India
  For Quick Alerts
  ALLOW NOTIFICATIONS  
  For Daily Alerts

  'ಬೆತ್ತನಗೆರೆ' ಚಿತ್ರಕ್ಕೆ ಡಿಮ್ಯಾಂಡಪ್ಪೋ..ಡಿಮ್ಯಾಂಡು.!

  By Harshitha
  |

  ರಿಯಲ್ ರೌಡಿಶೀಟರ್ ಗಳಾದ ಬೆತ್ತನಗೆರೆ ಸೀನ ಮತ್ತು ಶಂಕ್ರ ಅವರ ನಿಜ ಬದುಕ್ಕಲ್ಲಿ ನಡೆದ ರಕ್ತಸಿಕ್ತ ಅಧ್ಯಾಯದ ರೀಲ್ ರೂಪವೇ 'ಬೆತ್ತನಗೆರೆ' ಸಿನಿಮಾ. ಈ ಚಿತ್ರ ಸೆಟ್ಟೇರಿದಾಗಿನಿಂದ ವಿವಾದಗಳ ಸುಳಿಯಲ್ಲೇ ಸಿಲುಕಿಕೊಂಡಿತ್ತು.

  ಸೀನನ ಕುಟುಂಬದವರು 'ಬೆತ್ತನಗೆರೆ' ಚಿತ್ರ ಬಿಡುಗಡೆಗೆ ತಗಾದೆ ತೆಗೆದಿದ್ದರು. ಮೊದಲು ತಮಗೆ ಚಿತ್ರ ತೋರಿಸುವಂತೆ ಶಂಕ್ರ ಒತ್ತಡ ಹೇರಿದ್ದರು. ಇದರ ಪರಿಣಾಮ ಇತ್ತೀಚೆಗಷ್ಟೆ 300 ಜನಕ್ಕೆ 'ಬೆತ್ತನಗೆರೆ' ಚಿತ್ರತಂಡ ಸ್ಪೆಷಲ್ ಶೋ ಆಯೋಜಿಸಿತ್ತು. ['ಬೆತ್ತನಗೆರೆ' ಚಿತ್ರ ಬಿಡುಗಡೆಗೆ ಹೊಸ ತಲೆನೋವು]

  ಸಿನಿಮಾ ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ಚಿತ್ರತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಸಿನಿಮಾ ವೀಕ್ಷಿಸಿದ 'ಬೆತ್ತನಗೆರೆ ಹುಡುಗರು' ಎಲ್ಲೆಡೆ ಒಳ್ಳೆಯ ಮಾತುಗಳನ್ನ ಆಡುತ್ತಿದ್ದಾರೆ. ಇದರಿಂದ ಚಿತ್ರವನ್ನ ಕೊಂಡುಕೊಳ್ಳೋಕೆ ವಿತರಕರು ನಾ ಮುಂದು, ತಾ ಮುಂದು ಅಂತ ದುಂಬಾಲು ಬಿದ್ದಿದ್ದಾರೆ. ['ಬೆತ್ತನಗೆರೆ' ಚಿತ್ರ ಬಿಡುಗಡೆ ಇನ್ನು ನಿರಾಳ]

  ರಾಜ್ಯದಾದ್ಯಂತ ಚಿತ್ರ ಪ್ರದರ್ಶನ ಮಾಡಲು ನಿರ್ಮಾಪಕ ಜಯಣ್ಣಗೆ ವಿತರಣೆ ಹಕ್ಕು ಸಿಕ್ಕಿದೆ. ಈ ಮಧ್ಯೆ ಸಣ್ಣ ಪುಟ್ಟ ಊರುಗಳಲ್ಲಿ ಚಿತ್ರಮಂದಿರದ ಮಾಲೀಕರೇ 'ಬೆತ್ತನಗೆರೆ' ಸಿನಿಮಾ ಕೊಂಡುಕೊಳ್ಳುವ ಮನಸ್ಸು ಮಾಡಿರುವುದು ಇಂಟ್ರೆಸ್ಟಿಂಗ್ ವಿಷಯ. ['ರಿಯಲ್ ಡಾನ್' ನೋಡಿ ಬೆಚ್ಚಿಬಿದ್ದ ಸುಮಂತ್ ಶೈಲೇಂದ್ರ]

  ನೆಲಮಂಗಲದ ಎರಡು ಚಿತ್ರಮಂದಿರಗಳಲ್ಲಿ 'ಬೆತ್ತನಗೆರೆ' ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಥಿಯೇಟರ್ ಮಾಲೀಕರು ಬರೋಬ್ಬರಿ ಒಂದು ಕೋಟಿ ಕೊಡುವುದಕ್ಕೆ ರೆಡಿಯಿದ್ದಾರೆ. ಇನ್ನೂ ಹುಬ್ಬಳ್ಳಿಯಲ್ಲೂ ಚಿತ್ರಕ್ಕೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ ಅಂತಾರೆ ಚಿತ್ರದ ನಿರ್ದೇಶಕ ಮೋಹನ್.

  ಇದುವರೆಗೂ ವಿವಾದದ ಕೇಂದ್ರಬಿಂದುವಾಗಿದ್ದ 'ಬೆತ್ತನಗೆರೆ' ಸಿನಿಮಾ ಈಗ ಹಿಟ್ ಆಗುವ ಸೂಚನೆ ನೀಡಿದೆ. ಸದ್ಯದಲ್ಲೇ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

  English summary
  Kannada Actor Sumanth Shailendra and Akshay starrer Kannada Movie 'Bettanagere' is in Demand. Few Theater owners have come up to purchase the movie, while Producer Jayanna has acquired the Distribution rights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X