»   » ಅಜಿತ್ ಸಿನಿಮಾಗೆ ಒಳ್ಳೆ ಓಪನಿಂಗ್, ಫ್ಯಾನ್ಸ್ ನಿಂದ ರಕ್ತದಾನ

ಅಜಿತ್ ಸಿನಿಮಾಗೆ ಒಳ್ಳೆ ಓಪನಿಂಗ್, ಫ್ಯಾನ್ಸ್ ನಿಂದ ರಕ್ತದಾನ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಿಡುಗಡೆಗೂ ಮುನ್ನ ಬಾಲಗ್ರಹ ಪೀಡೆ ಅನುಭವಿಸಿದ್ದ ಅಜಿತ್, ತ್ರಿಶಾ, ಅನುಷ್ಕಾ ಶೆಟ್ಟಿ ಅಭಿನಯದ ಎನ್ನೈ ಅರಿಂಧಾಳ್ ಚಿತ್ರಕ್ಕೆ ಬೆಂಗಳೂರಿನಲ್ಲೂ ಭರ್ಜರಿ ಓಪನಿಂಗ್ ಸಿಕ್ಕಿದೆ. ಫೆಬ್ರವರಿ 5 ರಂದು ಬಿಡುಗಡೆಯಾದ ಚಿತ್ರಕ್ಕೆ ಬಾಂಬ್ ಬೆದರಿಕೆ ಕೂಡಾ ಬಂದಿತ್ತು. ಅದರೆ, ತಿರುಪತಿ ತಿಮ್ಮಪ್ಪನ ಕೃಪೆಯೋ ಏನೋ ಚಿತ್ರ ಎಲ್ಲೆಡೆ ಉತ್ತಮ ಪ್ರದರ್ಶನ ಕಂಡಿದೆ.

ಅಜಿತ್ ಅವರು ಕುಟುಂಬ ಸಮೇತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡ ವೇಳೆಯಲ್ಲೇ ಚೆನ್ನೈನ ಚಿತ್ರಮಂದಿರಗಳಿಗೆ ಬಾಂಬ್ ಬೆದರಿಕೆ ಬಂದಿದ್ದು ಕಾಕತಾಳೀಯವಾಗಿತ್ತು. ಇತ್ತ ಬೆಂಗಳೂರಿನ ಮಲ್ಲೇಶ್ವರದಲ್ಲಿ ಇಂದು ಹಬ್ಬದ ವಾತಾವರಣ ಕಂಡು ಬಂದಿತು. ಪಟಾಕಿ ಸಿಡಿತ, ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕದ ಜೊತೆಗೆ ಅಜಿತ್ ಅಭಿಮಾನಿಗಳು ಅರ್ಥಪೂರ್ಣವಾಗಿ ರಕ್ತದಾನ, ಅನ್ನದಾನ ಕಾರ್ಯಕ್ರಮವನ್ನು ಕೂಡಾ ಅಜಿತ್ ಅಭಿಮಾನಿಗಳು ಹಮ್ಮಿಕೊಂಡಿದ್ದರು. [ತಿರುಮಲದಲ್ಲಿ ಅಜಿತ್, ಸಂಕಟ ಬಂದಾಗ ವೆಂಕಟನ ಸ್ಮರಣೆ]

ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಲಿಂಗಾ', ವಿಕ್ರಮ್ ನಟನೆಯ 'ಐ' ಹಾಗೂ ವಿಜಯ್ ಅವರ 'ಕತ್ತಿ' ಚಿತ್ರದ ದಾಖಲೆಯನ್ನು ಅಜಿತ್ ಕುಮಾರ್ ಅವರ ಹೊಚ್ಚ ಹೊಸ ಚಿತ್ರದ ಟೀಸರ್ ಧೂಳಿಪಟ ಮಾಡಿದ ಸುದ್ದಿ ಎಲ್ಲರಿಗೂ ಗೊತ್ತೇ ಇದೆ.ಈಗ ಚಿತ್ರ ಬಿಡುಗಡೆಯಾದ ಮೇಲೆ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿದೆ. ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ...

ಬಾಂಬ್ ಬೆದರಿಕೆ ಬಂದಿತ್ತು

ಎನ್ನೈ ಅರಿಂದಾಲ್ ಚಿತ್ರ ಪ್ರದರ್ಶಿಸಿದರೆ ಚಿತ್ರಮಂದಿರವನ್ನು ಧೂಳಿಪಟ ಮಾಡುವುದಾಗಿ ಚೆನ್ನೈನ ಉಧಯಂ ಚಿತ್ರಮಂದಿರಕ್ಕೆ ಬೆದರಿಕೆ ಪತ್ರ ಬಂದಿದೆ.ಇದಲ್ಲದೆ ಇನ್ನೂ ಏಳೆಂಟು ಚಿತ್ರಮಂದಿರಕ್ಕೂ ಇದೇ ರೀತಿ ಬೆದರಿಕೆ ಪತ್ರ ರವಾನೆಯಾಗಿತ್ತು. ಹೀಗಾಗಿ ಬೆಂಗಳೂರು ಚಿತ್ರ ಮಂದಿರಕ್ಕೂ ಬಿಗಿ ಭದ್ರತೆ ಒದಗಿಸಲಾಗಿತ್ತು.

ಬಹುನಿರೀಕ್ಷಿತ ಚಿತ್ರಕ್ಕೆ ಒಳ್ಳೆ ಓಪನಿಂಗ್

ಬಹುನಿರೀಕ್ಷಿತ ಚಿತ್ರ ಎನ್ನೈ ಅರಿಂದಾಲ್ ಎ.ಎಂ ರತ್ನಂ ನಿರ್ಮಾಣದ ಎನ್ನೈ ಅರಿಂದಾಲ್ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೌತಮ್ ಮೆನನ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಅಜಿತ್ ಅವರ ಜೊತೆಗೆ ತ್ರೀಷಾ ಕೃಷ್ಣನ್, ಅನುಷ್ಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.ಅಜಿತ್ ಅವರು ಮೂರು ವಿಭಿನ್ನ ಶೇಡ್ ಗಳಿರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರಿನ ಚಿತ್ರಮಂದಿರಲ್ಲಿ ಅಜಿತ್ ಚಿತ್ರ

ನಟರಾಜ ಚಿತ್ರಮಂದಿರದ ಬಳಿ ಅಖಿಲ ಕರ್ನಾಟಕ ಅಜಿತ್ ಅಭಿಮಾನಿಗಳ ಸಂಘದಿಂದ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು

ಬೃಹತ್ ಕಟೌಟ್ ಗೆ ಅಭಿಷೇಕ

ಅಜಿತ್ ಬಯಸದಿದ್ದರೂ ಅವರ ಅಭಿಮಾನಿಗಳು ಕೇಳಬೇಕಲ್ಲ. ಅಜಿತ್ ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲಾಯಿತು.

ಅಭಿಮಾನಿ ಸಂಘದ ರಕ್ತದಾನ ಶಿಬಿರ

ಶುಕ್ರವಾರ ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30 ರ ತನಕ ಅಜಿತ್ ಅಭಿಮಾನಿ ಸಂಘದ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಚಿತ್ರಮಂದಿರಕ್ಕೆ ಬಂದವರಿಗೆಲ್ಲ ಬಿರಿಯಾನಿ

ಚಿತ್ರಮಂದಿರಕ್ಕೆ ಬಂದವರಿಗೆಲ್ಲ ಬಿರಿಯಾನಿ ಹಂಚಿದ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದರು.

ಅಜಿತ್ ಚಿತ್ರವಿರುವ ಟೀ ಶರ್ಟ್ ಗೆ ಬೇಡಿಕೆ

ಅಜಿತ್ ಚಿತ್ರವಿರುವ ಟೀ ಶರ್ಟ್ ಗೆ ಬೇಡಿಕೆ ಕಂಡು ಬಂದಿತು. ಎನ್ನೈ ಅರಿಂಧಾಳ್ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿದ್ದು, ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ವ್ಯಕ್ತವಾಗಿದೆ.

English summary
Yennai Arindhaal storm took Bangalore by surprise as many Bangaloreans started their day with celebrations. Thala Ajith is a popular star in Bangalore too and his latest release Yennai Arindhaal was welcomed with great joy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada