»   » ಐಶ್ವರ್ಯಾ ರೈ ಮಗಳು ಆರಾಧ್ಯಾ ಫೋಟೋಗಳು

ಐಶ್ವರ್ಯಾ ರೈ ಮಗಳು ಆರಾಧ್ಯಾ ಫೋಟೋಗಳು

Posted By:
Subscribe to Filmibeat Kannada

ಬಾಲಿವುಡ್ ತಾರೆ ಐಶ್ವರ್ಯಾ ರೈ ಮಗಳು ಆರಾಧ್ಯಾ ಬಚ್ಚನ್ ಇದೇ ಮೊದಲ ಬಾರಿಗೆ ಕ್ಯಾಮೆರಾಗಳ ಕಣ್ಣಿಗೆ ಸೆರೆಸಿಕ್ಕಿದ್ದಾರೆ. ಆರಾಧ್ಯಳ ಮುದ್ದಿನ ಮುಖವನ್ನು ಬಚ್ಚನ್ ಕುಟುಂಬ ಇದುವರೆಗೂ ಮಾಧ್ಯಮಗಳಿಗೆ ತೋರಿಸಿರಲಿಲ್ಲ. ಹಾಗಾಗಿ ಆಕೆ ಹೇಗಿರಬಹುದು ಎಂಬ ಕುತೂಹಲ ಐಶ್ವರ್ಯಾ ರೈ ಅಭಿಮಾನಿಗಳಲ್ಲಿ ಮನೆಮಾಡಿತ್ತು.

"ತಮ್ಮ ಮಗಳು ಸಹಜವಾಗಿ ಎಲ್ಲರಂತೆ ಬೆಳೆಯಬೇಕು. ಆಕೆಯನ್ನು ಸಾರ್ವಜನಿಕವಾಗಿ ಎಲ್ಲರ ಎದುರು ಪ್ರದರ್ಶಿಸುವುದು ನಮಗೆ ಇಷ್ಟವಿಲ್ಲ" ಎಂದು ಒಮ್ಮೆ ಅಭಿಷೇಕ್ ಬಚ್ಚನ್ ಹೇಳಿಕೊಂಡಿದ್ದರು.

ಅಮ್ಮನ ಮೈಕಾಂತಿ ಮಗಳಿಗೂ ಇದೆಯಲ್ವೆ?

ಈ ಫೋಟೋ ನೋಡಿದರೆ ಅಮ್ಮನ ಮೈಕಾಂತಿ ಮಗಳಿಗೂ ಬಂದಿದೆ ಅನ್ನಿಸುತ್ತದೆ. ಆರಾಧ್ಯಾಳ ಮುಖವನ್ನು ಕ್ಯಾಮೆರಾ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿದ್ದಾರೆ. ಆದರೂ ಆರಾಧ್ಯ ಮಾತ್ರ ಇಣುಕಲು ಪ್ರಯತ್ನಿಸಿದಂತಿದೆ.

ಯಾರ್ರಿ ಅದು ಫೋಟೋ ತೆಗೀತಿರೋದು?

ನಾ ಮುಂದು ತಾ ಮುಂದು ಎಂದು ಫೋಟೋ ತೆಗೆಯಲು ಮುಗಿಬಿದ್ದ ಛಾಯಾಗ್ರಾಹರನ್ನು ಐಶ್ವರ್ಯಾ ರೈ ಸಹಾಯಕರು ತಡೆಯುತ್ತಿರುವುದು. ಈ ಗಲಾಟೆಯಲ್ಲಿ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ ಆರಾಧ್ಯಾಗೆ ಎಚ್ಚರವಾದಂತಿದೆ. ಮಗು ಅಳುತ್ತಿರುವುದನ್ನು ಚಿತ್ರದಲ್ಲಿ ಗಮನಿಸಬಹುದು.

ಈ ಫೋಟೋ ನೋಡಿದರೆ ಏನನ್ನಿಸುತ್ತದೆ?

ಮಲಗು ನನ್ನ ಮುದ್ದು ಮಗು. ಅಳದಿರು ನೀನು ಬಿಕ್ಕಳಿಸಿ. ಅಪ್ಪುವೆ ನಿನಗೊಂದು ಮುತ್ತಿರಿಸಿ. ಅತ್ತು ಸುತ್ತಿ ಹೊರಳದಿರು ಅರಚಿ ಪರಚಿ ಕಿರುಚದಿರು. ನಿದಿರಾದೇವಿ ಬರುತಿಹಳು. ನಿನ್ನಯ ಕಣ್ಣಲೇ ಕೂರುವಳು. ಚಂದಿರ ಮಾಮ ಬಂದಿಳಿವ. ಚಂದದ ಊರಿಗೆ ಕರೆದೊಯ್ಯುವ...ಎಂದು ಐಶ್ವರ್ಯಾ ರೈ ಸಮಾಧಾನ ಮಾಡಿದಂತಿದೆ ಅನ್ನಿಸುವುದಿಲ್ಲವೇ?

ಬೇಗ ಈಕಡೆ ಬಂದುಬಿಡಿ ಮೇಡಂ!

ಮೇಡಂ ಬೇಗ ಈ ಕಡೆ ಬಂದುಬಿಡಿ. ಇಲ್ಲಾಂದ್ರೆ ಜನ ಜಮಾಯಿಸಿಕೊಂಡು ಬಿಡ್ತಾರೆ. ಕ್ಯಾಮೆರಾ ಕಣ್ಣಿಂದ ಬೇಗ ಎಸ್ಕೇಪ್ ಆಗಬೇಕು. ಬನ್ನಿ ಬನ್ನಿ ಬೇಗ.

ಈ ಫೋಟೋದಲ್ಲಿರುವುದು ಆರಾಧ್ಯಾಳಾ?

ಕೆಲ ದಿನಗಳ ಹಿಂದೆ ಆರಾಧ್ಯಾಳ ಫೋಟೋ ಒಂದು ಲೀಕ್ ಆಗಿತ್ತು. ಆದರೆ ಇದು ಅಸಲಿಯೋ ನಕಲಿಯೋ ಗೊತ್ತಿಲ್ಲ. ಅಂತರ್ಜಾಲದಲ್ಲಿ ಸರಿದಾಡಿದ ಈ ಫೋಟೋ ಕೆಲ ದಿನಗಳ ಹಿಂದೆ ಭಾರಿ ಸದ್ದು ಮಾಡಿತ್ತು. ಈಗ ಮತ್ತೊಮ್ಮೆ ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ ಅಷ್ಟೇ.


ಆದರೆ ಮಾಧ್ಯಮಗಳು ಮಾತ್ರ ಆರಾಧ್ಯಾಳ ಫೋಟೋ ತೆಗೆಯಲು ಸಾಕಷ್ಟು ಬೆವರು ಹರಿಸುತ್ತಿವೆ. ಚಿಕಾಗೋನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಗಳ ಜೊತೆ ಆಗಮಿಸಿದ್ದರು ಐಶ್ವರ್ಯಾ ರೈ. ಚಿಕಾಗೋಗೆ ತೆರಳುವ ಮುನ್ನ ನ್ಯೂಯಾರ್ಕ್ ಏರ್ ಪೋರ್ಟ್ ನಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದರು.

ಆದಷ್ಟು ತಮ್ಮ ಮಗಳ ಮುಖವನ್ನು ಕ್ಯಾಮೆರಾಗಳ ಕಣ್ಣಿಗೆ ಬೀಳದಂತೆ ಐಶ್ವರ್ಯಾ ಎಚ್ಚರವಹಿಸಿದ್ದರು. ಐಶ್ವರ್ಯಾ ಅವರೇನೋ ತಮ್ಮ ಮಗಳನ್ನು ಎದೆಗವಚಿಕೊಂಡು ಬಚ್ಚಿಟ್ಟುಕೊಂಡರು. ಆದರೆ ಆರಾಧ್ಯಾ ಮಾತ್ರ ಇಣುಕಿ ನೋಡುವ ಮೂಲಕ ಮಾಧ್ಯಮಗಳ ಕಣ್ಣಿಗೆ ತಮ್ಮ ಮುಖಾರವಿಂದವನ್ನು ತೋರಿದರು.

ಇಲ್ಲಿವೆ ನೋಡಿ ಕೆಲವೊಂದು ಅಪರೂಪದ ಫೋಟೋಗಳು. ಆರಾಧ್ಯಾ ತಮ್ಮ ಮುಖವನ್ನು ಸಂಪೂರ್ಣವಾಗಿ ತೋರಿಸದಿದ್ದರೂ ಒಂದು ಪಾರ್ಶ್ವವನ್ನು ಮಾತ್ರ ತೋರಿದ್ದಾರೆ. ಆಕೆಯ ಮುಖ ಸ್ಪಷ್ಟವಾಗಿ ಗೊತ್ತಾಗದೆ ಹೋದರೂ ಫೋಟೋಗಳು ಆಕರ್ಷಕವಾಗಿವೆ. ಒಂದೊಂದಾಗಿ ನೋಡುತ್ತಾ ಹೋಗಿ.

English summary
Actress Aishwarya Rai Bachchan was on her way to attend an event in New York before meeting Abhishek in Chicago. In that gap the people took photographs of the cute baby Aaradhya Bachchan. Though the baby’s face is not clear still the photos were leaked out in sites.
Please Wait while comments are loading...