»   » ನಟ ಅಕ್ಕಿನೇನಿ ನಾಗೇಶ್ವರರಾವ್ ಕಂಡೀಷನ್ ಕ್ರಿಟಿಕಲ್

ನಟ ಅಕ್ಕಿನೇನಿ ನಾಗೇಶ್ವರರಾವ್ ಕಂಡೀಷನ್ ಕ್ರಿಟಿಕಲ್

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅಕ್ಕಿನೇನಿ ನಾಗೇಶ್ವರ ರಾವ್ (90) ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವುದು ಗೊತ್ತೇ ಇದೆ. ಈಗ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತೆಲುಗು ಪತ್ರಿಕೆಗಳಲ್ಲಿ ವರದಿಯಾಗಿದೆ.

ಕೆಲದಿನಗಳ ಹಿಂದಷ್ಟೇ ಅವರಿಗೆ ಶಸ್ತ್ರಚಿಕಿತ್ಸೆಯೂ ನಡೆದಿದೆ. ಆಗಿನಿಂದ ಅವರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಹೈದರಾಬಾದಿನ ಜೂಬ್ಲಿಹಿಲ್ಸ್ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ಕಾರ್ಪೋರೇಟ್ ಆಸ್ಪತ್ರೆ ವೈದ್ಯರು ಬಂದು ಚಿಕಿತ್ಸೆ ನೀಡುತ್ತಿದ್ದಾರೆ. [ಖ್ಯಾತ ನಟ ಅಕ್ಕಿನೇನಿ ನಾಗಶ್ವೇರರಾವ್ ಗೆ ಕ್ಯಾನ್ಸರ್]

Akkineni Nageshwara Rao

ನಾಗೇಶ್ವರರಾವ್ ಅವರ ಪುತ್ರ ಅಕ್ಕಿನೇನಿ ನಾಗಾರ್ಜುನ ಹಾಗೂ ಇತರೆ ಕುಟುಂಬ ಸದಸ್ಯರು ಪ್ರತಿದಿನ ಬಂದು ಅಲ್ಲೇ ಸ್ವಲ್ಪ ಸಮಯ ಇದ್ದು ಹೋಗುತ್ತಿದ್ದಾರೆ. ಆದರೆ ನಾಗೇಶ್ವರ ರಾವ್ ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ವಿವರಗಳನ್ನು ನೀಡಲು ಅವರ ಕುಟುಂಬಿಕರು ಬಯಸುತ್ತಿಲ್ಲ.

ವೈದ್ಯ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಕ್ಯಾನ್ಸರ್ ಕಣಗಳು ಇರುವುದು ಕೆಲ ತಿಂಗಳ ಹಿಂದೆ ಪತ್ತೆಯಾಗಿದೆ. ಈ ವಿಷಯವನ್ನು ಸ್ವತಃ ಅಕ್ಕಿನೇನಿ ನಾಗೇಶ್ವರ ರಾವ್ ಮಾಧ್ಯಮಗಳಿಗೆ ತಿಳಿಸಿದ್ದರು. ಚಿಕಿತ್ಸೆಗಾಗಿ ಅವರು ಹೈದರಾಬಾದಿನ ಕಿಮ್ಸ್ ಆಸ್ಪತ್ರೆಗಾಗಿ ದಾಖಲಾಗಿದ್ದರು.

ನಾಗೇಶ್ವರ ರಾವ್ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಈಗಾಗಲೆ ಹಲವು ತಾರೆಗಳ ಸಾವು ನೋವುಗಳನ್ನು ಕಂಡಿರುವ ತೆಲುಗು ಚಿತ್ರರಂಗಕ್ಕೆ ಉದಯ್ ಕಿರಣ್ ಆತ್ಮಹತ್ಯೆ ಬರಸಿಡಿಲಾಗಿ ಎರಗಿತ್ತು. ಈಗ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಆರೋಗ್ಯ ವಿಷಮಿಸಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

English summary
Akkineni Nageswara Rao is critical. The 90yr old actor who is fighting Intestine cancer from a while has been admitted to hospital this morning. He was discharged shortly after that and he is currently under intensive care by a team of doctors at his residence. According to our reliable sources, his condition is critical to its highest degree and the family members are deeply worried.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada