For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ಚಿತ್ರವನ್ನ ರಿಜೆಕ್ಟ್ ಮಾಡಿದ ಬಾಲಿವುಡ್ ಸ್ಟಾರ್ ನಟಿ

  |

  ಭಾರತೀಯ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ರಾಜಮೌಳಿ ಕೂಡ ಒಬ್ಬರು. 'ಬಾಹುಬಲಿ' ಚಿತ್ರದ ನಂತರ ರಾಜಮೌಳಿ ಎಂಬ ಹೆಸರು ವಿಶ್ವಮಟ್ಟದಲ್ಲಿ ಚಾಲ್ತಿಯಲ್ಲಿದೆ. ಹಾಗಾಗಿಯೇ ರಾಜಮೌಳಿ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಬಾಹುಬಲಿ ನಂತರ ನಿರ್ದೇಶಕ ರಾಜಮೌಳಿ 'ಆರ್ಆರ್ಆರ್' ಸಿನಿಮಾ ಮಾಡುತ್ತಿರುವ ವಿಷ್ಯ ಗೊತ್ತೇ ಇದೆ.

  ಬಹುನಿರೀಕ್ಷೆಯ ಈ ಚಿತ್ರದಲ್ಲಿ ರಾಮ್ ಚರಣ್ ತೇಜ ಮತ್ತು ಜ್ಯೂ ಎನ್ ಟಿ ಆರ್ ಒಟ್ಟಿಗೆ ನಟಿಸುತ್ತಿದ್ದಾರೆ. ಇಷ್ಟು ಬಿಟ್ಟರೆ ಈ ಚಿತ್ರದ ಬಗ್ಗೆ ಏನು ಮಾಹಿತಿ ಬಿಟ್ಟುಕೊಟ್ಟಿಲ್ಲ ರಾಜಮೌಳಿ. ಆದ್ರೆ, ನಾಯಕಿಯರ ಆಯ್ಕೆ ವಿಚಾರ ಆರ್ಆರ್ಆರ್ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ ಎಂಬ ಮಾತು ಸುಳ್ಳಲ್ಲಾ.

  ಸೌತ್ ಗೆ ಬಂದ ಪರಿಣಿತಿ ಚೋಪ್ರಾಗೆ ರಾಜಮೌಳಿ ಬಿಗ್ ಆಫರ್

  ರಾಮ್ ಚರಣ್ ಮತ್ತು ಜ್ಯೂ ಎನ್ ಟಿ ಆರ್ ಗೆ ಯಾರು ನಾಯಕಿ ಆಗ್ತಾರೆ ಎಂಬುದಕ್ಕೆ ಹಲವು ನಟಿಮಣಿಯರ ಹೆಸರು ಕೇಳಿಬರ್ತಿದೆ. ಹೀಗಿರುವಾಗ, ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್ ಒಬ್ಬ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಅಷ್ಟರಲ್ಲೇ ಆಲಿಯಾ ಭಟ್ ಕೂಡ ಶಾಕ್ ನೀಡಿದ್ದಾರೆ. ಏನಿದು? ಮುಂದೆ ಓದಿ.....

  ಸಂಭಾವನೆ ವಿಷ್ಯಕ್ಕೆ ರಿಜೆಕ್ಟ್ ಮಾಡಿದ್ರಾ?

  ಸಂಭಾವನೆ ವಿಷ್ಯಕ್ಕೆ ರಿಜೆಕ್ಟ್ ಮಾಡಿದ್ರಾ?

  ರಾಮ್ ಚರಣ್ ಅಥವಾ ಎನ್.ಟಿ.ಆರ್ ಇಬ್ಬರಲ್ಲಿ ಒಬ್ಬರ ಜೋಡಿಯಾಗಿ ಅಲಿಯಾ ಭಟ್ ಕಾಣಿಸಿಕೊಳ್ಳಬೇಕಿತ್ತು. ಆದ್ರೀಗ, ರಾಜಮೌಳಿಯ ಈ ಚಿತ್ರದಿಂದ ಆಲಿಯಾ ಭಟ್ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಅಲಿಯಾ ಈ ಸಿನಿಮಾ ತಿರಸ್ಕರಿಸಲು ಅಸಲಿ ಕಾರಣ ಸಂಭಾವನೆ ಅಂತ ಹೇಳಲಾಗುತ್ತಿದೆ. ಇನ್ನೊಂದು ಕಡೆ ಸಂಭಾವನೆ ವಿಷ್ಯಕ್ಕಾಗಿ ಈ ಸಿನಿಮಾ ಬಿಟ್ಟಿಲ್ಲ, ಬೇರೆಯದ್ದೇ ಕಾರಣವಿದೆ ಎನ್ನಲಾಗಿದೆ.

  'ಬಾಹುಬಲಿ-3' ಯಾಕೆ ಮಾಡಲ್ಲ ಅಂತ ಬಹಿರಂಗ ಪಡಿಸಿದ ತಮನ್ನಾ.!

  ನಿಜವಾದ ಕಾರಣ ಇದು ಎನ್ನಲಾಗಿದೆ

  ನಿಜವಾದ ಕಾರಣ ಇದು ಎನ್ನಲಾಗಿದೆ

  ರಾಜಮೌಳಿ ನಿರ್ದೇಶನದ ಮುಂದಿನ ಸಿನಿಮಾಗೆ ಅಲಿಯಾ ಭಟ್ ನಾಯಕಿ ಎನ್ನುವ ವಿಚಾರ ಬಹುತೇಕ ಖಚಿತವಾಗಿತ್ತು. ಅಂತಿಮ ಸಮಯದಲ್ಲಿ ಅಲಿಯಾ ಹಿಂದೆ ಸರಿದಿದ್ದರ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲ ಮೂಡಿದೆ. ಈ ಗೊಂದಲಗಳಿಗೆ ಈಗ ತೆರೆ ಬಿದ್ದಿದ್ದು, ಡೇಟ್ ಹೊಂದಾಣಿಕೆಯಾಗದ ಕಾರಣ ಈ ಚಿತ್ರವನ್ನ ಕೈಬಿಟ್ಟಿದ್ದಾರಂತೆ. ಕಳಂಕ್, ಬ್ರಹ್ಮಾಸ್ತ್ರ, ತಕ್ತ್ ಹೀಗೆ ಸಾಲು ಸಾಲು ಸಿನಿಮಾಗಳು ಆಲಿಯಾ ಕೈಯಲ್ಲಿರುವ ಕಾರಣ ಆರ್ಆರ್ಆರ್ ಸಿನಿಮಾ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರಂತೆ.

  ಆಲಿಯಾ ಭಟ್ ಗೆ ಆ ಕಡೆಯೂ ಖುಷಿ, ಈ ಕಡೆಯೂ ಖುಷಿ

  ಯಾರಿಗೆ ಸಿಗುತ್ತೆ ನಾಯಕಿ ಪಟ್ಟ?

  ಯಾರಿಗೆ ಸಿಗುತ್ತೆ ನಾಯಕಿ ಪಟ್ಟ?

  ಆರ್ಆರ್ಆರ್ ಸಿನಿಮಾದ ನಾಯಕಿಯರ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದವೆ. ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ನಟಿಮಣಿಯರ ಹೆಸರುಗಳು ಈ ಪ್ರಾಜೆಕ್ಟ್ ಗಾಗಿ ಕೇಳಿಬರುತ್ತಿದೆ. ಕೀರ್ತಿ ಸುರೇಶ್, ಪೂಜಾ ಹೆಗಡೆ, ದೀಪಿಕಾ ಪಡುಕೋಣೆ, ಪರಿಣೀತಿ ಛೋಪ್ರ ಹೀಗೆ ಸಾಕಷ್ಟು ನಾಯಕಿಯರ ಹೆಸರುಗಳಿವೆ. ಆದರೆ ನಾಯಕಿಯರ ವಿಚಾರವಾಗಿ ಇದುವರೆಗೂ ಚಿತ್ರತಂಡ ಯಾವುದೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

  ಐತಿಹಾಸಿಕ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಆಲಿಯಾ

  ಶೂಟಿಂಗ್ ಆರಂಭವಾಗಿದೆ

  ಶೂಟಿಂಗ್ ಆರಂಭವಾಗಿದೆ

  ಈಗಾಗಲೇ ಆರ್ಆರ್ಆರ್ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕೇವಲ ನಾಯಕರ ಭಾಗದ ಚಿತ್ರೀಕರಣದಲ್ಲಿ ನಿರತವಾಗಿದೆ ಚಿತ್ರತಂಡ. ರಾಮ್ ಚರಣ್ ಮತ್ತು ಜ್ಯೂ ಎನ್ ಟಿ ಆರ್ ಅವರ ಪ್ರಮುಖ ಭಾಗದ ಚಿತ್ರೀಕರಣ ಮುಗಿದ ನಂತರ ನಾಯಕಿಯರು ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಆದರೆ ನಾಯಕಿಯರ ಆಯ್ಕೆ ಫೈನಲ್ ಆಗುವವರೆಗೂ ಅಧಿಕೃತ ಮಾಹಿತಿ ಹೊರಹಾಕುವುದಿಲ್ಲ ಚಿತ್ರತಂಡ.

  ರಣ್ಬೀರ್ ಕಪೂರ್-ಆಲಿಯಾ ಜೋಡಿಯಲ್ಲಿ ಬಿರುಕು.!

  English summary
  Bollywood actress alia bhatt rejects ss rajamouli directional RRR movie offer. because, she is busy with lot of projects. ram charan and jr ntr are acting in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X