»   » ನಟಿ ಸುಮಲತಾ ಟ್ಯಾಟೂ ಹಾಕಿಸಿಕೊಂಡ ಅಜಯ್ ರಾವ್

ನಟಿ ಸುಮಲತಾ ಟ್ಯಾಟೂ ಹಾಕಿಸಿಕೊಂಡ ಅಜಯ್ ರಾವ್

Posted By:
Subscribe to Filmibeat Kannada

ನಟ ಅಜಯ್ ರಾವ್ ಈಗ ನಟಿ ಸುಮಲತಾ ಅಂಬರೀಶ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 'ತಾಯಿಗೆ ತಕ್ಕ ಮಗ' ಸಿನಿಮಾಗಾಗಿ ಅಜಯ್ ರಾವ್ ಕೈ ಮೇಲೆ ಸುಮಲತಾ ಅವರ ಚಿತ್ರ ಅರಳಿದೆ. 'ತಾಯಿಗೆ ತಕ್ಕ ಮಗ' ಅಜಯ್ ರಾವ್ ಅವರ 25ನೇ ಸಿನಿಮಾವಾಗಿದೆ.

ಕೆಲ ತಿಂಗಳುಗಳ ಹಿಂದೆ ಸೆಟ್ಟೆರಿದ್ದ 'ತಾಯಿಗೆ ತಕ್ಕ ಮಗ' ಸಿನಿಮಾದ ಚಿತ್ರೀಕರಣ ಈಗ ನಡೆಯುತ್ತಿದೆ. ಈ ಚಿತ್ರದಲ್ಲಿ ಡಿಫರೆಂಟ್ ಗೆಟಪ್ ನಲ್ಲಿ ಅಜಯ್ ರಾವ್ ಕಾಣಿಸಿಕೊಂಡಿದ್ದಾರೆ. ಅಜಯ್ ರಾವ್ ತಾಯಿಯಾಗಿ ಸುಮಲತಾ ಕಾಣಿಸಿಕೊಂಡಿದ್ದು ಪಾತ್ರಕ್ಕಾಗಿ ಈ ಟ್ಯಾಟೂ ಹಾಕಿಸಿಕೊಳ್ಳಲಾಗಿದೆ.

'ತಾಯಿಗೆ ತಕ್ಕ ಮಗ'ನಿಗೆ ಸಿಕ್ಕಳು ಮುದ್ದಾದ ನಾಯಕಿ

ವಿಶೇಷ ಅಂದರೆ 'ಎಕ್ಸ್ ಕ್ಯೂಸ್ ಮಿ' ಸಿನಿಮಾದ ನಂತರ ಮತ್ತೆ ಈ ಚಿತ್ರದಲ್ಲಿ ಅಜಯ್ ಹಾಗೂ ಸುಮಲತಾ ತಾಯಿ ಮಗನಾಗಿ ಮಿಂಚಿದ್ದಾರೆ. ನಿರ್ದೇಶಕ ಶಶಾಂಕ್ ಈ ಚಿತ್ರವನ್ನು ತಮ್ಮ ಶಶಾಂಕ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ನಂತರ ಮತ್ತೆ ಅಜಯ್ ರಾವ್ ಜೊತೆಗೆ ಶಶಾಂಕ್ ಸಿನಿಮಾ ಮಾಡುತ್ತಿದ್ದಾರೆ.

Ajay Rao gets tattooed Sumalatha's face on his hand.

ಅಂದಹಾಗೆ, ವೇದಗುರು 'ತಾಯಿಗೆ ತಕ್ಕ ಮಗ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಆಶಿಕಾ ರಂಗನಾಥ್ ಈ ಚಿತ್ರದ ನಾಯಕಿ ಆಗಿದ್ದಾರೆ.

English summary
Kannada actor Ajay Rao gets tattooed Sumalatha's face on his hand. Sumalatha playing Ajay Rao's mother role in 'Thayige Thakka Maga' kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada