For Quick Alerts
  ALLOW NOTIFICATIONS  
  For Daily Alerts

  ದರ್ಶನ್-ವಿಜಯಲಕ್ಷ್ಮಿ: ಒಂದೊಳ್ಳೆ ಕಾರಣಕ್ಕೆ ಮತ್ತೆ ಸುದ್ದಿಯಾದಾಗ...

  By ಫಿಲ್ಮಿಬೀಟ್ ಡೆಸ್ಕ್
  |
  ಶನಿ ಮಹಾತ್ಮನ ಮೊರೆ ಹೋದ ದರ್ಶನ್ | Darshan | Temple run | Filmibeat Kannada

  'ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ'. ಹೀಗೊಂದು ಹಳೆಯ ಗಾದೆಯನ್ನು ಜನ ಮೆಲುಕು ಹಾಕುತ್ತಿರುತ್ತಾರೆ. ಸಂಸಾರ ಎಂದ ಮೇಲೆ ನಾಲ್ಕು ಗೋಡೆಗಳ ನಡುವೆ ಹುಟ್ಟುವ ಅಸಮಾಧಾನ, ಭಿನ್ನಾಭಿಪ್ರಾಯಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎಂಬುದನ್ನು ಈ ಮಾತು ಸೂಚ್ಯವಾಗಿ ಹೇಳುತ್ತದೆ.

  ಸ್ಟಾರ್ ನಟ ದರ್ಶನ್ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರೀತಿ ನೋಡುತ್ತಿದ್ದರೆ, ಈ ಮೇಲಿನ ಮಾತಿಗೆ ಸೆಲೆಬ್ರಿಟಿ ಸಾಕ್ಷಿಯೊಂದು ಸಿಕ್ಕಂತಾಗಿದೆ. ಕರ್ನಾಟಕದ ಶ್ರೀಮಂತ ಹಾಗೂ ಜನಪ್ರಿಯ ನಟರ ಪೈಕಿ ಒಬ್ಬರಾದ ದರ್ಶನ್ ತಮ್ಮ ಕೌಟುಂಬಿಕ ಬದುಕಿನ ಕಾರಣಕ್ಕೆ ಆಗಾಗ್ಗೆ ಸುದ್ದಿಕೇಂದ್ರಕ್ಕೆ ಬರುತ್ತಿರುತ್ತಾರೆ. ಪತ್ನಿ ವಿಜಯಲಕ್ಷ್ಮಿ ಜತೆಗಿನ ಅವರ ಮುನಿಸು ಕೆಲವೊಮ್ಮೆ ಪೊಲೀಸ್ ಠಾಣೆ, ನ್ಯಾಯಾಲಯ ಜತೆಗೆ ಪರಪ್ಪನ ಅಗ್ರಹಾರದ ಅಂಗಳಕ್ಕೂ ಹೋಗಿ ಬಂದಿದೆ. ಆದರೆ, ಇಂತಹದ್ದೇನೇ ಅಪಸವ್ಯಗಳು ನಡೆದರೂ, ದರ್ಶನ್ ಮತ್ತು ವಿಜಯಲಕ್ಷ್ಮಿ ಮತ್ತೆ ಒಂದಾಗುತ್ತಾರೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಯಾಕೆ ಹೀಗೆ?

  ದರ್ಶನ್- ವಿಜಯಲಕ್ಷ್ಮಿ ನಡುವೆ...

  ದರ್ಶನ್- ವಿಜಯಲಕ್ಷ್ಮಿ ನಡುವೆ...

  "ಎಲ್ಲಿ ಪ್ರೀತಿ ಹೆಚ್ಚಿರುತ್ತದೋ ಅಲ್ಲಿ ಹೆಚ್ಚು ಜಗಳವೂ ಇರುತ್ತದೆ," ಎನ್ನುತ್ತಾರೆ ದರ್ಶನ್ ಆಪ್ತವಲಯದಲ್ಲಿರು ಇರುವವರು. "ನಮಗಿದು ಕಾಮನ್ ವಿಚಾರ ಅನ್ನಿಸಿ ಬಿಟ್ಟಿದೆ. ಮೇಡಂ (ವಿಜಯಲಕ್ಷ್ಮಿ) ಸ್ವಲ್ಪ ಮಾತು ಜಾಸ್ತಿ. ನಮ್ಮ ಡಿ- ಬಾಸ್‌ ಅವರದ್ದು ಕೈ ಮುಂದು. ಆದರೆ ಮಗನ ವಿಚಾರ ಮಾತ್ರ ಇಬ್ಬರನ್ನೂ ಕಟ್ಟಿಹಾಕುತ್ತದೆ,'' ಎನ್ನುತ್ತಾರೆ ಅವರು.

  ಪತ್ನಿ ಜೊತೆ ತಮಿಳುನಾಡಿನ ತಿರುನಲ್ಲರ್ ಗೆ ಭೇಟಿ ನೀಡಿದ ನಟ ದರ್ಶನ್ಪತ್ನಿ ಜೊತೆ ತಮಿಳುನಾಡಿನ ತಿರುನಲ್ಲರ್ ಗೆ ಭೇಟಿ ನೀಡಿದ ನಟ ದರ್ಶನ್

  ಟೀಕೆ ಮಾಡಿದವರ ಗಮನಕ್ಕೆ...

  ಟೀಕೆ ಮಾಡಿದವರ ಗಮನಕ್ಕೆ...

  ಸಮಾಜದಲ್ಲಿ ಸೆಲೆಬ್ರಿಟಿ ಪಟ್ಟಕ್ಕೇರಿದವರಿಗೆ ಅವರದ್ದೇ ಆದ ಸಾಮಾಜಿಕ ಹೊಣೆಗಾರಿಕೆಯೂ ಇರುತ್ತದೆ. ಅದರಲ್ಲೂ ದರ್ಶನ್ ರೀತಿಯ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವ ನಟ ಸಾರ್ವಜನಿಕವಾಗಿ ಹಾಗೂ ವೈಯಕ್ತಿಕ ಬದುಕಿನಲ್ಲಿ ನಡೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸಲಾಗುತ್ತದೆ. ಇದನ್ನೇ ಅವರ ಅಭಿಮಾನಿಗಳು ಅನುಕರಣೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ 'ಪತ್ನಿಯ ಮೇಲೆ ಹಲ್ಲೆ'ಯಂತಹ ಪ್ರಕರಣಗಳು ನಡೆದಾಗ ದರ್ಶನ ವರ್ತನೆ ಕುರಿತು ಸಾಮಾಜಿಕ ಟೀಕೆಗಳು ವ್ಯಕ್ತವಾಗಿದ್ದವು.

  ಆದರೆ ಕಳೆದ ಹದಿನೈದು ದಿನಗಳ ಅಂತರದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಜತೆಜತೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಇಬ್ಬರ ನಡುವೆ ಕಲಹವನ್ನಷ್ಟೆ ಗಮನಿಸಿದವರಿಗೆ ಈ ವರ್ತನೆ ಗಮನ ಸೆಳೆಯುವಂತಿದೆ.

  ಪ್ರೀತಿಸಿ ವಿವಾಹವಾದವರು

  ಪ್ರೀತಿಸಿ ವಿವಾಹವಾದವರು

  'ಚಾಲೆಂಜಿಂಗ್ ಸ್ಟಾರ್' ದರ್ಶನ್ ಮತ್ತು ವಿಜಯಲಕ್ಷ್ಮಿ ಪರಸ್ಪರ ಪ್ರೀತಿಸಿ ವಿವಾಹವಾದವರು ಎಂಬುದು ಗಮನಾರ್ಹ. ಮದುವೆ ಆಗುವ ಹೊತ್ತಿಗೆ ದರ್ಶನ್ ದೊಡ್ಡ ಸ್ಟಾರ್ ಆಗಿರಲಿಲ್ಲ. ವಿಜಯಲಕ್ಷ್ಮಿ ಸಾಮಾನ್ಯರಂತೆ ಗೃಹಿಣಿಯಾಗಿ ವೈವಾಹಿಕ ಬದುಕು ಆರಂಭಿಸಿದರು. ಧರ್ಮಸ್ಥಳದಲ್ಲಿ ಸರಳ ವಿವಾಹವಾಗಿ ಬಂದವರು ಮೈಸೂರಿನಲ್ಲಿ ಸಂಸಾರ ಆರಂಭಿಸಿದ್ದರು. ಆ ಸಮಯದಲ್ಲಿ ಹುಟ್ಟಿದ ಗಂಡು ಮಗು ಇಬ್ಬರ ನಡುವಿನ ಸಂಬಂಧಕ್ಕೆ ಹೊಸ ಮೆರಗು ತಂದಿತ್ತು.
  ಅಲ್ಲಿಂದ ಆಚೆಗೆ ಕಳೆದ ಎರಡು ದಶಕಗಳಲ್ಲಿ ದರ್ಶನ್ ಬೆಳೆದು ಬಂದ ಪರಿ ಎಲ್ಲರ ಕಣ್ಣ ಮುಂದಿದೆ.

  ಅತಿಯಾಗಿ ಟ್ರೋಲ್ ಆದ ದರ್ಶನ್: ಹೇಳಿದ್ದು ಒಂದು ಆಗಿದ್ದು ಇನ್ನೊಂದುಅತಿಯಾಗಿ ಟ್ರೋಲ್ ಆದ ದರ್ಶನ್: ಹೇಳಿದ್ದು ಒಂದು ಆಗಿದ್ದು ಇನ್ನೊಂದು

  ಬೀದಿಗೆ ಬಿದ್ದ ಕೌಟುಂಬಿಕ ಕಲಹ

  ಬೀದಿಗೆ ಬಿದ್ದ ಕೌಟುಂಬಿಕ ಕಲಹ

  2011ರಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯ ಕಲಹ ಮೊದಲ ಬಾರಿಗೆ ಸಾರ್ವಜನಿಕ ವಲಯಕ್ಕೆ ಬಂತು. ಆ ಸಮಯದಲ್ಲಿ ದರ್ಶನ್ ತೋರಿಸಿದ ಪೌರುಷದ ಫಲ ಅವರನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೂ ಕಳುಹಿಸಿತು. ಅಲ್ಲಿಂದ ಮುಂದೆ ದರ್ಶನ್ ಮತ್ತು ವಿಜಯಲಕ್ಷ್ಮಿ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳು ಹುಟ್ಟಿ, ಸಾರ್ವಜನಿಕ ಚರ್ಚೆಗೆ ಬರುತ್ತಲೇ ಇದ್ದವು. ಈ ನಡುವೆ ನಟ ಅಂಬರೀಷ್ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ ಅಂತೆಲ್ಲಾ ಸುದ್ದಿಯಾಯಿತು.

  "ಹೊರಗೆ ಮಾಧ್ಯಮಗಳಲ್ಲಿ ಏನೇ ಸುದ್ದಿ ಬರಲಿ, ಇಬ್ಬರು ದಾಂಪತ್ಯವನ್ನೇ ಕೊನೆಗಾಣಿಸುವ ತೀರ್ಮಾನವನ್ನು ಯಾವತ್ತೂ ತೆಗೆದುಕೊಳ್ಳಲಿಲ್ಲ ಎಂಬುದು ಗಮನಾರ್ಹ. ಎಷ್ಟೇ ಕಿತ್ತಾಡಿಕೊಂಡರು ಒಂದೆರಡು ದಿನಗಳಲ್ಲಿ ಇಬ್ಬರು ಒಂದಾಗುತ್ತಾರೆ. ಮಗ ಇದಕ್ಕೆ ಪ್ರಮುಖ ಕಾರಣ ಅನ್ನಿಸುತ್ತದೆ,'' ಎನ್ನುತ್ತಾರೆ ದರ್ಶನ್ ಆಪ್ತರೊಬ್ಬರು.

  ಬದುಕು ಮಾದರಿಯಾಗಲಿ...

  ಬದುಕು ಮಾದರಿಯಾಗಲಿ...

  ದರ್ಶನ್ ಇರುವುದೇ ಸ್ನೇಹಿತರ ನಡುವೆ ಎಂಬಂತಿದೆ ಅವರು ದಿನಚರಿ. ಶೂಟಿಂಗ್ ಇದ್ದರೆ ಸಿನಿಮಾ, ವಾರಾಂತ್ಯಕ್ಕೆ ಮೈಸೂರು ತೋಟದ ಮನೆ. ಫ್ರಿ ಇದ್ದರೆ ಹೊಸಬರ ಚಿತ್ರಗಳ ಕಾರ್ಯಕ್ರಮ, ಆಗಾಗ ಸ್ನೇಹಿತರ ಮದ್ವೆ, ಪಾರ್ಟಿ, ಬರ್ತಡೇ. ಇದು ಸ್ಟಾರ್ ನಟ ಸಾರ್ವಜನಿಕವಾಗಿ ಈವರೆಗೆ ಕಾಣಿಸಿಕೊಂಡ ರೀತಿ. ಇದರ ನಡುವೆ ಖಾಸಗಿ ಬದುಕಿನ ಅವರ ಸಮಯ ಕೊಡದಿರುವುದೇ ಕೌಟುಂಬಿಕ ಕಿತ್ತಾಟಗಳಿಗೆ ಕಾರಣ ಅಂತಾರೆ ಅವರ ಸ್ನೇಹಿತರು.

  'ಇದು ನಿಜವಾಗಲೂ ಅಸಹ್ಯ': ಜಂಟಲ್ ಮ್ಯಾನ್ ಕಾರ್ಯಕ್ರಮದಲ್ಲಿ ಡಿ-ಬಾಸ್ ಬೇಸರ'ಇದು ನಿಜವಾಗಲೂ ಅಸಹ್ಯ': ಜಂಟಲ್ ಮ್ಯಾನ್ ಕಾರ್ಯಕ್ರಮದಲ್ಲಿ ಡಿ-ಬಾಸ್ ಬೇಸರ

  ಒಂದೊಳ್ಳೆ ಸಂದೇಶ ನೀಡಿದ ನಗುಮುಖದ ಫೋಟೋ

  ಒಂದೊಳ್ಳೆ ಸಂದೇಶ ನೀಡಿದ ನಗುಮುಖದ ಫೋಟೋ

  ಇವೆಲ್ಲಾ ಏನೇ ಇರಲಿ, ದರ್ಶನ ದಂಪತಿ ತಮಿಳುನಾಡಿನ ತಿರುನಲ್ಲರ್ ‌ನಲ್ಲಿರುವ ಪ್ರಸಿದ್ಧ ಶನೇಶ್ವರ ದೇವಸ್ಥಾನಕ್ಕೆ ಜತೆಯಾಗಿ ಭೇಟಿ ನೀಡಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಇಲ್ಲಿಂದ ಹೊರಬಿದ್ದಿರುವ ಚಿತ್ರಗಳು ನಗುಮುಖದಲ್ಲಿ ದಂಪತಿ ದೇವರ ಸಾನಿಧ್ಯ ಬಯಸಿದ್ದನ್ನು ಸಾರಿ ಹೇಳುತ್ತಿವೆ. ಈ ಮೂಲಕ ತಮ್ಮ ಅಭಿಮಾನಿಗಳು, ಅನುಕರಣೆ ಮಾಡುವವರಿಗೆ ದರ್ಶನ್ ಒಂದೊಳ್ಳೆ ಸಂದೇಶವನ್ನಂತೂ ರವಾನಿಸಿದ್ದಾರೆ. ಇಂತಹ ವಿಚಾರಗಳು ಸುದ್ದಿಯಾಗಬೇಕು ಮತ್ತು ಮಾದರಿಯಾಗಬೇಕು ಎಂಬುದು ಅವರ ಸುತ್ತಮುತ್ತಲಿವನರ ಹಾರೈಕೆಗಳು ಕೂಡ.

  English summary
  Interesting facts about challenging star darshan and his wife vijayalakshmi family. they are mutually understanding and caring each other.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X