»   » ಮತ್ತೆ ಒಂದಾಯ್ತು ಕೃಷ್ಣ-ಲೀಲಾ ಜೋಡಿ

ಮತ್ತೆ ಒಂದಾಯ್ತು ಕೃಷ್ಣ-ಲೀಲಾ ಜೋಡಿ

Posted By:
Subscribe to Filmibeat Kannada

ಕೃಷ್ಣ-ಲೀಲಾ ಸಿನಿಮಾದ ನಂತರ ನಟ ಅಜಯ್ ರಾವ್ ಶಶಾಂಕ್ ಅವರ ಬ್ಯಾನರ್ ನಲ್ಲಿ ಅಭಿನಯಿಸುವುದು ಪಕ್ಕಾ ಆಗಿತ್ತು. ಸಿನಿಮಾ ಮಹೂರ್ತ ಮುಗಿಸಿ ಫೋಟೋ ಶೂಟ್ ಆಗಿತ್ತು. ಶಶಾಂಕ್ ತಮ್ಮ ಬ್ಯಾನರ್ ನಲ್ಲಿ ಪ್ರಾರಂಭ ಆಗುತ್ತಿರುವ ಮೊದಲ ಸಿನಿಮಾಗೆ ಹೊಸ ನಿರ್ದೇಶಕನಿಗೆ ಅವಕಾಶ ನೀಡುವ ಮನಸ್ಸು ಕೂಡ ಮಾಡಿದ್ದರು.

ಇನ್ನೇನು ಚಿತ್ರೀಕರಣ ಶುರುವಾಗಬೇಕು ಅನ್ನುವಷ್ಟರಲ್ಲಿ ನಿರ್ಮಾಪಕ, ನಿರ್ದೇಶಕ ಶಶಾಂಕ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ತಾಯಿಗೆ ತಕ್ಕ ಮಗ ಚಿತ್ರವನ್ನ ತಾವೇ ನಿರ್ದೇಶನ ಮಾಡುವುದಾಗಿ ತಿಳಿಸಿದ್ದಾರೆ. ಚಿತ್ರದಲ್ಲಿ ಅಜಯ್ ರಾವ್ ಜೊತೆಯಾಗಿ ಆಶಿಕಾ ರಂಗನಾಥ್ ಅಭಿನಯ ಮಾಡುತ್ತಿದ್ದಾರೆ.

Ajay Rao starrer 'Tayige Takkamaga' film directed by Shashank

ಸುಮಾರು ವರ್ಷಗಳ ನಂತರ ಸುಮಲತಾ ಹಾಗೂ ಅಜಯ್ ರಾವ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಮೊದಲಿಗೆ ರಘುಕೋವಿ ಹಾಗೂ ವೇದ್ ಗುರು ಇಬ್ಬರಲ್ಲಿ ಒಬ್ಬರು ತಾಯಿಗೆ ತಕ್ಕ ಮಗ ಚಿತ್ರವನ್ನ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು.

ಆದರೆ ಈಗ ಚಿತ್ರವನ್ನ ಶಶಾಂಕ್ ಅವರೇ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಪುನೀತ್ ಅಭಿನಯದ ಸಿನಿಮಾ ಇನ್ನೂ ತಡವಾಗುವ ಹಿನ್ನಲೆಯಲ್ಲಿ ಶಶಾಂಕ್ ಸದ್ಯ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಬ್ಯುಸಿ ಆಗಲಿದ್ದಾರೆ. ಅದ್ಬುತವಾಗಿ ಕಥೆ ಮಾಡಿಕೊಂಡಿರುವ ಶಶಾಂಕ್ ಈ ಬಾರಿಯೂ ಸಕ್ಸಸ್ ನ ಬಾಗಿಲು ತಟ್ಟುವ ಉತ್ಸಾಹದಲ್ಲಿದ್ದಾರೆ.

ಈಗಾಗಲೇ ಕೃಷ್ಣನ್ ಲವ್ ಸ್ಟೋರಿ ಹಾಗೂ ಕೃಷ್ಣ ಲೀಲಾ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಅಜಯ್ ಮತ್ತು ಶಶಾಂಕ್ ಮತ್ತೆ ಒಂದಾಗಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

English summary
Kannada Actor Ajay Rao starrer 'Tayige Takkamaga' film directed by Shashank. The news was that director Ved Guru would direct the film. Aashika Ranganath and Sumalatha are acting in the movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X