»   » ಸೆನ್ಸಾರ್ ನಲ್ಲಿ 'ಕೃಷ್ಣ' ಪಾಸ್! ಯುಗಾದಿಯಲ್ಲಿ ಅಜೇಯ್ 'ಲೀಲೆ'

ಸೆನ್ಸಾರ್ ನಲ್ಲಿ 'ಕೃಷ್ಣ' ಪಾಸ್! ಯುಗಾದಿಯಲ್ಲಿ ಅಜೇಯ್ 'ಲೀಲೆ'

Posted By:
Subscribe to Filmibeat Kannada

'ಯುಗಾದಿ' ಹಬ್ಬಕ್ಕಿನ್ನೂ ಒಂದು ತಿಂಗಳು ಟೈಮ್ ಇದೆ. ಅಷ್ಟು ಬೇಗ ಎಲ್ಲಾ ಕನ್ನಡಿಗರಿಗೆ 'ಹೊಸ ವರ್ಷದ' ಉಡುಗೊರೆ ನೀಡುವುದಕ್ಕೆ 'ಕೃಷ್ಣ' ಅಜೇಯ್ ರಾವ್ ತಯಾರಾಗಿದ್ದಾರೆ.

'ಯುಗಾದಿ' ಹಬ್ಬದಂದು ಅಜೇಯ್ ರಾವ್ ನಟಿಸಿರುವ 'ಕೃಷ್ಣಲೀಲಾ' ಸಿನಿಮಾ ಬಿಡುಗಡೆಯಾಗಲಿದೆ. ಸೆನ್ಸಾರ್ ಅಂಗಳದಲ್ಲಿ ಇಂದು ಪಾಸ್ ಆಗಿರುವ 'ಕೃಷ್ಣಲೀಲಾ' ಚಿತ್ರಕ್ಕೆ 'ಯು' ಸರ್ಟಿಫಿಕೇಟ್ ಸಿಕ್ಕಿದೆ. ಯಾವುದೇ ಕಟ್ಸ್ ಇಲ್ಲದೆ, ಸೆನ್ಸಾರ್ ಅಂಗಳದಿಂದ ಕ್ಲೀನ್ ಚಿಟ್ ಪಡೆದಿರುವ 'ಕೃಷ್ಣಲೀಲಾ' ಚಿತ್ರ ಅದೇ ಸೆನ್ಸಾರ್ ಮಂಡಳಿಯಿಂದ ಭೇಷ್ ಅನಿಸಿಕೊಂಡಿದೆ.


Ajai Rao starrer Krishna Leela censored-Releasing on Yugadi

'ಕೃಷ್ಣಲೀಲಾ' ಚಿತ್ರದಲ್ಲಿ ಅಜೇಯ್ ರಾವ್ ರದ್ದು ಕ್ಯಾಬ್ ಡ್ರೈವರ್ ಪಾತ್ರ. ಇನ್ನೂ, ನಾಯಕಿ ಮಯೂರಿ, ಮಿಡ್ಲ್ ಕ್ಲಾಸ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. 2010 ರಲ್ಲಿ ಎಲ್ಲಾ ಕನ್ನಡ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆದ ಸ್ಟೋರಿಯನ್ನ ಇಟ್ಕೊಂಡು ಶಶಾಂಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ['ಕೃಷ್ಣಲೀಲಾ' ಚಿತ್ರಕ್ಕೆ ಸ್ಪೂರ್ತಿ ನೀಡಿರುವ ನೈಜ ಕಥೆ ಯಾವುದು?]


ಸೂಪರ್ ಹಾಡುಗಳಿಂದ ಈಗಾಗಲೇ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ 'ಕೃಷ್ಣಲೀಲಾ' ಯುಗಾದಿ ಹಬ್ಬದಂದು ತೆರೆಗೆ ಬರಲಿದೆ. ಕೃಷ್ಣನ ಲೀಲೆಯನ್ನ ಕಣ್ತುಂಬಿಕೊಳ್ಳುವುದಕ್ಕೆ ನೀವು ರೆಡಿಯಾಗಿ. (ಫಿಲ್ಮಿಬೀಟ್ ಕನ್ನಡ)

English summary
Ajai Rao starrer 'Krishna Leela' has been granted 'U' certificate from the Regional Censor Board. 'Krishna Leela' is set to hit the screens across Karnataka on Yugadi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada