ಮಗಳ ಜೊತೆ ಹೆಜ್ಜೆ ಹಾಕಿದ ನಟ ಅಜಯ್ ರಾವ್, ಫೋಟೋ ವೈರಲ್

'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

ಸಿನಿಮಾ ಬಿಟ್ಟು ಖಾಸಗಿ ಜೀವನದಲ್ಲೂ ಅಜಯ್ ರಾವ್ ತುಂಬಾ ಬ್ಯುಸಿಯಿದ್ದಾರೆ. ಅದಕ್ಕೆ ಕಾರಣ ಮಗಳು ಚರಿಷ್ಮಾ. ಅಜಯ್ ರಾವ್ ಮತ್ತು ಸಪ್ನ ದಂಪತಿಯ ಮುದ್ದು ಮಗಳು ಚರಿಷ್ಮಾ. ಲಾಕ್‌ಡೌನ್ ವೇಳೆ ಕುಟುಂಬದ ಜೊತೆ ಹೆಚ್ಚು ಸಮಯ ಕಳೆದ ಅಜಯ್ ರಾವ್ ಈಗ ತಮ್ಮ ಮಗಳ ಜೊತೆ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಅಜಯ್ ರಾವ್ ಶೇರ್ ಮಾಡಿಕೊಂಡಿರುವ ಮಗಳ ಮುದ್ದಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಆಕರ್ಷಣೆಯಾಗಿದೆ. ಅಜಯ್ ರಾವ್ ಮತ್ತು ಮಗಳು ಚರಿಷ್ಮಾ ಒಟ್ಟಿಗೆ ಹೆಜ್ಜೆ ಹಾಕುತ್ತಿರುವ ಫೋಟೋಗೆ ''ನನ್ನ ಏಂಜಲ್‌ ಜೊತೆ ಪುಟ್ಟ ಹೆಜ್ಜೆ'' ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ.

Ajay Rao Walking with his Daughter; Picture Goes Viral on Social Media

ತಂದೆ ಮತ್ತು ಮಗಳ ಜೋಡಿ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚರಿಷ್ಮಾ ಬಹಳ ಮುದ್ದಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ದೃಷ್ಟಿ ತೆಗೆಯುತ್ತಿದ್ದಾರೆ.

ಅಂದ್ಹಾಗೆ, ಅಜಯ್ ರಾವ್ ಮತ್ತು ಸಪ್ನ ಅವರ ಮದುವೆ 2014ರಲ್ಲಿ ನೆರವೇರಿತ್ತು. ನಾಲ್ಕು ವರ್ಷದ ಬಳಿಕ ಹೆಣ್ಣು ಮಗುವಿಗೆ ಈ ದಂಪತಿ ಜನ್ಮ ನೀಡಿದ್ದರು.

ಇನ್ನುಳಿದಂತೆ ಅಜಯ್ ರಾವ್ ಅಭಿನಯದ ಮೂರು ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಕೃಷ್ಣ ಟಾಕೀಸ್, ಶೋಕಿವಾಲ ಮತ್ತು ರೈನ್‌ಬೋ ಚಿತ್ರಗಳಲ್ಲಿ ಅಜಯ್ ರಾವ್ ನಟಿಸುತ್ತಿದ್ದಾರೆ.

More from Filmibeat

English summary
Kannada actor Ajay Rao walking with his Daughter; Picture Goes Viral on Social Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X