Just In
Don't Miss!
- News
ಬೆಂಗಳೂರು: ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತ
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಬ್ರಿಸ್ಬೇನ್, ಅಂತಿಮ ದಿನದಾಟ Live ಸ್ಕೋರ್
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Automobiles
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಳಿಯನ ಬಗ್ಗೆ ಕ್ರೇಜಿಸ್ಟಾರ್ ಹೇಳಿದ್ದೇನು: ಒಂದು ವಿಷ್ಯ ಅಚ್ಚರಿ ಅನ್ಸುತ್ತೆ.!
ಮೇ 28ರಂದು ರವಿಚಂದ್ರನ್ ಅವರ ಮಗಳು ಗೀತಾಂಜಲಿ ಮದುವೆ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿರುವ ವಿವಾಹದಲ್ಲಿ ಉದ್ಯಮಿ ಅಜಯ್ ಅವರ ಕೈಹಿಡಿಯಲಿದ್ದಾರೆ ಕ್ರೇಜಿಸ್ಟಾರ್ ಪುತ್ರಿ.
ರವಿಚಂದ್ರನ್ ಅವರ ಅಳಿಯನ ಬಗ್ಗೆ ಉದ್ಯಮಿ ಅನ್ನೋದು ಬಿಟ್ಟರೇ ಬೇರೆ ಏನೂ ಮಾಹಿತಿ ಸಿಕ್ಕಿರಲಿಲ್ಲ. ಇದೀಗ, ಸ್ವತಃ ಕನಸುಗಾರನೇ ತಮ್ಮ ಅಳಿಯನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
'ಕನಸುಗಾರ'ನ ಸ್ಟೈಲ್ ನಲ್ಲೇ ಮಗಳ ಮದುವೆ: ಇದು ಮದುವೆನಾ, ಸಿನಿಮಾನಾ?
ಅಂದ್ಹಾಗೆ, ರವಿಚಂದ್ರನ್ ಮಗಳ ಮದುವೆ ಅಂದ್ಮೇಲೆ ಅಳಿಯನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇದ್ದೇ ಇರುತ್ತೆ. ಮಗಳಿಗೆ ಈ ಸಂಬಂಧ ಹೇಗೆ ಕೂಡಿ ಬಂತು, ಕ್ರೇಜಿಸ್ಟಾರ್ ಅಳಿಯ ಯಾರು? ಏನು ಕೆಲಸ ಮಾಡುತ್ತಿದ್ದಾರೆ? ಅವರ ಸಿನಿಮಾಗಳನ್ನ ನೋಡಿದ್ದೀರಾ? ಹೀಗೆ ಅನೇಕ ವಿಷ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಇರುತ್ತೆ. ಇದಕ್ಕೆಲ್ಲಾ ಸ್ವತಃ ರವಿ ಸರ್ ಉತ್ತರ ನೀಡಿದ್ದಾರೆ.

ಮೆಕನಿಕಲ್ ಇಂಜಿನಿಯರ್
ರವಿಚಂದ್ರನ್ ಅವರ ಅಳಿಯ ಅಜಯ್ ಅವರು ಮೆಕನಿಕಲ್ ಇಂಜಿನಿಯರಿಂಗ್ ಮಾಡಿದ್ದು, ಪೀಣ್ಯಾ ಹಾಗೂ ವಿದೇಶದಲ್ಲಿ ಕೆಲವು ಫ್ಯಾಕ್ಟರಿ ಹೊಂದಿದ್ದಾರಂತೆ. ಸ್ವಂತ ಬಿಸಿನೆಸ್ ಮಾಡ್ತಿದ್ದು, ಇಡಿ ಕುಟುಂಬಕ್ಕೆ ಅವರಿಗೆ ಜೊತೆಯಾಗಿ ನಿಂತಿದೆಯಂತೆ.
ಯಾರ್ ಯಾರಿಗೆ ತಲುಪಿದೆ ಕ್ರೇಜಿಸ್ಟಾರ್ ಪುತ್ರಿಯ ಮದುವೆ ಆಮಂತ್ರಣ

ಯಲಹಂಕದಲ್ಲಿ ವಾಸವಾಗಿದ್ದಾರೆ
ಬೆಂಗಳೂರಿನ ಯಲಹಂಕದಲ್ಲಿ ಅವರ ಮನೆ ಹೊಂದಿದ್ದು, ವಿಲ್ಲಾದಲ್ಲಿ ವಾಸಿಸುತ್ತಿದ್ದಾರೆ. 'ಗೋವಾಗೆ ಹೋಗಿಬರುವಾಗಲೆಲ್ಲಾ ಮಗಳ ಮನೆಗೆ ಹೋಗಬಹುದು ಅಥವಾ ಮಗಳ ಮನೆಗೆ ಹೋಗಬೇಕು ಎಂಬ ಕಾರಣಕ್ಕೆ ಗೋವಾಗೆ ಹೋಗಬಹುದು' ಎಂಬ ಖುಷಿಯನ್ನ ರವಿಚಂದ್ರನ್ ಹಂಚಿಕೊಂಡಿದ್ದಾರೆ.

ಯಾವುದೇ ವ್ಯವಹಾರ ನಡೆದಿಲ್ಲ
''ಮದುವೆ ಅಂದ್ಮೇಲೆ ಕೊಡೋದು ತಗೊಳ್ಳುವ ವ್ಯವಹಾರ ಸಾಮಾನ್ಯ. ಆದ್ರೆ, ಇದುವರೆಗೂ ನಮ್ಮ ಎರಡು ಕುಟುಂಬಗಳ ನಡುವೆ ಯಾವುದೇ ರೀತಿಯ ವ್ಯವಹಾರದ ಮಾತುಕತೆ ಆಗಿಲ್ಲ. ನಮಗೆ ಸಂಬಂಧ ಮುಖ್ಯ. ಅವರ ಮಗ ನಮಗೆ ಮಗ ಇದ್ದಂತೆ. ನಮ್ಮ ಮಗಳು ಅವರಿಗೆ ಮಗಳು ಇದ್ದಂತೆ'' ಎಂದು ಕ್ರೇಜಿಸ್ಟಾರ್ ಖುಷಿಯಾದರು.
ಕ್ರೇಜಿಸ್ಟಾರ್ ಪುತ್ರಿಯ ನಿಶ್ಚಿತಾರ್ಥ: ಹುಡುಗ ಯಾರು ಗೊತ್ತಾ?

ನನ್ನ ಸಿನಿಮಾ ನೋಡೇ ಇಲ್ವಂತೆ
ಉದ್ಯಮಿ, ಒಳ್ಳೆಯ ವ್ಯಕ್ತಿತ್ವ, ಒಳ್ಳೆಯ ಕುಟುಂಬ. ಇದೆಲ್ಲ ಚೆನ್ನಾಗಿದ್ದ ಕಾರಣ ಸಂಬಂಧ ಬೆಳೆಯಿತು. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ರವಿಚಂದ್ರನ್ ಅವರ ಸಿನಿಮಾಗಳನ್ನ ಅವರ ಅಳಿಯ ಅಜಯ್ ನೋಡೆ ಇಲ್ವಂತೆ. ಇದನ್ನ ಕೇಳಿ 'ನೋಡದೆ ಇದ್ದಿದ್ದೆ ಒಳ್ಳೆದಾಯಿತು' ಎಂದರಂತೆ ಪುಟ್ನಂಜ.

ಅರಿಸಿ ಬಂದ ಸಂಬಂಧ
ನಮ್ಮ ಸಂಬಂಧಿಕರಲ್ಲೇ ಮದುವೆ ಮಾಡಿಕೊಡಿ ಎಂದು ಕೆಲವರು ಕೇಳಿದ್ರು. ನನಗೆ ಯಾಕೋ ಅದು ಇಷ್ಟವಾಗಲಿಲ್ಲ. ನಾನು ಮಗಳಿಗಾಗಿ ಎಲ್ಲಿಯೂ ವರ ಹುಡುಕಲು ಹೋಗಲಿಲ್ಲ. ಈ ಸಂಬಂಧವೂ ಅಷ್ಟೇ ತಾನಾಗಿಯೆ ಅರಸಿ ಬಂತು. ಕುಟುಂಬ ಇಷ್ಟ ಆಯಿತು. ಎಲ್ಲವೂ ಚೆನ್ನಾಗಿ ಸಾಗಿದೆ'' ಎಂದು ಕ್ರೇಜಿಸ್ಟಾರ್ ಹೇಳಿದರು.