»   » 'ಗೀತಾ' ಖ್ಯಾತಿಯ ಅಕ್ಷತಾ ರಾವ್ ಸೆಕೆಂಡ್ ಇನ್ನಿಂಗ್ಸ್

'ಗೀತಾ' ಖ್ಯಾತಿಯ ಅಕ್ಷತಾ ರಾವ್ ಸೆಕೆಂಡ್ ಇನ್ನಿಂಗ್ಸ್

Posted By:
Subscribe to Filmibeat Kannada

ನಟಿ ಅಕ್ಷತಾ ರಾವ್ ನೆನಪಿದ್ದಾರಾ...? ಇಲ್ಲಾ ಅಂದ್ರೆ ಒಮ್ಮೆ ಶಂಕರ್ ನಾಗ್ ಅಭಿನಯದ 'ಗೀತಾ' ಚಿತ್ರವನ್ನ ನೆನಪಿಸಿಕೊಳ್ಳಿ....

ಕ್ಯಾನ್ಸರ್ ಪೇಷೆಂಟ್ ಗೀತಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ನಟಿ ಅಕ್ಷತಾ ರಾವ್. ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ಸಹೋದರಿ ಅಕ್ಷತಾ ರಾವ್, 'ಒಂದಾನೊಂದು ಕಾಲದಲ್ಲಿ' ಸೇರಿದಂತೆ ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆಯ ಚಿತ್ರಗಳಲ್ಲಿ ಮಾತ್ರ.

Akshata Rao, Om Puri and Sarath Kumar in Shivarajkumar's Kabira

ಕನ್ನಡ ಚಿತ್ರರಂಗದಿಂದ ಅರುಂಧತಿ ನಾಗ್ ಕೊಂಚ ದೂರ ಸರಿಯುತ್ತಿದ್ದಂತೆ, ಅಕ್ಷತಾ ರಾವ್ ಕೂಡ ಕಾಣದಂತೆ ಮಾಯವಾಗಿದ್ದರು. ಇದೀಗ ನಾವು ಅಕ್ಷತಾ ರಾವ್ ಅವರನ್ನ ನೆನಪಿಸಿಕೊಳ್ಳುತ್ತಿರುವುದಕ್ಕೆ ಕಾರಣ 'ಕಬೀರ'.

'ಯುಗಾದಿ' ಹಬ್ಬದಂದು ಶಿವರಾಜ್ ಕುಮಾರ್ ಅವರ 'ಕಬೀರ' ಸಿನಿಮಾ ಸೆಟ್ಟೇರುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ದೀರಾ. ಇದೀಗ ಹೊರಬಿದ್ದಿರುವ ಲೇಟೆಸ್ಟ್ ಸುದ್ದಿ ಪ್ರಕಾರ, 'ಕಬೀರ' ಚಿತ್ರದಲ್ಲಿ ಶಿವಣ್ಣನ ಜೊತೆ ಅಕ್ಷತಾ ರಾವ್ ನಟಿಸುತ್ತಿದ್ದಾರೆ. ಆ ಮೂಲಕ ಬಹು ವರ್ಷಗಳ ಬಳಿಕ ನಟಿ ಅಕ್ಷತಾ ರಾವ್ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. [ಯುಗಾದಿ ಹಬ್ಬದಂದು ಶಿವಣ್ಣ ಸಂತ 'ಕಬೀರ' ಶುರು]

Akshata Rao, Om Puri and Sarath Kumar in Shivarajkumar's Kabira

ಈ ಮಾಹಿತಿಯನ್ನ ನಿರ್ದೇಶಕ ನರೇಂದ್ರ ಬಾಬು 'ಫಿಲ್ಮಿಬೀಟ್ ಕನ್ನಡ'ಗೆ ಖಚಿತ ಪಡಿಸಿ, ''ಕಬೀರ'ನ ತಾಯಿ ನೀಮಾ ಪಾತ್ರಧಾರಿಯಾಗಿ ಅಕ್ಷತಾ ರಾವ್ ಕಾಣಿಸಿಕೊಳ್ತಿದ್ದಾರೆ.'' ಅಂತ ಹೇಳಿದರು.

ವಿಶೇಷ ಅಂದ್ರೆ, ಇದೇ 'ಕಬೀರ' ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟ ಓಂ ಪುರಿ ಮತ್ತು ಕಾಲಿವುಡ್ ನಟ ಶರತ್ ಕುಮಾರ್ ಕೂಡ ಮಿಂಚಲಿದ್ದಾರೆ. ಈಗಾಗಲೇ ಶಿವಣ್ಣನ ಜೊತೆ ಎ.ಕೆ.47 ಚಿತ್ರದಲ್ಲಿ ಓಂ ಪುರಿ ಅಭಿನಯಿಸಿದ್ದಾರೆ. ಇನ್ನೂ ಶರತ್ ಕುಮಾರ್ ಕೂಡ 'ಮೈನಾ' ಚಿತ್ರದಲ್ಲಿ ಖಾಕಿ ತೊಟ್ಟು ಮಿಂಚಿದವರು.

ಇದೀಗ ಈ ಎಲ್ಲಾ ಕಲಾವಿದರು 'ಕಬೀರ' ಮೂಲಕ ಒಟ್ಟಾಗುತ್ತಿರುವುದು ವಿಶೇಷ. ಅಂದ್ಹಾಗೆ, 'ಕಬೀರ' ಚಿತ್ರಕ್ಕೆ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಇಸ್ಮೈಲ್ ದರ್ಬಾರ್ ಮ್ಯೂಸಿಕ್ ನೀಡುತ್ತಿದ್ದಾರೆ.

Akshata Rao, Om Puri and Sarath Kumar in Shivarajkumar's Kabira

'ದೇವ್ ದಾಸ್', 'ಹಮ್ ದಿಲ್ ದೇ ಚುಕೇ ಸನಂ', ಸೇರಿದಂತೆ ಹಿಟ್ ಹಿಂದಿ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಇಸ್ಮೈಲ್ ದರ್ಬಾರ್, ಈಗಾಗಲೇ 'ಕಬೀರ'ನಿಗಾಗಿ ಸಾಂಗ್ ರೆಕಾರ್ಡಿಂಗ್ ಮಾಡಿ ಮುಗಿಸಿದ್ದಾರೆ.

ಇಷ್ಟೆಲ್ಲಾ ಸ್ಪೆಷಾಲಿಟಿಗಳಿರುವ 'ಕಬೀರ' ಯುಗಾದಿ ಹಬ್ಬದಂದು ಸೆಟ್ಟೇರಲಿದೆ. ಮತ್ತಷ್ಟು ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ. (ಫಿಲ್ಮಿಬೀಟ್ ಕನ್ನಡ)

English summary
Hat-Trick Hero Shivarajkumar starrer new movie 'Kabira' is all set to go on floors from March 21st. Director Narendra Babu has revealed that Akshatha Rao of 'Geetha' Fame is playing mother to Shivanna. Bollywood Actor Om puri and Tamil Actor Sarath Kumar will also be portraying prominent roles in the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada