»   » ಅಜೇಯ್ ರಾವ್ 'ಕೃಷ್ಣಲೀಲಾ'ಗೆ ಬಾಕ್ಸಾಫೀಸ್ ಉಡೀಸ್

ಅಜೇಯ್ ರಾವ್ 'ಕೃಷ್ಣಲೀಲಾ'ಗೆ ಬಾಕ್ಸಾಫೀಸ್ ಉಡೀಸ್

Posted By:
Subscribe to Filmibeat Kannada

'ಸ್ಮೈಲಿಂಗ್ ಕೃಷ್ಣ' ಅಜೇಯ್ ರಾವ್ ನಿಜವಾಗಲೂ ಸ್ಮೈಲ್ ಮಾಡ್ತಿದ್ದಾರೆ. ಒಂದು ವರ್ಷ ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿರುವ ಪರಿಣಾಮ ಅಜೇಯ್ ರಾವ್ ಖುಷಿಯಲ್ಲಿದ್ದಾರೆ.

ಹೌದು, ಕಳೆದ ವಾರವಷ್ಟೇ ಯುಗಾದಿ ಹಬ್ಬದ ಪ್ರಯುಕ್ತ ಅಜೇಯ್ ರಾವ್ ನಿರ್ಮಾಣದ 'ಕೃಷ್ಣಲೀಲಾ' ಸಿನಿಮಾ ತೆರೆಗೆ ಬಂದಿತ್ತು. ಯಾವುದೇ ಗಿಮಿಕ್ ಇಲ್ಲದೇ, ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೇನರ್ ಆಗಿರುವ ಅಜೇಯ್ ರಾವ್ ಮತ್ತು ಮಯೂರಿ ನಟನೆಯ 'ಕೃಷ್ಣಲೀಲಾ' ಚಿತ್ರ ಕಲೆಕ್ಷನ್ ನಲ್ಲಿ ದಾಖಲೆ ಬರೆದಿದೆ.


krishna leela

ಒಂದು ವಾರದಲ್ಲಿ 'ಕೃಷ್ಣಲೀಲಾ' ಚಿತ್ರ ಗಳಿಸಿರುವುದು ಬರೋಬ್ಬರಿ 3.5 ಕೋಟಿ. 100 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆಕಂಡ 'ಕೃಷ್ಣಲೀಲಾ' ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.


ಒಂದ್ಕಡೆ ವರ್ಲ್ಡ್ ಕಪ್ ಫೀವರ್, ಇನ್ನೊಂದ್ಕಡೆ ರಾಜಕೀಯ ವಿದ್ಯಮಾನ, ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣ ಮತ್ತು ಎಕ್ಸಾಂ ಟೈಮ್. ಇಷ್ಟೆಲ್ಲಾ ಇದ್ದರೂ 'ಕೃಷ್ಣಲೀಲಾ' ಚಿತ್ರ 3.5 ಕೋಟಿ ರೂಪಾಯಿ ಕಮಾಯಿ ಮಾಡಿದೆ ಅಂದ್ರೆ ಮೆಚ್ಚಲೇಬೇಕು. ['ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!]


krishna leela

ಗಾಂಧಿನಗರದ ಪಂಡಿತರು ಹೇಳುವ ಪ್ರಕಾರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ನಂತರ ಸೂಪರ್ ಕಲೆಕ್ಷನ್ ಮಾಡಿ ಮುನ್ನುಗುತ್ತಿರುವುದು ಇದೇ 'ಕೃಷ್ಣಲೀಲಾ'.


ಅಲ್ಲಿಗೆ, ಸೋಲಿನ ಸುಳಿಯಲ್ಲೇ ಸಿಲುಕಿದ್ದ ಅಜೇಯ್ ರಾವ್, ನಿರ್ಮಾಪಕರಾದ ಮೊದಲ ಚಿತ್ರದಲ್ಲೇ ಯಶಸ್ವಿಯಾಗಿದ್ದಾರೆ. ಮತ್ತೊಮ್ಮೆ ಶಶಾಂಕ್-ಅಜೇಯ್ ಕಾಂಬಿನೇಷನ್ ವರ್ಕೌಟ್ ಆಗಿದೆ ಅಂತರ್ಥ.(ಏಜೆನ್ಸೀಸ್)

English summary
Ajay Rao starrer 'Krishna Leela' first week collection report is revealed. Shashank directorial 'Krishna Leela' has collected 3.5 crore in 7 days.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada