For Quick Alerts
  ALLOW NOTIFICATIONS  
  For Daily Alerts

  'ನಾಗರಹಾವು' ಚಿತ್ರದ ಮಾರ್ಗರೇಟ್ ಯಾರು.? ಆಕೆಯ ಬಣ್ಣದ ಬದುಕಿನ ಅಧ್ಯಾಯ ಇಲ್ಲಿದೆ..

  By ಸುಪ್ರೀತ್.ಕೆ.ಎನ್
  |
  Nagarahaavu 2018 :ಮಾರ್ಗರೇಟ್ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ..? | Filmibeat Kannada

  ಕನ್ನಡದ ಮಾಸ್ಟರ್ ಪೀಸ್ 'ನಾಗರಹಾವು' ಸಿನಿಮಾ ಯಾರ್ತಾನೆ ನೋಡಿಲ್ಲ ಹೇಳಿ.? 1973 ರಲ್ಲಿ ಬಿಡುಗಡೆ ಆದ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಕನ್ನಡಿಗರ ಮನಸ್ಸನ್ನ ಗೆದ್ದಿದ್ದು ಮಾತ್ರವಲ್ಲದೇ, ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿತ್ತು.

  ಆಂಗ್ರಿ ಯಂಗ್ ಮ್ಯಾನ್... ಸಾಹಸ ಸಿಂಹ... ಡಾ.ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ರನ್ನ ಕನ್ನಡ ಚಿತ್ರರಂಗಕ್ಕೆ ನೀಡಿದ್ದು ಇದೇ ಸಿನಿಮಾ.

  ಈ ಸಿನಿಮಾದ ಅಲಮೇಲು, ಚಾಮಯ್ಯ ಮೇಷ್ಟ್ರು, ಜಲೀಲ ಪಾತ್ರಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಇವೆಲ್ಲದರ ಜೊತೆಗೆ 'ಮಾರ್ಗರೇಟ್' ಪಾತ್ರ ಕೂಡ ಜನಪ್ರಿಯತೆ ಗಳಿಸಿತ್ತು. ಎಷ್ಟರ ಮಟ್ಟಿಗೆ ಅಂದ್ರೆ, ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲೂ ನಾಯಕ ರಾಮಾಚಾರಿ ತನ್ನ ಮನದನ್ನೆಗೆ 'ಮಾರ್ಗಿ' ಅಂತಲೇ ಕರೆಯುವಷ್ಟು.!

  ಅಸಲಿಗೆ, ಈ ಮಾರ್ಗರೇಟ್ ಯಾರು ಅನ್ನೋದು ನಿಮಗೆ ಗೊತ್ತಾ.? ಆಧುನಿಕ ಸ್ಪರ್ಶದೊಂದಿಗೆ 'ನಾಗರಹಾವು' ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಹೊತ್ತಿನಲ್ಲಿ, 'ನಾಗರಹಾವು' ಚಿತ್ರದ ಮಾರ್ಗಿ ಪಾತ್ರಕ್ಕೆ ಜೀವ ತುಂಬಿದ ನಟಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಹೊತ್ತು ತಂದಿದ್ದೇವೆ, ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

  'ರಾಮಾಚಾರಿ' ಪ್ರೇಯಸಿ ಮಾರ್ಗರೇಟ್

  'ರಾಮಾಚಾರಿ' ಪ್ರೇಯಸಿ ಮಾರ್ಗರೇಟ್

  ಅಲಮೇಲು ಇಂದ ದೂರ ಆದ ಬಳಿಕ ರಾಮಾಚಾರಿಗೆ ಸಿಗುವುದು ಕ್ರಿಶ್ಚಿಯನ್ ಹುಡುಗಿ ಮಾರ್ಗರೇಟ್. ಮೊದಮೊದಲು ರಾಮಾಚಾರಿ ಕಂಡ್ರೆ ಮುಖ ಸಿಂಡರಿಸುತ್ತಿದ್ದ ಮಾರ್ಗಿ ಕ್ರಮೇಣ ಆತನನ್ನು ಪ್ರೇಮಿಸುತ್ತಾಳೆ. ಇಬ್ಬರ ಮನೆಯಲ್ಲೂ ಪ್ರೀತಿಗೆ ವಿರೋಧ ವ್ಯಕ್ತವಾಗುತ್ತದೆ. ಆಗ ರಾಮಾಚಾರಿ ಹಾಗೂ ಮಾರ್ಗಿಗೆ ಬುದ್ಧಿ ಹೇಳಲು ಚಾಮಯ್ಯ ಮೇಷ್ಟ್ರು ಕಲ್ಲಿನ ಕೋಟೆ ಹತ್ತುತ್ತಾರೆ. ಮಾತಿಗೆ ಮಾತು ಬೆಳೆದು ಆಕಸ್ಮಿಕವಾಗಿ ಚಾಮಯ್ಯ ಮೇಷ್ಟ್ರನ್ನು ರಾಮಾಚಾರಿ ಕಲ್ಲಿನ ಕೋಟೆಯಿಂದ ತಳ್ಳುತ್ತಾನೆ. ಪ್ರೀತಿಯ ಮೇಷ್ಟ್ರು ಕೋಟೆಯಿಂದ ಉರಳಿಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ. ಇದರಿಂದ ಮನನೊಂದ ರಾಮಾಚಾರಿ ಹಾಗೂ ಮಾರ್ಗಿ ಕೋಟೆಯಿಂದ ಹಾರಿ ಪ್ರಾಣ ಕಳೆದುಕೊಳ್ಳುತ್ತಾರೆ.

  'ನಾಗರಹಾವು' ಚಿತ್ರದಲ್ಲಿ ಉಪ್ಪಿಗೆ ಹೆಚ್ಚು ಕಾಡುವ ದೃಶ್ಯ ಯಾವುದು.?'ನಾಗರಹಾವು' ಚಿತ್ರದಲ್ಲಿ ಉಪ್ಪಿಗೆ ಹೆಚ್ಚು ಕಾಡುವ ದೃಶ್ಯ ಯಾವುದು.?

  ಮಾರ್ಗರೇಟ್ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ ಯಾರು.?

  ಮಾರ್ಗರೇಟ್ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ ಯಾರು.?

  'ನಾಗರಹಾವು' ಚಿತ್ರದಲ್ಲಿ ಮಾರ್ಗರೇಟ್ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ ಶುಭ. ಮಲಯಾಳಂ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿದ್ದ ನಟಿ ಶುಭ ಕನ್ನಡ ಚಿತ್ರರಂಗದಲ್ಲಿ ಮಾರ್ಗರೇಟ್ ಪಾತ್ರದ ಮೂಲಕ ಖ್ಯಾತಿ ಪಡೆದರು.

  'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?

  ಯಾರೀ ಶುಭ.?

  ಯಾರೀ ಶುಭ.?

  ತೆಲುಗಿನ ಪ್ರಖ್ಯಾತ ನಟ ಹಾಗೂ ನಿರ್ದೇಶಕ ವೇದಾಂತಂ ರಾಘವಯ್ಯ ಹಾಗೂ ಸೂರ್ಯಪ್ರಭ ದಂಪತಿಯ ಪುತ್ರಿ ನಟಿ ಶುಭ. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಶುಭಗೆ ಚಿತ್ರರಂಗ ಕೈಬೀಸಿ ಕರೆಯಿತು. ಮಲಯಾಳಂ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಶುಭ ಕಾಲಿಟ್ಟರು.

  ದಿಗ್ಗಜರೇ ಕುಟುಂಬಸ್ಥರು

  ದಿಗ್ಗಜರೇ ಕುಟುಂಬಸ್ಥರು

  ಶುಭಗೆ ಚಿತ್ರರಂಗ ಅಪರಿಚಿತವೇನೂ ಆಗಿರಲಿಲ್ಲ. ಹೇಳಿ ಕೇಳಿ ಅವರ ತಂದೆ ತೆಲುಗಿನ ನಟ ಹಾಗೂ ನಿರ್ದೇಶಕ ವೇದಾಂತಂ ರಾಘವಯ್ಯ. ಇನ್ನೂ ಶುಭ ಅವರ ಸಂಬಂಧಿ ಪುಷ್ಪವಲ್ಲಿ ಕೂಡ ತೆಲುಗು ನಟಿ. ಇದೇ ಪುಷ್ಟವಲ್ಲಿ ಮುಂದೆ ತಮಿಳಿನ ದಿಗ್ಗಜ ಜೆಮಿನಿ ಗಣೇಶ್ ರನ್ನ ವಿವಾಹವಾದರು. ಹಾಗೇ, ಬಾಲಿವುಡ್ ನ ಎವರ್ ಗ್ರೀನ್ ನಟಿ ರೇಖಾ ಕೂಡ ಶುಭ ರವರಿಗೆ ಸಹೋದರ ಸಂಬಂಧಿ.

  ಬಹುಭಾಷಾ ನಟಿ

  ಬಹುಭಾಷಾ ನಟಿ

  ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅಡಿಯಿಟ್ಟ ಶುಭ ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡ ಚಿತ್ರರಂಗದಲ್ಲಿಯೂ ತಮ್ಮ ಪ್ರಖ್ಯಾತಿ ವಿಸ್ತರಿಸಿಕೊಂಡರು. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಶುಭ ನಟಿಯಾಗಿ, ಪೋಷಕ ಪಾತ್ರಗಳಿಗೂ ಜೀವ ತುಂಬಿದ್ದಾರೆ.

  ಕನ್ನಡದಲ್ಲಿ ಅಭಿನಯಿಸಿರುವ ಸಿನಿಮಾಗಳು ಯಾವುವು.?

  ಕನ್ನಡದಲ್ಲಿ ಅಭಿನಯಿಸಿರುವ ಸಿನಿಮಾಗಳು ಯಾವುವು.?

  'ನಾಗರಹಾವು', 'ಭಾಗ್ಯ ಜ್ಯೋತಿ', 'ಫಲಿತಾಂಶ', 'ನಾ ನಿನ್ನ ಮರೆಯಲಾರೆ', 'ಗಲಾಟೆ ಸಂಸಾರ', 'ಪಡುವಾರಳ್ಳಿ ಪಾಂಡವರು', 'ರಂಗನಾಯಕಿ', 'ಆನಂದ್', 'ಮನಮೆಚ್ಚಿದ ಹುಡುಗಿ', 'ಜೀವನ ಜ್ಯೋತಿ', 'ರಾವಣ ರಾಜ್ಯ', 'ನಂಜುಂಡಿ ಕಲ್ಯಾಣ', 'ಚಿಕ್ಕೆಜಮಾನ್ರು' ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಶುಭ ಮಿಂಚಿದ್ದಾರೆ.

  ಬಣ್ಣದ ಬದುಕಿನಿಂದ ದೂರ

  ಬಣ್ಣದ ಬದುಕಿನಿಂದ ದೂರ

  2003ರ ಬಳಿಕ ಚಿತ್ರರಂಗದಿಂದ ದೂರ ಉಳಿದ ನಟಿ ಶುಭ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

  English summary
  All about Actress Shubha who played Margaret role in 'Naagarahaavu'. 'ನಾಗರಹಾವು' ಚಿತ್ರದಲ್ಲಿ ಮಾರ್ಗರೇಟ್ ಆಗಿದ್ದ ನಟಿ ಯಾರು.? ಈಗ ಆಕೆ ಎಲ್ಲಿ, ಹೇಗಿದ್ದಾರೆ.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X