For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಸಿನಿಮಾವನ್ನು 'ಅತ್ಯದ್ಭುತ' ಎಂದು ಹೊಗಳಿದ ತೆಲುಗು ಸ್ಟಾರ್ ನಟ

  |

  ನಟ ಸುದೀಪ್ 'ಫ್ಯಾಂಟಮ್' ಎನ್ನುವ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್, ವಿಡಿಯೋ ತುಣುಗಳು ಈಗಾಗಲೇ ಬಿಡುಗಡೆ ಆಗಿದ್ದು, ಭಾರಿ ಗಮನ ಸೆಳೆದಿವೆ.

  ಸುದೀಪ್ ಅವರ ಪ್ಯಾಂಟಮ್ ಸಿನಿಮಾ ಬಗ್ಗೆ ನೆರೆ ಭಾಷೆಯ ಸೂಪರ್ ಸ್ಟಾರ್ ನಟರೊಬ್ಬರು ಮನಸಾರೆ ಹೊಗಳಿದ್ದಾರೆ. 'ಭಾರತ ಸಿನಿಮಾದಲ್ಲಿಯೇ ಅದೊಂದು ಭಿನ್ನವಾದ ಸಿನಿಮಾ, ನಿಮ್ಮ ಸಿನಿಮಾ ಗುಣಮಟ್ಟದ ಪ್ರಮಾಣವನ್ನು ಎತ್ತರಿಸಿದೆ' ಎಂದು ಹೇಳಿದ್ದಾರೆ.

  ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಕತ್ರಿನಾ ಕೈಫ್; ನಿರ್ಮಾಪಕ ಜಾಕ್ ಮಂಜು ಹೇಳಿದ್ದೇನು?

  ನಟ ಸುದೀಪ್, ತೆಲುಗು ಬಿಗ್‌ಬಾಸ್ ನಲ್ಲಿ ಅತಿಥಿ ನಿರೂಪಕರಾಗಿ ಪಾಲ್ಗೊಂಡಿದ್ದರು. ನಟ ಅಕ್ಕಿನೇನಿ ನಾಗಾರ್ಜುನ ಜೊತೆಗೆ ಸುದೀಪ್ ಸಹ ಶೋ ಅನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಸುದೀಪ್ ಅವರ ಮುಂಬರಲಿರುವ ಸಿನಿಮಾ ಬಗ್ಗೆ ನಾಗಾರ್ಜುನ ಮೇಲ್ಕಂಡಂತೆ ಮಾತನ್ನಾಡಿದ್ದಾರೆ.

  ಅತ್ಯದ್ಭುತವಾದ ಸಿನಿಮಾ ಮಾಡಿದ್ದೀರಿ: ನಾಗಾರ್ಜುನ

  ಅತ್ಯದ್ಭುತವಾದ ಸಿನಿಮಾ ಮಾಡಿದ್ದೀರಿ: ನಾಗಾರ್ಜುನ

  'ನಾನು ನಿಮ್ಮ ನಿರ್ದೇಶಕ ಅನುಪ್ ಭಂಡಾರಿಯನ್ನು ಭೇಟಿ ಮಾಡಿದೆ. ಆತ ನನಗೆ ಶೋ ರೀಲ್‌ಗಳನ್ನು ತೋರಿಸಿದ, ನೀವು ಅತ್ಯದ್ಬುತವಾದ ಸಿನಿಮಾವನ್ನು ಮಾಡಿದ್ದೀರಿ, ಭಾರತ ಸಿನಿಮಾದ ಸ್ಟಾಂಡರ್ಡ್ ಅನ್ನು ಎತ್ತರಕ್ಕೆ ಏರಿಸಿದ್ದೀರಿ' ಎಂದರು ನಾಗಾರ್ಜುನ.

  ಪ್ಯಾನ್ ಇಂಡಿಯಾ ನಮ್ಮ ಉದ್ದೇಶವಾಗಿರಲಿಲ್ಲ: ಸುದೀಪ್

  ಪ್ಯಾನ್ ಇಂಡಿಯಾ ನಮ್ಮ ಉದ್ದೇಶವಾಗಿರಲಿಲ್ಲ: ಸುದೀಪ್

  ಇದಕ್ಕೆ ಉತ್ತರಿಸಿದ ಸುದೀಪ್, 'ನಾವು ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸಿನಿಮಾ ಮಾಡಬೇಕು ಎಂದುಕೊಂಡಿರಲಿಲ್ಲ, ಆದರೆ ಎಲ್ಲರಿಗೂ ಕನೆಕ್ಟ್ ಆಗುವಂತಹಾ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆವು, ಎಲ್ಲರಿಗೂ ಕನೆಕ್ಟ್ ಆಗುವಂತಹಾ ಕತೆ ಹೇಳಬೇಕು ಎಂದುಕೊಂಡಿದ್ದೆವು ಅಷ್ಟೆ' ಎಂದಿದ್ದಾರೆ.

  ತೆಲುಗು ಬಿಗ್‌ಬಾಸ್ ವೇದಿಕೆ ಮೇಲೆ ಕನ್ನಡ ಮಾತನಾಡಿದ ಸುದೀಪ್

  ನಾಗಾರ್ಜುನ ಗೆ ಧನ್ಯವಾದ

  ನಾಗಾರ್ಜುನ ಗೆ ಧನ್ಯವಾದ

  ಅಷ್ಟು ದೊಡ್ಡದಾಗಿ ಸಿನಿಮಾ ಮಾಡುವಾಗ ನಮಗೆ ಸಹಾಯಕ್ಕೆ ಬಂದಿದ್ದು, ನಿಮ್ಮ ಅನ್ನಪೂರ್ಣೇಶ್ವರಿ ಸ್ಟುಡಿಯೊ, ಇಲ್ಲಿಯೇ ನಾವು ದೊಡ್ಡ ಸೆಟ್‌ಗಳಲ್ಲಿ ಚಿತ್ರೀಕರಣ ಮಾಡಿದೆವು, ಇದಕ್ಕೆ ನಾವು ನಿಮಗೆ ಧನ್ಯವಾದ ಹೇಳಬೇಕು' ಎಂದರು ಸುದೀಪ್.

  ಇವರಿಬ್ಬರಲ್ಲಿ Sudeep ಗೆ ಯಾರಾಗಲಿದ್ದಾರೆ ಪರ್ಫೆಕ್ಟ್ ಜೋಡಿ | Filmibeat Kannada
  ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ

  ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ

  ಅನುಪ್ ಭಂಡಾರಿ ನಿರ್ದೇಶನದ ಪ್ಯಾಂಟಮ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎನ್ನಲಾಗುತ್ತಿದೆ. ಪ್ಯಾಂಟಮ್‌ ಸಿನಿಮಾದ ಬಹುತೇಕ ಚಿತ್ರೀಕರಣ ಹೈದರಾಬಾದ್‌ನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿಯೇ ಆಗಿದೆ. ಸಿನಿಮಾದಲ್ಲಿ ಸುದೀಪ್ ಜೊತೆಗೆ ಶ್ರದ್ಧಾ ಶ್ರೀನಾಥ್, ನಿರುಪ್ ಭಂಡಾರಿ, ನೀತಾ ಅಶೋಕ್ ಇನ್ನೂ ಹಲವರು ನಟಿಸುತ್ತಿದ್ದಾರೆ.

  English summary
  Akkineni Nagarjuna praised Sudeep's upcoming movie Phantom. He said they lifted standard of Indian cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X