For Quick Alerts
  ALLOW NOTIFICATIONS  
  For Daily Alerts

  ಗಟ್ಟಿಮೇಳ.. ಗಟ್ಟಿಮೇಳ : ಗೀತಾಂಜಲಿಗೆ ಅಜಯ್ ಮಾಂಗಲ್ಯ ಧಾರಣೆ

  |
  ರವಿಚಂದ್ರನ್ ಮಗಳ ಮದುವೆ ಕಣ್ತುಂಬಿಕೊಳ್ಳಿ

  ನಟ ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ವಿವಾಹ ಇಂದು ನೆರವೇರಿದೆ. ಇಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗಿನ ಶುಭ ವೇಳೆಯಲ್ಲಿ ಮುಹೂರ್ತ ಕಾರ್ಯಕ್ರಮಗಳನ್ನು ಮಾಡಲಾಗಿದೆ.

  ರವಿಚಂದ್ರನ್ ಮಗಳ ಅರಿಶಿಣ ಮತ್ತು ಮೆಹಂದಿ ಶಾಸ್ತ್ರದ ಸಂಭ್ರಮ

  ಕಟಕ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆದಿದೆ. ಉದ್ಯಮಿ ಅಜಯ್ ಜೊತೆಗೆ ಗೀತಾಂಜಲಿ ಸಪ್ತಪದಿ ತುಳಿದಿದ್ದಾರೆ. ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ಜರುಗುತ್ತಿದೆ.

  ಗಾಜಿನ ರಾಜಹಂಸದ ವೇದಿಕೆಯಲ್ಲಿ ನವ ಜೋಡಿ ಕಂಗೊಳಿಸುತ್ತಿದೆ. ವಿಶೇಷವಾಗಿ ರವಿಚಂದ್ರನ್ ಅವ್ರೇ ವೇದಿಕೆ ಡಿಸೈನ್ ಮಾಡಿದ್ದಾರೆ. ಕೆಂಪು ಬಣ್ಣದ ಸೀರೆಯಲ್ಲಿ ಗೀತಾಂಜಲಿ ಮಿಂಚಿದ್ದಾರೆ. ಇಡೀ ರವಿಚಂದ್ರನ್ ಕುಟುಂಬ, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಮದುವೆಗೆ ಸಾಕ್ಷಿಯಾಗಿದ್ದಾರೆ.

  ಅಂದಹಾಗೆ, ನಿನ್ನೆ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ರಜನಿಕಾಂತ್, ಚಿರಂಜೀವಿ, ಪ್ರಭು, ಅನಂತ್ ನಾಗ್, ಉಪೇಂದ್ರ, ಯಶ್, ರಮೇಶ್ ಅರವಿಂದ್, ಶಿವರಾಜ್ ಕುಮಾರ್, ಶ್ರುತಿ, ಸುಧಾರಾಣಿ, ಗಣೇಶ್, ಪ್ರಿಯಾಂಕ ಉಪೇಂದ್ರ ಸೇರಿದಂತೆ ಸಾಕಷ್ಟು ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  ಇನ್ನು ನಾದಬ್ರಹ್ಮ ಹಂಸಲೇಖ ತಂಡದಿಂದ ಸಂಗೀತಗೋಷ್ಟಿ ಕಾರ್ಯಕ್ರಮ ಮದುವೆಯ ಹೈಲೈಟ್ ಗಳಲ್ಲಿ ಒಂದಾಗಿದೆ. ರವಿಚಂದ್ರನ್ ಹಾಡುಗಳ ಸಂಗೀತ ಸುಧೆ ಇಲ್ಲಿ ನಡೆಯಿತು.

  English summary
  Ajay tied knot to actor Ravichandran's daughter Geethanjali Today (May 9th) in white petals palace ground, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X