಾಟ್ಲೆ ಸತೀಶ್ ಜೊತೆ ಐಂದ್ರಿತಾ ರೇ ರೊಮ್ಯಾನ್ಸ್!

ಕ್ವಾಟ್ಲೆ ಸತೀಶ್ ಜೊತೆ ಐಂದ್ರಿತಾ ರೇ ರೊಮ್ಯಾನ್ಸ್!

Posted By:
Subscribe to Filmibeat Kannada

ಚಂದನವನದ ಮುದ್ದು ಮುಖದ ಹಾಲ್ಗೆನ್ನೆ ಚೆಲುವೆ ಐಂದ್ರಿತಾ ರೇ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ ಎಂಬ ಮಾತು ಹಳೇ ಸುದ್ದಿ. ಆದ್ರೆ ಅವರು ಕನ್ನಡದಲ್ಲಿಯೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಈಗ ಇವರ ಬಗೆಗಿನ ಲೇಟೆಸ್ಟ್ ಸುದ್ದಿ ಏನಂದ್ರೆ ನಟಿ 'ಚೌಕ' ಮತ್ತು 'ಮೇಲುಕೋಟೆ ಮಂಜ' ಚಿತ್ರದ ನಂತರ ಈಗ ಸತೀಶ್ ನೀನಾಸಂ ಜೊತೆ ಚಿತ್ರವೊಂದರಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ಆ ಚಿತ್ರಕ್ಕೆ ಟೈಟಲ್ ಸಹ ಫಿಕ್ಸ್ ಆಗಿದೆ. ಚಿತ್ರದ ಹೆಸರೇನು, ನಿರ್ದೇಶಕರು ಯಾರು ಎಂಬಿತ್ಯಾದಿ ಮಾಹಿತಿಗಾಗಿ ಮುಂದೆ ಓದಿರಿ..

ಚಿತ್ರದ ಹೆಸರೇನು?

ಸತೀಶ್ ನೀನಾಸಂ ಮತ್ತು ಐಂದ್ರಿತಾ ರೇ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಹೆಸರು 'ಅಯೋಗ್ಯ'. ಈ ಚಿತ್ರಕ್ಕೆ 'ಗ್ರಾಮ ಪಂಚಾಯಿತಿ' ಎಂಬ ಟ್ಯಾಗ್‌ಲೈನ್ ಸಹ ನೀಡಲಾಗಿದೆ.

ಚಿತ್ರದ ನಿರ್ದೇಶಕರು ಯಾರು?

'ಅಯೋಗ್ಯ' ಚಿತ್ರಕ್ಕೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್‌ ರವರ ಬಳಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಮಹೇಶ್ ಎಂಬುವವರು ಆಕ್ಷನ್ ಕಟ್ ಹೇಳಲಿದ್ದಾರೆ.

ಚಿತ್ರೀಕರಣ ಆರಂಭ ಯಾವಾಗ?

'ಅಯೋಗ್ಯ' ಚಿತ್ರ ಪಕ್ಕಾ ಎಂಟರ್‌ಟೈನ್‌ಮೆಂಟ್ ಸಿನಿಮಾ ಆಗಿದ್ದು ಈ ಚಿತ್ರದ ಶೂಟಿಂಗ್ ಅನ್ನು ಮಹೇಶ್ ರವರು ಆಗಸ್ಟ್ ತಿಂಗಳಿಂದ ಆರಂಭಿಸಲಿದ್ದಾರಂತೆ. ಇದು ಇವರ ಮೊದಲ ಚಿತ್ರವಾಗಿದ್ದು, ಸತೀಶ್ ನೀನಾಸಂ ಮತ್ತು ಐಂದ್ರಿತಾ ರೇ ಕಾಂಬಿನೇಷನ್ ನ ಮೊಟ್ಟ ಮೊದಲ ಚಿತ್ರವಾಗಲಿದೆ.

ಸದ್ಯ ಐಂದ್ರಿತಾ-ಸತೀಶ್ ಇತರೆ ಚಿತ್ರಗಳಲ್ಲಿ ಬ್ಯುಸಿ

ಪ್ರಸ್ತುತದಲ್ಲಿ ಐಂದ್ರಿತಾ ರೇ ರವರು ಸಿದ್ಧಾರ್ಥ್ ಮಹೇಶ್ ಲೀಡ್‌ ರೋಲ್‌ನ 'ಗರುಡ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸತೀಶ್ ನೀನಾಸಂ ರವರ 'ಟೈಗರ್ ಗಲ್ಲಿ' ಚಿತ್ರೀಕರಣ ಮುಗಿದಿದ್ದು ತೆರೆಗೆ ಬರಲು ಸಿದ್ದವಾಗಿದೆ.

English summary
Kannada Actress Aindrita Ray will be sharing screen space with Satish Neenasam in the movie Ayogya. The film has the tag line Gram Panchayathi Sadasya. The project is directed by Mahesh, who had worked as an associate for Yogaraj Bhat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada