»   » ಪ್ರಿಯಾ ವಾರಿಯರ್ ಬಗ್ಗೆ ಮಾತಾಡಿದ್ದು ಸಾಕು, ಈ ಹುಡುಗ ಯಾರು ಅಂತ ಕೇಳಿ!

ಪ್ರಿಯಾ ವಾರಿಯರ್ ಬಗ್ಗೆ ಮಾತಾಡಿದ್ದು ಸಾಕು, ಈ ಹುಡುಗ ಯಾರು ಅಂತ ಕೇಳಿ!

Posted By:
Subscribe to Filmibeat Kannada
ಪ್ರಿಯಾ ಬಗ್ಗೆ ಮಾತಾಡಿದ್ದು ಸಾಕು, ಈ ಹುಡುಗ ಯಾರು ಅಂತ ಕೇಳಿ! | Oneindia Kannada

ಈಗಂತು ಎಲ್ಲಿ ಕೇಳಿದರು ಎಲ್ಲಿ ನೋಡಿದರು ಬರೀ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆಯೇ ಮಾತು. ಈ ಪ್ರೇಮಿಗಳ ದಿನವನ್ನು ಅದೆಷ್ಟೊ ಹುಡುಗರು ಆಕೆಗಾಗಿ ಮೀಸಲಿಟ್ಟಿದ್ದಾರೆ. ಕೆಲವೇ ಸೆಕೆಂಡುಗಳ ಕಣ್ ನೋಟವನ್ನು ಕಂಡು ಅದನ್ನು ಇನ್ನೂ ಸುಧಾರಿಸಿಕೊಳ್ಳುವುದಕ್ಕೆ ಗಂಡು ಮಕ್ಕಳು ಪ್ರಯತ್ನ ಪಡುತ್ತಿದ್ದಾರೆ.

ಪ್ರಿಯಾ ಕೊಟ್ಟ ಒಂದೇ ಒಂದು ಎಕ್ಸ್‌ಪ್ರೆಶನ್ ಆಕೆಯನ್ನು ನ್ಯಾಷನಲ್ ಕ್ರಶ್ ಅಂತ ಕರೆಸಿಕೊಳ್ಳುವ ಹಾಗೆ ಮಾಡಿದೆ. ಕೋಟಿ ಕೋಟಿ ಅಭಿಮಾನಿಗಳನ್ನು ಆಕೆ ಒಂದೇ ದಿನದಲ್ಲಿ ಸಂಪಾದನೆ ಮಾಡಿದ್ದಾರೆ. ಆದರೆ ಅದೇ ಹಾಡಿನಲ್ಲಿ ಆಕೆಯ ಲವರ್ ಆಗಿ ನಟಿಸಿದ್ದ ಹುಡುಗ ಯಾರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅಂದಹಾಗೆ, ಸದ್ಯ ದೇಶದೆಲ್ಲಡೆ ಕೋಲಾಹಲ ಸೃಷ್ಟಿಸಿರುವ 'ಒರು ಅಡಾರ್ ಲವ್' (Ooru adaar love) ಸಿನಿಮಾದ ಹಾಡಿನಲ್ಲಿ ಪ್ರಿಯಾ ವಾರಿಯರ್ ಜೊತೆಗೆ ಸ್ಕೂಲ್ ಹುಡುಗನಾಗಿ ಕಾಣಿಸಿಕೊಂಡಿದ್ದ ಆ ಕ್ಯೂಟ್ ಹುಡುಗನ ಬಗ್ಗೆ ಕೆಲವು ಸಂಗತಿ ಮುಂದಿದೆ ಓದಿ...

ರೋಷನ್ ಅಬ್ದುಲ್‌ ರಹೂಫ್

'ಒರು ಅಡಾರ್ ಲವ್' (Ooru adaar love) ಚಿತ್ರದ ಹಾಡಿನಲ್ಲಿ ಪ್ರಿಯಾ ವಾರಿಯರ್ ಜೊತೆಗೆ ಕಾಣಿಸಿಕೊಂಡಿರುವ ಈ ಹುಡುಗನ ಹೆಸರು ರೋಷನ್ ಅಬ್ದುಲ್‌ ರಹೂಫ್. 19 ವರ್ಷ ರೋಷನ್ ಕೇರಳದ ಹುಡುಗ. ಡ್ಯಾನ್ಸ್ ಅಂದರೆ ರೋಷನ್ ಗೆ ಸಖತ್ ಇಷ್ಟ.

ಮೊದಲ ಸಿನಿಮಾ

ರೋಷನ್ ಅಬ್ದುಲ್‌ ರಹೂಫ್ 'ಒರು ಅಡಾರ್ ಲವ್' (Ooru adaar love) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಿಯಾ ವಾರಿಯರ್ ಮತ್ತು ರೋಷನ್ ಇಬ್ಬರಿಗೂ ಇದು ಮೊದಲ ಸಿನಿಮಾವಾಗಿದೆ. ರೋಷನ್ ನಟನೆ ಅಂದರೆ ತುಂಬ ಇಷ್ಟ ಅಂತೆ.

ಕಣ್ಣಲ್ಲೇ ಕೊಲ್ಲುತ್ತಿರುವ ಈ ಹುಡುಗಿ ಬಗ್ಗೆ ಎಲ್ಲಿಯೂ ರಿವೀಲ್ ಆಗದ ಸಂಗತಿಗಳು!

ಹೆಚ್ಚಿದ ಫಾಲೋವರ್ಸ್ ಸಂಖ್ಯೆ

'ಒರು ಅಡಾರ್ ಲವ್' (Ooru adaar love) ಸಿನಿಮಾದ ಆ ಹಾಡಿನಿಂದ ಬರೀ ಪ್ರಿಯಾ ವಾರಿಯರ್ ಫೇಮಸ್ ಆಗಿಲ್ಲ. ಬದಲಿಗೆ ರೋಷನ್ ಕೂಡ ಸಖತ್ ಜನಪ್ರಿಯತೆಗಳಿಸಿದ್ದಾರೆ. ಸದ್ಯ ರೋಷನ್ ಅಬ್ದುಲ್‌ ರಹೂಫ್ ಅವರ ಇನ್ಟಾಗ್ರಾಮ್ ಖಾತೆಯಲ್ಲಿ 430 ಸಾವಿರ ಫಾಲೋವರ್ಸ್ ಇದ್ದಾರೆ.

ಪ್ರಿಯಾ ವಾರಿಯರ್ ಮುಂದೆ ಡಮ್ಮಿ ಆಗೋದಳು ಸನ್ನಿ!

ಧನ್ಯವಾದ ತಿಳಿಸಿ ರೋಷನ್

ತನ್ನ ಮೊದಲ ಸಿನಿಮಾದ ಹಾಡಿಗೆ ಸಿಕ್ಕಿರುವ ಈ ಮಟ್ಟದ ದೊಡ್ಡ ಪ್ರತಿಕ್ರಿಯೆ ನೋಡಿ ರೋ‍ಷನ್ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಎಲ್ಲ ಫ್ಯಾನ್ಸ್ ಗಳಿಗೂ ಧನ್ಯವಾದ ತಿಳಿಸಿದ್ದಾರೆ.

ಅನೇಕ ಹುಡುಗಿಯರು

ಯಾವ ರೀತಿ ಪ್ರಿಯಾ ವಾರಿಯರ್ ನೋಡಿ ಹುಡುಗರು ಫಿದಾ ಆಗಿದ್ದಾರೆ ಅದೇ ರೀತಿ ಹುಡುಗಿಯರು ರೋಷನ್ ಆಕ್ಟಿಂಗ್ ನೋಡಿ ಇಂಪ್ರೆಸ್ ಆಗಿದ್ದಾರೆ. ಅನೇಕರು ಸೋಷಿಯಲ್ ಮೀಡಿಯಾದಲ್ಲಿ ರೋಷನ್ ಬಗ್ಗೆ ಬರೆದುಕೊಂಡಿದ್ದಾರೆ.

English summary
All about Priya Prakash Varrier co star Roshan Abdul Rahoof. Malayalam young actress Priya Prakash Varrier and Roshan's video viral in social media. Prakash Varrier is the new internet sensation.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X