For Quick Alerts
  ALLOW NOTIFICATIONS  
  For Daily Alerts

  ಅಕ್ಕಿನೇನಿ ಕುಟುಂಬದ ಮರಿ ಕುಡಿ ಟಾಲಿವುಡ್ ಗೆ ಆರಂಗೇಟ್ರಂ

  By Harshitha
  |

  ತೆಲುಗು ಸಿನಿ ಅಂಗಳಕ್ಕೆ ಅಕ್ಕಿನೇನಿ ಕುಟುಂಬದ ಕೊಡುಗೆ ಅಪಾರ. ಅಜ್ಜ ಅಕ್ಕಿನೇನಿ ನಾಗೇಶ್ವರ್ ರಾವ್, ಮಗ ಅಕ್ಕಿನೇನಿ ನಾಗಾರ್ಜುನ, ಸೊಸೆ ಅಮಲಾ ನಾಗಾರ್ಜುನ ಮೊಮ್ಮಗ ನಾಗ ಚೈತನ್ಯ ಈಗಾಗಲೇ ಟಾಲಿವುಡ್ ನಲ್ಲಿ ಜನಮೆಚ್ಚುಗೆ ಗಳಿಸಿದ್ದಾರೆ.

  ಇದೇ ಸಾಲಿನಲ್ಲಿ ಅಕ್ಕಿನೇನಿ ನಾಗಾರ್ಜುನ ಮರಿಕುಡಿ, ಅಖಿಲ್ ಅಕ್ಕಿನೇನಿ ಇಂದು ಸೇರ್ಪಡೆಯಾಗಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ ಮುಹೂರ್ತ ಮುಗಿಸಿ, ತೆಲುಗು ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದಾರೆ ಅಖಿಲ್ ಅಕ್ಕಿನೇನಿ.

  ಇಂದು ( ಡಿಸೆಂಬರ್ 17 ) ಹೈದರಾಬಾದ್ ನಲ್ಲಿ ಅಖಿಲ್ ಅಕ್ಕಿನೇನಿ ತಮ್ಮ ಚೊಚ್ಚಲ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ತಮ್ಮ ಫ್ಯಾಮಿಲಿ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಅಖಿಲ್ ಅಭಿನಯದ ಚಿತ್ರದ ಮುಹೂರ್ತ ನಡೆದಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ವಿಶೇಷ ಅಂದ್ರೆ, ಈ ಚಿತ್ರದ ಮುಹೂರ್ತ ಶಾಟ್ ಗೆ ಅಖಿಲ್ ಅಮ್ಮ ನಟಿ ಅಮಲಾ, ಕ್ಲಾಪ್ ಮಾಡಿದ್ರೆ, ಅಪ್ಪ ನಾಗಾರ್ಜುನ ನಿರ್ದೇಶನ ಮಾಡಿದರು. ಇನ್ನೂ ಕ್ಯಾಮರಾ ಸ್ವಿಚ್ ಆನ್ ಮಾಡಿದ್ದು ಅಣ್ಣ ನಾಗ ಚೈತನ್ಯ. ಟಾಲಿವುಡ್ ನ ಹಿಟ್ ಡೈರೆಕ್ಟರ್ ವಿ.ವಿ.ವಿನಾಯಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಸಖತ್ ಸ್ಪೆಷಲ್ ಆದ್ರೆ, ಸ್ಟೈಲಿಶ್ ಹೀರೋ ನಿತಿನ್, ಚಿತ್ರಕ್ಕೆ ಬಂಡವಾಳ ಹಾಕ್ತಿದ್ದಾರೆ.

  ಇಷ್ಟೆಲ್ಲಾ ಸ್ಪೆಷಾಲಿಟೀಸ್ ಇರುವ ಅಖಿಲ್ ಆರಂಗೇಟ್ರಂ ಮಾಡುತ್ತಿರುವ ಚಿತ್ರಕ್ಕಿನ್ನು ಟೈಟಲ್ ಫಿಕ್ಸ್ ಆಗಿಲ್ಲ. ಪ್ರೊಡಕ್ಷನ್ ನಂ.4 ಹೆಸರಲ್ಲಿ ಚಿತ್ರ ಸೆಟ್ಟೇರಿದೆ. ಅಖಿಲ್ ಜೊತೆ ಡ್ಯುಯೆಟ್ ಹಾಡುವುದಕ್ಕೆ ರಾಶಿ ಖನ್ನಾ ತಯಾರಾಗಿದ್ದಾರೆ. ನಿರ್ಮಾಣದ ಜೊತೆಗೆ ಚಿತ್ರದಲ್ಲಿ ಅತಿಥಿ ಪಾತ್ರವನ್ನೂ ಮಾಡುತ್ತಿದ್ದಾರಂತೆ ನಿತಿನ್.

  ಅಂತೂ ಅಕ್ಕಿನೇನಿ ಕುಟುಂಬದ ಮತ್ತೋರ್ವ ಕುಡಿ ಇಂದು ಬಣ್ಣ ಹಚ್ಚಿದ್ದಾಗಿದೆ. ತೆರೆಮೇಲೆ ಅಖಿಲ್ ಅಬ್ಬರವನ್ನು ನೋಡಿ ಶಿಳ್ಳೆ-ಚಪ್ಪಾಳೆ ಹೊಡೆಯುವುದು ಒಂದೇ ಬಾಕಿ.

  English summary
  Akkineni Nagarjuna's second son Akhil Akkineni's Debute untitled movie launched in Hyderabad today, December 17th. Hit Director V.V.Vinayak is directing this movie, which is produced by Actor Nitin.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X