For Quick Alerts
  ALLOW NOTIFICATIONS  
  For Daily Alerts

  ಅಮ್ಮಂದಿರ ದಿನಕ್ಕೆ ಐಶಾನಿ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ತೆರೆಗೆ

  |

  ಸ್ಯಾಂಡಲ್ ವುಡ್ ನಟಿ ಐಶಾನಿ ಶೆಟ್ಟಿ ನಿರ್ದೇಶನಕ್ಕೆ ಇಳಿದು ದಿನಗಳೆ ಆಗಿವೆ. ಅಭಿನಯದ ಜೊತೆಗೆ ನಿರ್ದೇಶಕಿ ಆಗುವ ಕನಸು ಕಂಡಿದ್ದರು ಐಶಾನಿ. ಅದರಂತೆ ಮೊದಲ ಸಿನಿಮಾವನ್ನು ನಿರ್ದೇಶನ ಮಾಡಿ ಮುಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿಮಣಿಯರು ನಟನೆ ಜೊತೆಗೆ ನಿರ್ಮಾಣದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಆದ್ರೆ ಐಶಾನಿ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ.

  ಅಂದ್ಹಾಗೆ ಐಶಾನಿ 'ಕಾಜಿ' ಎನ್ನುವ ಕಿರು ಚಿತ್ರ ನಿರ್ದೇಶನದ ಮಾಡಿದ್ದಾರೆ. ಈ ಚಿತ್ರ ಸತೀಶ್ ನೀನಾಸಂ ಅವರ ಸತೀಶ್ ಪಿಕ್ಟರ್ ಹೌಸ್ ಬ್ಯಾನರ್ ನಲ್ಲಿ ತಯಾರಾಗಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ 'ಕಾಜಿ' ಚಿತ್ರಾಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಇದೆ ಭಾನುವಾರ 12ರಂದು ತಾಯಂದಿರ ದಿನಕ್ಕೆ 'ಕಾಜಿ' ರಿಲೀಸ್ ಆಗುತ್ತಿದೆ.

  ಸತೀಶ್ ನೀನಾಸಂ ಜೊತೆಯಾದ ಜ್ಯೂನಿಯರ್ ರಾಕಿ ಭಾಯ್ ಸತೀಶ್ ನೀನಾಸಂ ಜೊತೆಯಾದ ಜ್ಯೂನಿಯರ್ ರಾಕಿ ಭಾಯ್

  ಸತೀಶ್ ಆಡಿಯೋ ಹೌಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಈ ಕಿರುಚಿತ್ರ ರಿಲೀಸ್ ಆಗುತ್ತಿದೆ. ಇತ್ತೀಚಿಗಷ್ಟೆ ಸತೀಶ್ ಆಡಿಯೋ ಕಂಪೆನಿ ತೆರೆದಿದ್ದರು. ಈ ಆಡಿಯೋ ಕಂಪೆನಿಯಿಂದ ರಿಲೀಸ್ ಆಗುತ್ತಿರುವ ಮೊದಲ ಕಿರುಚಿತ್ರ 'ಕಾಜಿ'. ಈಗಾಗಲೆ ಸಾಕಷ್ಟು ಇಂಟರ್ ನ್ಯಾಶನ್ ಫಿಲ್ಮ್ ಫೆಸ್ಟಿವಲ್ಸ್ ನಲ್ಲಿ ಭಾಗಿಯಾಗಿ ಅವಾರ್ಡ್ ಪಡೆದುಕೊಂಡಿದೆ ಕಾಜಿ. ಮೊದಲ ನಿರ್ದೇಶನದಲ್ಲೆ ಸಾಕಷ್ಟು ಅವಾರ್ಡ್ ಗಳನ್ನು ಪಡೆದು ಕೊಂಡಿರುವುದು ಐಶಾನಿ ಶೆಟ್ಟಿ ಸಂತಸಕ್ಕೆ ಕಾರಣವಾಗಿದೆ.

  12ರಂದು ರಿಲೀಸ್ ಆಗುತ್ತಿರುವ 'ಕಾಜಿ' ಕಿರು ಚಿತ್ರವನ್ನು ಎಲ್ಲಾ ತಾಯಂದಿರಿಗೆ ಅರ್ಪಿಸುತ್ತಿದ್ದಾರೆ ಸತೀಶ್ ಮತ್ತು ಐಶಾನಿ. ಅಮ್ಮಂದಿರ ದಿನಾಚರಣೆ ದಿನವೆ ರಿಲೀಸ್ ಆಗುತ್ತಿರುವುದು ಯಾಕೆ ಎನ್ನುವುದು ಕಿರು ಚಿತ್ರ ನೋಡದ ಮೇಲೆಯೆ ಗೊತ್ತಾಗಲಿದೆಯಂತೆ.

  English summary
  Kannada actress Aishani shetty debut directorial kaaji short movie release on May 12th mothers day. This short film is prodused by actor Sathis Ninasam
  Thursday, May 9, 2019, 15:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X