»   » ಹೊಸ ನಿರೀಕ್ಷೆಯ ಅಜೇಯ್ ರಾವ್ 'ಜೈ ಭಜರಂಗ ಬಲಿ'

ಹೊಸ ನಿರೀಕ್ಷೆಯ ಅಜೇಯ್ ರಾವ್ 'ಜೈ ಭಜರಂಗ ಬಲಿ'

Posted By:
Subscribe to Filmibeat Kannada

'ರೋಸ್' ಸಿನಿಮಾ ಆದ್ಮೇಲೆ ಪಾತ್ರಗಳ ಆಯ್ಕೆ ಬಗ್ಗೆ ತುಂಬಾ ಜಾಗರೂಕತೆ ವಹಿಸುತ್ತಿರುವ ನಟ ಅಜೇಯ್ ರಾವ್, ಈ ಶುಕ್ರವಾರ ನಿಮ್ಮ ಮುಂದೆ ಹೊಸ ಸಿನಿಮಾ ಮೂಲಕ ಹಾಜರಾಗುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಅಜೇಯ್ ಒಪ್ಪಿಕೊಂಡಿದ್ದ 'ಜೈ ಭಜರಂಗ ಬಲಿ' ಚಿತ್ರ ನಾಳೆ ( ಡಿಸೆಂಬರ್ 12 ) ಬಿಡುಗಡೆಯಾಗುತ್ತಿದೆ.

ಲವರ್ ಬಾಯ್ ಆಗಿ ಇಲ್ಲಿವರೆಗೂ ಗಾಂಧಿನಗರದಲ್ಲಿ ಗುರುತಿಸಿಕೊಂಡಿದ್ದ ಅಜೇಯ್ ರಾವ್, 'ಜೈ ಭಜರಂಗ ಬಲಿ' ಚಿತ್ರದ ಮೂಲಕ 'ಕಿಸ್ಸರ್ ಬಾಯ್' ಪಟ್ಟ ಪಡೆದಿದ್ದಾರೆ. ಸ್ಯಾಂಡಲ್ ವುಡ್ ನ ಬೋಲ್ಡ್ ನಟಿ ಸಿಂಧು ಲೋಕನಾಥ್ ಜೊತೆ ಖುಲ್ಲಂ ಖುಲ್ಲಾ ರೋಮ್ಯಾನ್ಸ್ ಮಾಡಿದ ಪರಿಣಾಮ ಅಜೇಯ್ ಗೆ ಈ ಹೊಸ ಬಿರುದು ಸಿಕ್ಕಿದೆ. ['ಸ್ವಪ್ನ'ಸುಂದರಿ ಕೈಹಿಡಿಯುತ್ತಿದ್ದಾರೆ 'ಸ್ಯಾಂಡಲ್ ವುಡ್ ಕೃಷ್ಣ']

Ajay Rao starrer Jai Bajrang Bali grand releasing this Friday

ಮೊದಲ ಬಾರಿಗೆ ಅಜೇಯ್ ರಾವ್ ಜೊತೆ ಜೋಡಿಯಾಗಿರುವ ಸಿಂಧು ಲೋಕನಾಥ್, ಚಿತ್ರದಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಹುಡುಗಿ. ಅಜೇಯ್ ನ ಹಿಂದಕ್ಕೆ ತಳ್ಳಿ ಬುಲ್ಲೆಟ್ ಓಡಿಸುವುದರಿಂದ ಹಿಡಿದು, ಮಳೆಯಲ್ಲಿ ನೆನೆದು ಲಿಪ್ ಲಾಕ್ ಮಾಡುವವರೆಗೂ ಸಿಂಧು ಪಾತ್ರ ಬಿಂದಾಸ್. [ಅಜೇಯ್ ರಾವ್ 'ಜೈ ಭಜರಂಗ ಬಲಿ' ಹಿಂದಿಗೆ ಡಬ್ ]

ಲವ್, ಆಕ್ಷನ್, ಸಸ್ಪೆನ್ಸ್, ಸೆಂಟಿಮೆಂಟ್ ಎಲ್ಲಾ ಮಿಕ್ಸ್ ಆಗಿರುವ ಥ್ರಿಲ್ಲರ್ ಸಿನಿಮಾ 'ಜೈ ಭಜರಂಗ ಬಲಿ'. ರವಿಶಂಕರ್, ಅನಂತ್ ನಾಗ್, ಶೋಭರಾಜ್, ಆದಿ ಲೋಕೇಶ್, ಬುಲ್ಲೆಟ್ ಪ್ರಕಾಶ್, ಅರುಣ್ ಸಾಗರ್ ರಂಥ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಂಗಮ' ಚಿತ್ರವನ್ನು ನಿರ್ದೇಶಿಸಿದ್ದ ರವಿವರ್ಮ, ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರ ಡಬ್ಬಿಂಗ್ ರೈಟ್ಸ್ ಹಿಂದಿಯಲ್ಲಿ ಬೃಹತ್ ಮೊತ್ತಕ್ಕೆ ಸೇಲ್ ಆಗಿದೆ. 'ರೋಸ್' ಚಿತ್ರದಿಂದ ಫಾರ್ಮ್ ಗೆ ಮರಳಿರುವ ಅಜೇಯ್, ಭಜರಂಗಿ ಕೃಪೆಯಿಂದ ಮತ್ತೊಂದು ಯಶಸ್ಸು ಮುಡಿಗೇರಿಸಿಕೊಳ್ಳುತ್ತಾರಾ? ನಾಳೆ ನಿರ್ಧಾರವಾಗಲಿದೆ. (ಫಿಲ್ಮಿಬೀಟ್ ಕನ್ನಡ)

English summary
Jai Bajrang Bali release, Ajay Rao starrer Jai Bajrang Bali, release on December 12th, Movies releasing on December 12th, ಜೈ ಭಜರಂಗ ಬಲಿ ರಿಲೀಸ್, ಅಜೇಯ್ ರಾವ್ ನಟನೆಯ ಜೈ ಭಜರಂಗ ಬಲಿ, ಡಿಸೆಂಬರ್ 12ಕ್ಕೆ ಚಿತ್ರ ಬಿಡುಗಡೆ, ಡಿಸೆಂಬರ್ 12ಕ್ಕೆ ರಿಲೀಸ್ ಆಗುತ್ತಿರುವ ಚಿತ್ರಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada