For Quick Alerts
  ALLOW NOTIFICATIONS  
  For Daily Alerts

  ಸಾಫ್ಟ್ ವೇರ್ ನಿಂದ ಸಂಗೀತ : ಲ್ಯಾಪ್ ಟಾಪ್ ಬಿಟ್ಟು ಕೀಬೋರ್ಡ್ ಹಿಡಿದ ಅಭಿಲಾಷ್

  By Naveen
  |

  ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಅನೇಕ ಇಂಜಿನಿಯರ್ ಗಳು ಬಂದು ತಮ್ಮ ಪ್ರತಿಭೆ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ. ಈಗ ಆ ಸಾಲಿಗೆ ಈಗ ಮತ್ತೊಬ್ಬ ಇಂಜಿನಿಯರ್ ಎಂಟ್ರಿ ಕೊಟ್ಟಿದ್ದಾರೆ. ಅವರೇ ಅಭಿಲಾಷ್ ಗುಪ್ತ. ಇತ್ತೀಚಿಗೆ ಬಂದ 'ಹೀಗೊಂದು ದಿನ' ಸಿನಿಮಾದ ಮೂಲಕ ಅಭಿಲಾಷ್ ಗುಪ್ತ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶನರಾಗಿ ಗುರುತಿಸಿಕೊಂಡಿದ್ದಾರೆ.

  ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಅಭಿಲಾಷ್ ಗುಪ್ತ ಮಾಡುತ್ತಿದ್ದ ಕೆಲಸ ಬಿಟ್ಟು ತಮ್ಮ ಕನಸಿನ ಹಿಂದೆ ಹೊರಟಿದ್ದಾರೆ. ಪ್ರಾರಂಭದಲ್ಲಿ ಟ್ರಾಕ್ ಸಿಂಗರ್ ಆಗಿ ಅರ್ಜುನ್ ಜನ್ಯ, ಮನೋಮೂರ್ತಿ ಮತ್ತು ಅನೂಪ್ ಸಿಳೀನ್ ಜೊತೆಗೆ ಕೆಲಸ ಮಾಡಿದ್ದ ಇವರು ಬಳಿಕ ಹಿಂದಿ ಆಲ್ಬಂ ಹಾಡುಗಳನ್ನು ಸಹ ಬರೆದಿದ್ದಾರೆ. ಎ.ಆರ್.ರೆಹಮಾನ್ ಅವರ Qyuki ನಲ್ಲಿಯೂ ಅಭಿಲಾಷ್ ಗುಪ್ತ ಹಾಡುಗಳು ಇವೆ.

   ವಿಮರ್ಶೆ : ಒಂದು ದಿನ, ಒಂದು ಹುಡುಗಿ, ಒಂದಷ್ಟು ಕುತೂಹಲಕಾರಿ ಘಟನೆಗಳು ವಿಮರ್ಶೆ : ಒಂದು ದಿನ, ಒಂದು ಹುಡುಗಿ, ಒಂದಷ್ಟು ಕುತೂಹಲಕಾರಿ ಘಟನೆಗಳು

  ಇನ್ನು UNO ಸಂಸ್ಥೆಯು ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಇವರನ್ನು ಆಹ್ವಾನ ಮಾಡಿತ್ತು. ಸೌಂಡ್ ಬ್ರಾಂಡಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭಿಲಾಷ್ ಕಾರ್ಪೊರೇಟಿಂಗ್ ಡಿಸೈನಿಂಗ್ ಕುರಿತು ಕೆಲಸ ಮುಂದುವರೆಸಿದರು. ಎಂಗೇಜ್ ಮೆಂಟ್ ಸ್ಪೆಷಲಿಸ್ಟ್ ಉದ್ಯೋಗಿಯಾಗಿದ್ದು, ಅವರ ಎಂಗೇಜ್ ಮೆಂಟ್ ಪ್ರೋಗ್ರಾಮ್ಸ್ ಸಂಗೀತ ಹಾಗೂ ಕಲೆಯ ತಳಹದಿಯಾಗಿತ್ತು.

  2017ರಲ್ಲಿ ಅಭಿಲಾಷ್ ಸಂಗೀತಕ್ಕೆ ಯುಕೆಯ ಬಿಬಿಸಿ ರೆಡಿಯೋ, ನ್ಯೂಯಾರ್ಕ್ ರೇಡಿಯೋ ಇದಕ್ಕೆ ಹೈ ರೇಟಿಂಗ್ ಕೊಟ್ಟಿತು. ಈ ಮೂಲಕ ಎಫ್ ಎಮ್ ಸ್ಟೇಶನ್, ಡಿಜಿಟಲ್ ಪ್ಲಾಟ್‌ಫಾರ್ಮ್ ಗೆ ಪ್ರವೇಶ ಪಡೆದುಕೊಂಡರು. ಈ ಚಿತ್ರ ಮಾರ್ಚ್ 30, 2018 ರಂದು ಬಿಡುಗಡೆಯಾಯಿತು. ಅಂದಹಾಗೆ, ತಮ್ಮ ಸಿನಿ ಜರ್ನಿ ಶುರು ಮಾಡಿರುವ ಅಭಿಲಾಷ್ ಮುಂದೆ ಲೈವ್ ಪರ್ಫಾರ್ಮೆನ್ಸ್ ಕೂಡ ಲಾಂಚ್ ಮಾಡುವ ತಯಾರಿಯಲ್ಲಿದ್ದಾರೆ. ಒಟ್ಟಿನಲ್ಲಿ ಇವರ ಸಂಗೀತದ ಮೂಲಕ ಭರವಸೆಯನ್ನು ಮೂಡಿಸಿದ್ದಾರೆ.

  English summary
  All about kannada music director Abhilash Gupta. A software engineer, moved to playback singing now, a music director for Kannada feature films, Abhilash Gupta has had a long worthwhile journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X