ಡೀಕೋಡಿಂಗ್ ಗುರುಪ್ರಸಾದ್ ಗೆ ನ್ಯಾನೋ ಕಾರು ಗಿಫ್ಟ್
ಬಿಗ್ ಬಾಸ್ ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶ ಪಡೆದು ಇದ್ದಷ್ಟು ದಿನವೂ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದ ನಟ, ನಿರ್ದೇಶಕ ಗುರುಪ್ರಸಾದ್ ಅವರಿಗೆ ಗುರುದಕ್ಷಿಣೆಯಾಗಿ ಟಾಟಾ ನ್ಯಾನೋ ಕಾರು ಸಿಕ್ಕಿದೆ. ಇದನ್ನು ಕೊಡುತ್ತಿರುವುದು ಅವರ ಏಕಲವ್ಯ ಶಿಷ್ಯ ಅಕುಲ್ ಬಾಲಾಜಿ.
ಬಿಗ್ ಬಾಸ್ ಸೀಸನ್ 2 ವಿನ್ನರ್ ಅಕುಲ್ ಬಾಲಾಜಿ ಅವರು ಒಂದು ಕೋಟಿ ರುಪಾಯಿ ಬಹುಮಾನ ಗೆದ್ದ ಮೇಲೆ ತಮ್ಮ ಗುರುಗಳಿಗೆ ಉಡುಗೊರೆ ಕೊಡುವುದಾಗಿ ಹೇಳಿಕೊಂಡಿದ್ದರು. ಅದರಂತೆ ಅವರು ಏನು ಬೇಕು ಗುರುಗಳೇ ಎಂದು ಕೇಳಿದ್ದಾರೆ. [ಗುರುಪ್ರಸಾದ್ ಗೆ ಹಿಗ್ಗಾಮುಗ್ಗ ಗೂಸಾ ಕೊಟ್ಟ ಡಿಂಕೂ]

ಆರಂಭದಲ್ಲಿ ಗುರುಪ್ರಸಾದ್ ಹಾಗೂ ಅಕುಲ್ ನಡುವೆ ಸಣ್ಣಪುಟ್ಟ ಜಗಳ ಕಿತ್ತಾಟ ಇದ್ದೇ ಇರುತ್ತಿತ್ತು. ಬರುಬರುತ್ತಾ ಇಬ್ಬರೂ ಗುರುಶಿಷ್ಯರಂತಾಗಿದ್ದನ್ನು ಇಡೀ ಕರ್ನಾಟಕದ ಜನತೆ ನೋಡಿದ್ದಾರೆ. ಕೋಡ್, ಡೀಕೋಡಿಂಗ್ ಮೂಲಕ ಮನೆಯಲ್ಲಿ ಗುರುಪ್ರಸಾದ್ ಜನಪ್ರಿಯರಾಗಿದ್ದರು.
More from Filmibeat
English summary
Bigg Boss Kannada 2 winner Akul Balaji gifts a Tata Nano car to his beloved 'Guru' Guruprasad. It costs Rs.2.90 lakhs.
bbk2 bigg boss kannada 2 guruprasad akul balaji bigg boss sudeep suvarna channel tv ಬಿಗ್ ಬಾಸ್ ಕನ್ನಡ 2 ಗುರುಪ್ರಸಾದ್ ಅಕುಲ್ ಬಾಲಾಜಿ ಬಿಗ್ ಬಾಸ್ ಸುವರ್ಣ ವಾಹಿನಿ ಟಿವಿ


Click it and Unblock the Notifications











