For Quick Alerts
  ALLOW NOTIFICATIONS  
  For Daily Alerts

  ಸೆಂಚುರಿ ಸ್ಟಾರ್ ಶಿವಣ್ಣ ಜೊತೆ ಐಂದ್ರಿತಾ ರೇ

  By Rajendra
  |

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಲೇಟೆಸ್ಟ್ ಚಿತ್ರಕ್ಕೆ ನಾಯಕಿಯಾಗಿ ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ ಆಯ್ಕೆಯಾಗಿದ್ದಾರೆ. ಎ ಹರ್ಷ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಈಗಾಗಲೆ ವಿಭಿನ್ನ ಶೀರ್ಷಿಕೆಯಿಂದ ಚಿತ್ರೋದ್ಯಮದ ಗಮನಸೆಳೆದಿದೆ.

  ಶಿವಣ್ಣ ಹೊಸ ಚಿತ್ರ 'ಭಜರಂಗಿ' ಸೆಟ್ಟೇರಿದ್ದು ಮೊದಲ ಹಂತದ ಚಿತ್ರೀಕರಣದಿಂದಲೇ ಐಂದ್ರಿತಾ ಪಾಲ್ಗೊಳ್ಳಲಿದ್ದಾರೆ. ಭಜರಂಗಿ ಚಿತ್ರದಲ್ಲಿ ರಮ್ಯಾ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕಡೆಗೆ ಐಂದ್ರಿತಾ ಆಯ್ಕೆಯಾಗುವ ಮೂಲಕ ಅಂತೆಕಂತೆಗಳಿಗೆ ತೆರೆಬಿದ್ದಿದೆ.

  "ಶಿವಣ್ಣ ಅಭಿನಯದ ಕಡ್ಡಿಪುಡಿ ಚಿತ್ರದಲ್ಲಿ ವಿಶೇಷ ಪಾತ್ರವನ್ನು ಪೋಷಿಸಿದ್ದೇನೆ. ಚಿತ್ರದ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸುತ್ತಿದ್ದೇನೆ. ಈಗ ಭಜರಂಗಿಯಲ್ಲಿ ಶಿವಣ್ಣ ಜೊತೆ ಪೂರ್ಣ ಪ್ರಮಾಣದ ಪಾತ್ರ ಸಿಕ್ಕಿದೆ. ಸಂತೋಷವಾಗುತ್ತಿದೆ. ಚಿತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸುತ್ತೇನೆ " ಎಂದಿದ್ದಾರೆ ಐಂದ್ರಿತಾ ರೇ.

  "ಚಿತ್ರದಲ್ಲಿ ಶಿವಣ್ಣ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ಎರಡೂ ಪಾತ್ರಗಳ ಬಾಡಿ ಲಾಂಗ್ವೇಜ್ ಹಾಗೂ ಲುಕ್ ವಿಭಿನ್ನವಾಗಿರುತ್ತದೆ " ಎನ್ನುತ್ತಾರೆ ಹರ್ಷಾ. ಚಿತ್ರದ ನಿರ್ಮಾಪಕರು ನಟರಾಜ್ ಗೌಡ. (ಏಜೆನ್ಸೀಸ್)

  English summary
  Gorgeous actres Aindrita Ray to play the lead in Shivaraj Kumar's latest flick Bhajarangi.choreographer turned director Harsha is the director of the film. Bajarangi launched on Feb 20. Nataraj Gowda is the producer of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X