»   » 'ಡಾಲಿ'ಯ ಪ್ರೀತಿಯ ತಮ್ಮ ಕಾಕ್ರೋಚ್ ರಿಯಲ್ ಕಥೆ ಕೇಳಿ

'ಡಾಲಿ'ಯ ಪ್ರೀತಿಯ ತಮ್ಮ ಕಾಕ್ರೋಚ್ ರಿಯಲ್ ಕಥೆ ಕೇಳಿ

Posted By:
Subscribe to Filmibeat Kannada
ಟಗರು ಸಿನಿಮಾದಲ್ಲಿ ಕಾಣಿಸಿಕೊಂಡ ಡಾನ್ ಅಂಕಲ್ ಯಾರು? ಇಲ್ಲಿದೆ ಅವರ ಪರಿಚಯ | Filmibeat Kannada

ಕಾಕ್ರೋಚ್ ಎಂಬ ಪದ ಕೇಳಿದ ತಕ್ಷಣ ಈಗ 'ಟಗರು' ಸಿನಿಮಾ ನೆನಪಾಗುತ್ತದೆ. ಅಷ್ಟರ ಮಟ್ಟಿಗೆ 'ಟಗರು' ಸಿನಿಮಾದ ಈ ಒಂದು ಪಾತ್ರ ಗಮನ ಸೆಳೆದಿದೆ. ಡಾಲಿ ಧನಂಜಯ್ ಅವರ ಪ್ರೀತಿಯ ತಮ್ಮನಾಗಿ ಕಾಕ್ರೋಚ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಮಧ್ಯೆ ಮಧ್ಯೆ ಆಗಾಗ ಬಂದು ಹೋಗುವ ಈ ಪಾತ್ರ ಸಿನಿಮಾ ನೋಡುಗರಿಗೆ ಇಷ್ಟ ಆಗುತ್ತದೆ. ಟಗರು ಶಿವ, ಡಾಲಿ, ಚಿಟ್ಟೆ ರೀತಿಯ ಪ್ರಮುಖ ಪಾತ್ರಗಳ ಅಬ್ಬರ ನಡುವೆ ಕೂಡ ಕಾಕ್ರೋಚ್ ಕ್ಯಾರೆಕ್ಟರ್ ಗಮನ ಸೆಳೆಯುತ್ತದೆ. ಅಂದಹಾಗೆ, 'ಟಗರು' ಸಿನಿಮಾದಲ್ಲಿ ಕಾಕ್ರೋಚ್ ಪಾತ್ರವನ್ನು ಮಾಡಿರುವ ಸುದೀ ಅವರ ಪರಿಚಯ ಮತ್ತು ಈ ಸಿನಿಮಾಗೆ ಅವರು ಆಯ್ಕೆ ಆದ ಕುತೂಹಲಕಾರಿ ವಿಷಯ ಮುಂದಿದೆ ಓದಿ...

'ಟಗರು' ಸಿನಿಮಾದ ಡಾನ್ 'ಅಂಕಲ್' ಯಾರು ಗೊತ್ತಾ?

'ಜಾಕಿ' ಚಿತ್ರದಿಂದ

ಕನ್ನಡದ ಸ್ಟಾರ್ ನಟರ ಸಿನಿಮಾಗಳಿಗೆ ವಿಶೇಷವಾದ ಶೈಲಿಯ ಬೈಕ್ ಗಳನ್ನು ರೆಡಿ ಮಾಡುವುದು ಸುದೀ ಅವರ ಕೆಲಸ ಆಗಿತ್ತು. ನಂತರ ಹಾಗೆ ಕೆಲ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದರು. 'ಜಾಕಿ' ಸಿನಿಮಾದಿಂದ ನಿರ್ದೇಶಕ ಸೂರಿ ಜೊತೆಗೆ ಸುದೀ ಇದ್ದಾರೆ.

ಹೆಸರು ಬದಲಾಯಿಸು ಎಂದಿದ್ದರು

ಸುದೀ ಒಮ್ಮೆ ನಿರ್ದೇಶಕ ಎ.ಪಿ.ಅರ್ಜುನ್ ಅವರ ಆಫೀಸ್ ಗೆ ಹೋದಾಗ ಅಲ್ಲಿದ್ದ ಒಬ್ಬರು ನಿನ್ನ ಹೆಸರು ಬದಲಾಯಿಸಿಕೊ ಸಿನಿಮಾ ಅವಕಾಶ ಸಿಗುತ್ತದೆ ಎಂದು ಹೇಳಿದರಂತೆ. ಆಗ ಸುದೀ ಸೂರಿ ಅವರು ಯಾವುದೇ ಹೆಸರು ಇಟ್ಟರು ಓಕೆ ಎಂದು ಹೇಳಿದರಂತೆ.

ಸ್ಟಾರ್ ಆಗ್ತಿಯಾ ಎಂದಿದ್ದ ಸೂರಿ

ಈ ವಿಷಯವನ್ನು ಸೂರಿ ಬಳಿ ಬಂದು ಸುದೀ ಹೇಳಿದಾಗ ಸೂರಿ ಆಯ್ತು ನಿನಗೆ ಒಂದು ಹೆಸರು ಇಡುತ್ತಾನೆ. ಆ ಹೆಸರಿನಿಂದ ನೀನು ಸ್ಟಾರ್ ಆಗ್ತಿಯಾ ಎಂದು ಹೇಳಿದರಂತೆ. ನಂತರ 'ಟಗರು' ಸಿನಿಮಾದ ಕಾಕ್ರೋಚ್ ಎಂಬ ಹೆಸರು ಸುದೀಗೆ ಇಟ್ಟು ಸಿನಿಮಾದಲ್ಲಿ ಅವಕಾಶ ನೀಡಿದರು.

ಸೂರಿ ಮಾತು ನಿಜ ಆಗಿದೆ

ಸೂರಿ ಅಂದು ಹೇಳಿದ ಮಾತು ಇಂದು ನಿಜ ಆಗಿದೆ. 'ಟಗರು' ಸಿನಿಮಾ ಬಿಡುಗಡೆಯಾದ ಮೇಲೆ ಕಾಕ್ರೋಚ್ ಪಾತ್ರದಿಂದ ಸುದೀ ಸಿಕ್ಕಾಪಟ್ಟೆ ಪಾಫುಲರ್ ಆಗಿದ್ದಾರೆ. ಅವರೇ ಹೇಳುವಂತೆ ಅವರ ಏರಿಯಾದಲ್ಲಿ ಸದ್ಯ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದಾರಂತೆ. ಅಷ್ಟರ ಮಟ್ಟಿಗೆ ಜನರಿಗೆ ಈ ಪಾತ್ರ ತಲುಪಿದೆ.

ಪ್ರತಿ ಪಾತ್ರಗಳು ಹಿಟ್

ಕಾಕ್ರೋಜ್ ರೀತಿ 'ಟಗರು' ಸಿನಿಮಾದ ಸಣ್ಣ ಪಾತ್ರಗಳು ದೊಡ್ಡ ಜನಪ್ರಿಯತೆ ಗಳಿಸಿವೆ. ಅಂಕಲ್, ಕಾನ್ಸ್ ಟೇಬಲ್ ಸರೋಜ ರೋಲ್ ಮಾಡಿದ್ದ ಕಲಾವಿದರು ಸಹ ಈಗ ತುಂಬ ಫೇಮಸ್ ಆಗಿದ್ದಾರೆ.

English summary
All about actor Sudhi Gowda. actor Sudhi Gowda played cockroach character in Kannada actor Shiva Rajkumar's 'Tagaru' movie. The movie is directed by Duniya Suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada