ರೀಲ್ ಹೀರೋ ಅಕ್ಷಯ್ ಕುಮಾರ್ ರಿಯಲ್ ಕೆಲಸಕ್ಕೆ ಮೆಚ್ಚುಗೆ
ಬಾಲಿವುಡ್ ನಟ ಅಕ್ಷಯ್ ಕುಮಾರ್ ರೀಲ್ ಮೇಲೆ ಮಾತ್ರವಲ್ಲ. ನಿಜಜೀವನದಲ್ಲೂ ಹೀರೋನೇ. ಸಾರ್ವಜನಿಕರು ಕಷ್ಟದಲ್ಲಿದ್ದಾಗಲೆಲ್ಲ ಅಕ್ಷಯ್ ಕುಮಾರ್ ಸಹಾಯಹಸ್ತ ಚಾಚುತ್ತಾರೆ.
ದೇಶದ ಯಾವುದೇ ಮೂಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಲಿ ಅಕ್ಷಯ್ ನೆರವಾಗ್ತಾರೆ. ಹೌದು, ಬಿಹಾರದಲ್ಲಿ ಎದುರಾದ ಪ್ರವಾಹಕ್ಕೆ ಸಿಲುಕಿಕೊಂಡಿದ್ದ ಜನರಿಗೆ ಬಾಲಿವುಡ್ ನಟ ಸಹಾಯ ಮಾಡಿದ್ದಾರೆ.
ಬಿಹಾರದ ಪ್ರವಾಹ ಪೀಡಿತರಿಗೆ ಒಂದು ಕೋಟಿ ರೂಪಾಯಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಿಹಾರದಲ್ಲಿ ಉಂಟಾದ ಭಾರಿ ಪ್ರವಾಹದಿಂದ ಅನೇಕ ಜನರು ಬೀದಿಗೆ ಬಂದಿದ್ದಾರೆ. ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಸಹಾಯಕರಾಗಿದ್ದಾರೆ.

ಇದೀಗ, ಬಿಹಾರ ಜನರಿಗೆ ಆರ್ಥಿಕ ನೆರವು ನೀಡಿರುವ ಅಕ್ಷಯ್ ಕುಮಾರ್, 25 ಕುಟುಂಬಗಳಿಗೆ ತಲಾ 4 ಲಕ್ಷ ಚೆಕ್ ನೀಡುವ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ರೀಲ್ ಮೇಲೆ ಹೀರೋ ಆಗಿ ಮಿಂಚುವ ಅಕ್ಷಯ್, ನಿಜ ಜೀವನದಲ್ಲಿ ಮಾಡಿದ ಕೆಲಸಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯ ಅಕ್ಷಯ್ ಕುಮಾರ್ ನಟನೆಯ ಹೌಸ್ ಫುಲ್ 4 ಸಿನಿಮಾ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ನಾಲ್ಕು ದಿನದಲ್ಲಿ ಭರ್ಜರಿ 87 ಕೋಟಿ ಬಾಚಿಕೊಂಡಿದೆ ಎಂದು ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











