For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್ ಪುತ್ರನ 'ಮುಗಿಲ್ ಪೇಟೆ' ಚಿತ್ರದ ನಾಯಕಿ ಯಾರು?

  |

  ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ನಟಿಸುತ್ತಿರುವ 'ಮುಗಿಲ್ ಪೇಟೆ' ಸಿನಿಮಾ ಅಧಿಕೃತವಾಗಿ ಇಂದು (ನವೆಂಬರ್ 15) ಆರಂಭವಾಗಿದೆ. ನಟ ದರ್ಶನ್ ಈ ಚಿತ್ರವನ್ನ ಲಾಂಚ್ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಕಾರ್ಯಕ್ರಮಕ್ಕೆ ಡಿ-ಬಾಸ್ ಬಂದಿಲ್ಲ.

  ದರ್ಶನ್ ಅವರ ಅನುಪಸ್ಥಿತಿಯಲ್ಲೂ ಮುಗಿಲ್ ಪೇಟೆ ಸಿನಿಮಾ ಆರಂಭವಾಗಿದೆ. ಸಾಹೇಬ, ಬೃಹಸ್ಪತಿ, ಪ್ರಾರಂಭ ಚಿತ್ರದ ಬಳಿಕ ಮುಗಿಲ್ ಪೇಟೆ ಶುರುವಾಗಿದ್ದು, ಈ ಚಿತ್ರದಲ್ಲಿ ಮನೋರಂಜನ್ ಗೆ ಜೋಡಿಯಾಗಿ ಪುಣೆ ಮೂಲದ ನಟಿ ಖಯಾದು ಲೋಹರ್ ಆಯ್ಕೆಯಾಗಿದ್ದಾರೆ.

  ದರ್ಶನ್ ಜೊತೆ 'ಮುಗಿಲ್ ಪೇಟೆ'ಗೆ ಹೋಗ್ತಾರೆ ಮನೋರಂಜನ್ದರ್ಶನ್ ಜೊತೆ 'ಮುಗಿಲ್ ಪೇಟೆ'ಗೆ ಹೋಗ್ತಾರೆ ಮನೋರಂಜನ್

  ಮುಗಿಲ್ ಪೇಟೆ ಚಿತ್ರದ ನಾಯಕಿಯ ಬಗ್ಗೆ ತಿಳಿಯುವುದಾರೇ ಈಕೆ ಮೂಲತಃ ಅಸ್ಸಾಂ. ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಮರಾಠಿಯಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ಮೊದಲ ಸಿನಿಮಾ ಇದಾಗಿದೆ.

  ಮ್ಯಾನೇಜರ್ ಮೂಲಕ ಆಡಿಷನ್ ನೀಡಿದ್ದ ಖಯಾದು ಈ ಚಿತ್ರಕ್ಕೆ ಅಯ್ಕೆಯಾಗಿದ್ದಾರೆ. ಸದ್ಯಕ್ಕೆ ಫೋಟೋಶೂಟ್ ಮಾತ್ರ ಮುಗಿದಿದ್ದು, ಚಿತ್ರೀಕರಣದ ಬಗ್ಗೆ ಬಹಳ ಕಾತುರರಾಗಿದ್ದಾರಂತೆ. ಬಬ್ಲಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿರುವ ಖಯಾದು ಅವರ ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ಭರವಸೆಯಲ್ಲಿದ್ದಾರಂತೆ.

  ಜೊತೆಜೊತೆಗೆ ಕನ್ನಡವನ್ನ ಕಲಿಯುತ್ತಿರುವ ನಟಿ, ಕೆಲವು ಕನ್ನಡ ಸಿನಿಮಾಗಳನ್ನ ನೋಡಲು ನಿರ್ಧರಿಸಿದ್ದಾರಂತೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುರಿತು ತಿಳಿದುಕೊಂಡಿರುವ ಖಯಾದು, ''ಅಷ್ಟು ದೊಡ್ಡ ಫ್ಯಾಮಿಲಿಯಿಂದ ಬಂದಿರುವ ಮನೋರಂಜನ್ ಅವರ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ'' ಎಂದಿದ್ದಾರೆ.

  English summary
  Crazy Star ravichandran son manoranjan starts new movie with bharath navunda. pune based actress playing female lead in this project.
  Friday, November 15, 2019, 19:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X