For Quick Alerts
  ALLOW NOTIFICATIONS  
  For Daily Alerts

  ಚಿರು ಸರ್ಜಾ ಜೊತೆಗಿನ ನೆನಪು ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ

  |

  ನಟ ಚಿರಂಜೀವಿ ಸರ್ಜಾ ಈಗ ನೆನಪು ಮಾತ್ರ. ಚಿಕ್ಕ ವಯಸ್ಸಿನಲ್ಲಿಯೆ ಅಕಾಲಿಕ ಮರಣ ಹೊಂದಿದ ಚಿರು ಸರ್ಜಾ ಸಾವು ಕುಟುಂಬಕ್ಕೆ, ಸ್ನೇಹಿತರಿಗೆ ದೊಡ್ಡ ಆಘಾತವುಂಟುಮಾಡಿದೆ. ಇದೆ ತಿಂಗಳು ಜೂನ್ 7ರಂದು ಚಿರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಿರು ಸಾವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

  Dhruva Sarja has Shared the last photo with his brother Chiranjeevi Sarja | Filmibeat Kannada

  ಚಿರು ನಿಧನಹೊಂದಿ 7 ದಿನಗಳು ಕಳೆದಿದೆ. ವಿಧಿ ಎಷ್ಟು ಕ್ರೂರ ಎಂದು ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿರು ಇಲ್ಲದ ದಿನಗಳನ್ನು ಕುಟುಂಬದವರಿಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿರು ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಹೋದರ ಧ್ರುವ ಸರ್ಜಾ "ನೀನು ನನಗೆ ಮತ್ತೆ ಬೇಕು, ವಾಪಸ್ ಬಾ" ಎಂದು ಬರೆದು ಚಿರು ಜೊತೆಗಿನ ಪೋಸ್ಟ್ ಶೇರ್ ಮಾಡಿದ್ದಾರೆ.

  'ನೀನಿಲ್ಲದೆ ಇರಲು ಆಗುತ್ತಿಲ್ಲ': ಅಣ್ಣ ಚಿರು ಬಗ್ಗೆ ಧ್ರುವ ಭಾವುಕ ನುಡಿ

  ಮಾವ ಅರ್ಜುನ್ ಸರ್ಜಾ, 'ಪ್ರೀತಿಯ ಹುಡುಗ ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ ವಿಧಿ ಎಷ್ಟು ಕ್ರೂರ' ಎಂದು ಬರೆದುಕೊಂಡು ಆಕ್ರೋಶದ ಫೋಟೋ ಹಾಕಿದ್ದಾರೆ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ, ಚಿರು ಜೊತೆಗಿನ ಬಾಲ್ಯದ ನೆನಪನ್ನು ಹಂಚಿಕೊಂಡಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ನೆನಪು ಹಂಚಿಕೊಂಡಿರುವ ಐಶ್ವರ್ಯ, ಚಿರು ಜೊತೆಗಿನ ಬಾಲ್ಯದ ಫೋಟೋವನ್ನು ಶೇರ್ ಮಾಡಿದ್ದಾರೆ. ಐಶ್ವರ್ಯ ಸಹೋದರಿಯರಿಬ್ಬರು ಚಿರು ಜೊತೆ ಇರುವ ಬಾಲ್ಯದ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಚಿರಂಜೀವಿ ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. ಐಶ್ವರ್ಯ ಅಭಿನಯದ ಪ್ರೇಮ ಬರಹ ಚಿತ್ರದ ಒಂದು ಹಾಡಿನಲ್ಲಿ ಚಿರು ಸಹ ಕಾಣಿಸಿಕೊಂಡಿದ್ದರು. ಇದೆಲ್ಲ ಈಗ ನೆನಪು ಮಾತ್ರ.

  English summary
  Arjun Sarja daughter Aishwarya Sarja recall memories Chiranjeevi Sarja's. Aishwarya Sarja share photos with Chiranjeevi Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X