For Quick Alerts
  ALLOW NOTIFICATIONS  
  For Daily Alerts

  'ಶನಿ' ಧಾರಾವಾಹಿಯ ಈ ಬಾಲ ಹನುಮ ಯಾರು?

  By Pavithra
  |
  ಶನಿ ಧಾರಾವಾಹಿಯ ಬಾಲ ಹನುಮನ ಬಗ್ಗೆ ನಿಮಗೆ ಗೊತ್ತಾ..? | Filmibeat Kannada

  'ಶನಿ' ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ. ಪ್ರತಿನಿತ್ಯ ಪ್ರಸಾರ ಆಗುವ 'ಶನಿ' ಧಾರಾವಾಹಿಯಲ್ಲಿ ಈಗ ಮಕ್ಕಳ ಕಲರವವೇ ಹೆಚ್ಚಾಗಿದೆ. ಶನಿ, ಯಮ, ಯಮಿ, ಕಾಕ ರಾಜ ಇತ್ತೀಚಿಗಷ್ಟೆ ಹೊಸದಾಗಿ ಸೇರ್ಪಡೆ ಆಗಿರುವ ತುಂಟ ಹನುಮ.

  ಹನುಮ 'ಶನಿ' ಧಾರಾವಾಹಿಗೆ ಎಂಟ್ರಿ ಆಗಿದ್ದೇ ಆಗಿದ್ದು 'ಶನಿ' ಸೀರಿಯಲ್ ನೋಡುಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮುದ್ದು ಮುದ್ದಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಹನುಮನ 'ಶನಿ' ಸೀರಿಯಲ್ ಸೇರಿಕೊಂಡಿದ್ದು ಹೇಗೆ. ಹನುಮನ ನಿಜವಾದ ಹೆಸರೇನು? ಎನ್ನುವ ಕುತೂಹಲ ಸಾಕಷ್ಟು ಜನರಲ್ಲಿ ಮೂಡಿದೆ.

  'ಶನಿ' ಧಾರಾವಾಹಿ ನೋಡುಗರಿಗೆ ಇದು ಬೇಸರದ ಸುದ್ದಿ! 'ಶನಿ' ಧಾರಾವಾಹಿ ನೋಡುಗರಿಗೆ ಇದು ಬೇಸರದ ಸುದ್ದಿ!

  ಹಾಗಾದರೆ, 'ಶನಿ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಪುಟ್ಟ ಹನುಮ ಯಾರು? ಇನ್ನು ಎಷ್ಟು ದಿನಗಳ ಕಾಲ ಹನುಮನ ದರ್ಶನ ಪ್ರೇಕ್ಷಕರಿಗೆ ಆಗಲಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ...

  ಹನುಮನ ನಿಜವಾದ ಹೆಸರು ಕನಿಷ್ಕ್

  ಹನುಮನ ನಿಜವಾದ ಹೆಸರು ಕನಿಷ್ಕ್

  'ಶನಿ' ಧಾರಾವಾಹಿಯಲ್ಲಿ ಬಾಲ ಹನುಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಲಾವಿದನ ಹೆಸರು ಕನಿಷ್ಕ್ ರವಿ ದೇಸಾಯಿ. ಯಾದಗಿರಿ ಮೂಲಕ ಕನಿಷ್ಕ್ ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಹರ ಹರ ಮಹಾದೇವಾ' ಧಾರಾವಾಹಿಯಲ್ಲಿ ನಟಿಸಿದ್ದಾರೆ.

  ಯಾವುದೇ ಟ್ರೈನಿಂಗ್ ಪಡೆಯದ ಕನಿಷ್ಕ್

  ಯಾವುದೇ ಟ್ರೈನಿಂಗ್ ಪಡೆಯದ ಕನಿಷ್ಕ್

  ಕನಿಷ್ಕ್ ಸದ್ಯ ಏಳನೇ ತರಗತಿಯಲ್ಲಿ ಓದುತ್ತಿದ್ದಾನೆ. ಯಾವುದೇ ನಟನೆಯ ಅಭ್ಯಾಸ ಪಡೆಯದ ಕನಿಷ್ಕ್ ಅಭಿನಯದಲ್ಲಿ ಮಾತ್ರವಲ್ಲದೇ ಓದಿನಲ್ಲೂ ಸದಾ ಮುಂದೆ ಇರುವ ವಿದ್ಯಾರ್ಥಿ .

  ಶಾಲೆಯ ಟಾಪರ್ ಈ ಪುಟ್ಟ ಹನುಮ

  ಶಾಲೆಯ ಟಾಪರ್ ಈ ಪುಟ್ಟ ಹನುಮ

  ಈ ಬಾಲ ಹನುಮ ಸಕಲಕಲಾವಲ್ಲಭ ಅಂದರೆ ತಪ್ಪಿಲ್ಲ. ವಿದ್ಯಾಭ್ಯಾಸ, ಅಭಿನಯದಲ್ಲಿ ಮುಂದಿರುವ ಕನಿಷ್ಕ್ ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಇನ್ನು ಬರೀ ತರಗತಿಗೆ ಮಾತ್ರವಲ್ಲ, ಶಾಲೆಯಲ್ಲಿ ಪ್ರತಿ ವರ್ಷವೂ ಟಾಪರ್ ಲೀಸ್ಟ್ ನಲ್ಲಿ ಕನಿಷ್ಕ್ ಹೆಸರೇ ಮೊದಲು.

  ಚಿತ್ರೀಕರಣ ಮುಗಿಸಿದ ಹನುಮ

  ಚಿತ್ರೀಕರಣ ಮುಗಿಸಿದ ಹನುಮ

  'ಶನಿ' ಧಾರಾವಾಹಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಾಲ ಕಲಾವಿದರು ತಮ್ಮ ಅಭಿನಯವನ್ನು ಮುಗಿಸಲಿದ್ದಾರೆ. ಕಾರಣ ಧಾರಾವಾಹಿಯಲ್ಲಿ 'ಶನಿ' ಯುವಕನಾಗಿದ್ದಾಗಿನ ಕಥೆ ಶುರುವಾಗಲಿದೆ. ಹಾಗಾಗಿ ಹನುಮನ ಚಿತ್ರೀಕರಣವೂ ಈಗಾಗಲೇ ಮುಗಿದಿದೆ.

  English summary
  Here is the complete information of the child artist who has acted in the role of Hanumanth in the Shani serial. broadcast on the Colors Kannada Channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X