»   » ಕಣ್ಣಲ್ಲೇ ಕೊಲ್ಲುತ್ತಿರುವ ಈ ಹುಡುಗಿ ಬಗ್ಗೆ ಎಲ್ಲಿಯೂ ರಿವೀಲ್ ಆಗದ ಸಂಗತಿಗಳು!

ಕಣ್ಣಲ್ಲೇ ಕೊಲ್ಲುತ್ತಿರುವ ಈ ಹುಡುಗಿ ಬಗ್ಗೆ ಎಲ್ಲಿಯೂ ರಿವೀಲ್ ಆಗದ ಸಂಗತಿಗಳು!

Posted By:
Subscribe to Filmibeat Kannada
ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆದಂತಹ ಈ ಹುಡುಗಿ ಯಾರು? | Filmibeat Kannada

ನಿನ್ನೆಯಿಂದ ಫೇಸ್ ಬುಕ್, ಟ್ವಿಟ್ಟರ್, ಇನ್ಟಾಗ್ರಾಮ್ ಯೂಟ್ಯೂಬ್ ಎಲ್ಲಿ ನೋಡಿದರು ಒಂದು ಹುಡುಗಿಯ ಪೋಟೋ, ವಿಡಿಯೋ ಕಣ್ಣು ಮುಂದೆ ಬರುತ್ತಿದೆ. ಈ ವಿಡಿಯೋದ ತುಣುಕು ನೋಡಿ ಹುಡುಗರು ನಿಜಕ್ಕೂ ಕಳೆದು ಹೋಗಿದ್ದಾರೆ. ಕಣ್ಣಲ್ಲೇ ಕೊಲ್ಲುತ್ತಿರುವ ಈ ಹುಡುಗಿ ಈಗ ನ್ಯಾಷನಲ್ ಕ್ರಶ್ ಆಗಿದ್ದಾಳೆ.

ಒಂದೇ ದಿನದಲ್ಲಿ ಸ್ಟಾರ್ ಮಟ್ಟದ ಕ್ರೇಜ್ ಹುಟ್ಟು ಹಾಕಿರುವ ಈ ಹುಡಗಿಯ ಕಣ್ಣಿನ ನೋಟಕ್ಕೆ ಮತ್ತು ಆಕೆ ಕೊಡುವ ಎಕ್ಸ್‌ಪ್ರೆಶನ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಕ್ರೇಜ್ ಸೃಷ್ಟಿ ಮಾಡಿರುವ ಈ ಬೆಳದಿಂಗಳ ಬಾಲೆ ಯಾರು ಎಂಬುದು ಎಲ್ಲರಿಗೂ ಹುಟ್ಟಿರುವ ಕುತೂಹಲ. ಆದರೆ ನಿಮ್ಮ ಆ ಕುತೂಹಲಕ್ಕೆ ಉತ್ತರ ಮುಂದಿದೆ ಓದಿ...

ಪ್ರಿಯಾ ಪ್ರಕಾಶ್ ವಾರಿಯರ್

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿರುವ ಈ ಹುಡುಗಿಯ ಹೆಸರು ಪ್ರಿಯಾ ಪ್ರಕಾಶ್ ವಾರಿಯರ್. 18 ವರ್ಷದ ಈ ಹುಡುಗಿ ಕೇರಳದ ತ್ರಿಸ್ಸೂರ್ ನಲ್ಲಿರುವ ವಿಮಲ್ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾಳೆ.

ಮೊದಲ ಸಿನಿಮಾದ ಮೊದಲ ಹಾಡು

ಸದ್ಯ ವೈರಲ್ ಆಗುತ್ತಿರುವ ನಟಿ ಪ್ರಿಯಾ ಅವರ ವಿಡಿಯೋ ಆಕೆಯ ಮೊದಲ ಸಿನಿಮಾದು. 'ಒರು ಅಡಾರ್ ಲವ್' (Ooru adaar love) ಎಂಬ ಮಲೆಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರಿಯಾ ಕಾಲಿಟ್ಟಿದ್ದಾರೆ. ಪ್ರಿಯಾ ಮೊದಲ ಸಿನಿಮಾದ ಮೊದಲ ಹಾಡು ಫೆಬ್ರವರಿ 9ಕ್ಕೆ ರಿಲೀಸ್ ಆಗಿತ್ತು. ಆ ಹಾಡಿನ ದೃಶ್ಯವೇ ಈಗ ಸಖತ್ ಫೇಮಸ್ ಆಗಿದೆ.

ಫ್ಯಾಷನ್ ಶೋ

ಸಿನಿಮಾರಂಗಕ್ಕೆ ಬರುವುದಕ್ಕೆ ಮುಂದೆ ಪ್ರಿಯಾ ಅನೇಕ ರಾಂಪ್ ವಾಕ್ ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೊಚ್ಚಿಯಲ್ಲಿ ನಡೆದಿರುವ ಅನೇಕ ಫ್ಯಾಷನ್ ಶೋ ಗಳಲ್ಲಿಯೂ ಅವರು ಮಿಂಚಿದ್ದರು.

ಎರಡನೇ ಸಿನಿಮಾ

ತನ್ನ ಮೊದಲ ಸಿನಿಮಾದ ಮೊದಲ ಹಾಡಿನ ಮೂಲಕ ಸದ್ದು ಮಾಡುತ್ತಿರುವ ಪ್ರಿಯಾ ಅವರ ಮೊದಲ ಸಿನಿಮಾ ರಿಲೀಸ್ ಆಗುವುದಕ್ಕೆ ಮುಂಚೆಯೇ ಮತ್ತೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಟ್ರೆಂಡಿಂಗ್ 1

ಯೂ ಟ್ಯೂಬ್ ನಲ್ಲಿ ಪ್ರಿಯಾ ಮೊದಲ ಸಿನಿಮಾದ ಮೊದಲ ಹಾಡು ನಿನ್ನೆಯಿಂದ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂ 1ನಲ್ಲಿ ಇದೆ. 4 ಮಿಲಿಯನ್ ಜನರು ಈ ಹಾಡನ್ನು ಈಗಾಗಲೇ ವೀಕ್ಷಿಸಿದ್ದಾರೆ.

ಫಾಲೋವರ್ಸ್ ಸಂಖ್ಯೆ

ಸದ್ಯ ಪ್ರಿಯಾ ಅಫೀಷಿಯಲ್ ಫೇಸ್ ಬುಕ್ ಖಾತೆಯನ್ನು 58 ಸಾವಿರ ಜನರು ಲೈಕ್ ಮಾಡಿದ್ದಾರೆ. ಇನ್ಟಾಗ್ರಾಮ್ ಖಾತೆಯಲ್ಲಿ 7,33,000 ಫಾಲೋವರ್ಸ್ ಗಳನ್ನು ಪ್ರಿಯಾ ಹೊಂದಿದ್ದಾರೆ.

ಮೊದಲ ಸಿನಿಮಾ ರಿಲೀಸ್ ಯಾವಾಗ

ಅಂದಹಾಗೆ, ಪ್ರಿಯಾ ಅವರ ಮೊದಲ ಸಿನಿಮಾ 'ಒರು ಅಡಾರ್ ಲವ್'(Ooru adaar love) ಮಾರ್ಚ್ 3ಕ್ಕೆ ರಿಲೀಸ್ ಆಗಲಿದೆ.

English summary
Malayalam young actress Priya Prakash Varrier video viral in social media. Prakash Varrier is the new internet sensation.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada