Don't Miss!
- Finance
Padma Awards: ಪದ್ಮ ಶ್ರೀ ಪುರಸ್ಕೃತ ಅರೀಜ್ ಖಂಬಟ್ಟ ಯಾರು?
- News
ಕರ್ನಾಟಕ, ದೆಹಲಿಯಲ್ಲಿ ಮೋಡ ಕವಿದ ವಾತಾವರಣ: ಲಘು ಮಳೆ ಮುನ್ಸೂಚನೆ!
- Sports
IND vs NZ 1st T20: ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ, ಟಿವಿ & ಲೈವ್ ಸ್ಟ್ರೀಮಿಂಗ್ ವಿವರ
- Lifestyle
Horoscope Today 27 Jan 2023: ಶುಕ್ರವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಗುಳ್ಟು' ನವೀನ್ ಗೆ ಜೋಡಿಯಾದ ಐಶಾನಿ ಶೆಟ್ಟಿ
'ಗುಳ್ಟು' ಸಿನಿಮಾದ ಯಶಸ್ಸಿನ ನಂತರ ನಟ ನವೀನ್ ಶಂಕರ್ ಎರಡನೇ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ನಾಯಕಿಯಾಗಿ ಐಶಾನಿ ಶೆಟ್ಟಿ ಆಯ್ಕೆ ಆಗಿದ್ದಾರೆ. ನಿನ್ನೆ (ಸೋಮವಾರ) ಈ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಿತು.
ಜೆಪಿ ನಗರದ ಸತ್ಯ ಗಣಪತಿ ದೇವಲಯದಲ್ಲಿ ಚಿತ್ರದ ಮುಹೂರ್ತ ಜರುಗಿದೆ. ನಟ ಸತೀಶ್ ನೀನಾಸಂ ಕ್ಯಾಮರಾ ಚಾಲನೆ ಮತ್ತು ನಟ ಅವಿನಾಶ್ ಕ್ಲಾಪ್ ಮಾಡುವ ಮೂಲಕ ಸಿನಿಮಾ ಶುಭಾರಂಭ ಆಗಿದೆ.
ಪೂರಿ
ಜಗನ್ನಾಥ್
ಶಿಷ್ಯನ
ಸಿನಿಮಾದಲ್ಲಿ
'ಗುಳ್ಟು'
ನವೀನ್
ಶ್ರೀಧರ್ ಷಣ್ಮುಖ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಪೂರಿ ಜಗನ್ನಾಥ್ ಜೊತೆಗೆ ಕೆಲಸ ಮಾಡಿದ್ದ, ಇವರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ನಿರ್ಮಾಣ ಚಿತ್ರಕ್ಕಿದೆ.
ನಟಿ ಐಶಾನಿ ಶೆಟ್ಟಿ ಸಿನಿಮಾ ತಂಡಕ್ಕೆ ಎಂಟ್ರಿ ಆಗಿದ್ದಾರೆ. ಅವರ ಪಾತ್ರ ತುಂಬ ವಿಭಿನ್ನವಾಗಿದ್ದು, ಅದೇ ರೀತಿ ಅವರ ಲುಕ್ ಕೂಡ ಡಿಫರೆಂಟ್ ಆಗಿ ಇರಲಿದೆಯಂತೆ. 'ನಡುವೆ ಅಂತರವಿರಲಿ' ಸಿನಿಮಾದ ಬಳಿಕ ಈ ಚಿತ್ರವನ್ನು ಐಶಾನಿ ಮಾಡುತ್ತಿದ್ದಾರೆ.
ಚಿತ್ರದ ಒಂದಿಷ್ಟು ಪಾತ್ರಗಳ ನಡುವೆ ಇಂಟರ್ ಕನೆಕ್ಟ್ ಇದ್ದು, ಅಲ್ಲಿ ನಡೆಯೋ ಕತೆಯ ಜೊತೆಗೆ ಮುಖ್ಯವಾಗಿ ಸಿನಿಮಾದಲ್ಲಿ ಬಂಚ್ ಆಫ್ ಎಮೋಶನ್ಸ್ ಹೇಳೋಕೆ ನಿರ್ದೇಶಕರು ಹೊರಟಿದ್ದಾರಂತೆ. ಇದೊಂದು ಹೈಪರ್ ಲಿಂಕ್ ಶೈಲಿಯ ಸಿನಿಮಾ ಆಗಿದೆಯಂತೆ.

ಕೀರ್ತನ್ ಪೂಜಾರಿ ಛಾಯಗ್ರಹಣ, ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನೀಡುತ್ತಿದ್ದಾರೆ. ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಹಾಡುಗಳು ಬರುತ್ತಿದ್ದಾರೆ.
ಜುಲೈ ಕೊನೆಯವಾರದಿಂದ ಸಿನಿಮಾದ ಶೂಟಿಂಗ್ ಶುರು ಆಗುತ್ತಿದೆ. ಉಳಿದ ಪಾತ್ರಗಳು ಸದ್ಯದಲ್ಲಿಯೇ ರಿವೀಲ್ ಆಗಲಿವೆ.