For Quick Alerts
  ALLOW NOTIFICATIONS  
  For Daily Alerts

  ನಿತ್ಯ ರಾಮ್ 'ನಟಿ' ಅನ್ನೋದೇ ಭಾವಿ ಪತಿ ಗೌತಮ್ ಗೆ ಗೊತ್ತಿರಲಿಲ್ಲ.! ಅಸಲಿಗೆ ಯಾರೀತ.?

  |

  'ನಂದಿನಿ' ಧಾರಾವಾಹಿ ಮುಖಾಂತರ ಕನ್ನಡ ಕಿರುತೆರೆ ಲೋಕದಲ್ಲಿ ಪ್ರಖ್ಯಾತಿ ಪಡೆದಿರುವ ನಟಿ ನಿತ್ಯ ರಾಮ್. ಇದೇ 'ನಂದಿನಿ' ಧಾರಾವಾಹಿಯ ಜನನಿ ಪಾತ್ರದಿಂದ ತಮಿಳಿನಲ್ಲೂ ನಿತ್ಯ ರಾಮ್ ಫೇಮಸ್ ಆಗಿದ್ದಾರೆ.

  ಈ ಹಿಂದೆ 'ಬೆಂಕಿಯಲ್ಲಿ ಅರಳಿದ ಹೂವು', 'ಕರ್ಪೂರದ ಗೊಂಬೆ', 'ರಾಜಕುಮಾರಿ', 'ಎರಡು ಕನಸು' ಧಾರಾವಾಹಿಗಳಲ್ಲಿ ನಿತ್ಯ ರಾಮ್ ನಟಿಸಿದ್ದರು. ಹಾಗೇ, ತೆಲುಗಿನ 'ಮುದ್ದು ಬಿಡ್ಡ', ತಮಿಳಿನ 'ಅವಳ್' ಧಾರಾವಾಹಿಗಳಲ್ಲೂ ನಿತ್ಯ ರಾಮ್ ಮಿಂಚಿದ್ದರು. ಕಿರುತೆರೆ ಮಾತ್ರ ಅಲ್ಲ.. ಕನ್ನಡದ 'ಮುದ್ದು ಮನಸು' ಸಿನಿಮಾದ ಮೂಲಕ ಬೆಳ್ಳಿತೆರೆ ಮೇಲೂ ನಿತ್ಯ ರಾಮ್ ಮಿನುಗಿದ್ದಾರೆ.

  ಇನ್ನೂ ನಿತ್ಯ ರಾಮ್ ಸಹೋದರಿ ಡಿಂಪಲ್ ಕ್ವೀನ್ ರಚಿತಾ ರಾಮ್ ಬಗ್ಗೆ ಹೇಳೋದೇ ಬೇಡ. ಸ್ಯಾಂಡಲ್ ವುಡ್ ನಲ್ಲಿ ರಚಿತಾ ರಾಮ್ ಸದ್ಯ ಟಾಪ್ ಹೀರೋಯಿನ್. ಬಣ್ಣದ ಪ್ರಪಂಚದಲ್ಲಿ ಈ ಅಕ್ಕ-ತಂಗಿ ಇಷ್ಟೆಲ್ಲಾ ಸೌಂಡ್ ಮಾಡುತ್ತಿದ್ದರೂ, ನಿತ್ಯ ರಾಮ್ ಭಾವಿ ಪತಿ ಗೌತಮ್ ಗೆ ಮಾತ್ರ ಏನೂ ತಿಳಿದಿರಲಿಲ್ಲ.! ಅಸಲಿಗೆ, ನಿತ್ಯ ರಾಮ್ ಮತ್ತು ರಚಿತಾ ರಾಮ್ ನಟಿಯರು ಅನ್ನೋದೇ ಗೌತಮ್ ಗೆ ಗೊತ್ತಿರಲಿಲ್ಲ.!

  ಅಂದ್ಹಾಗೆ, ಯಾರೀ ಗೌತಮ್.? ಗೌತಮ್ ಗೂ ನಿತ್ಯ ರಾಮ್ ಗೂ ಸಂಬಂಧ ಕೂಡಿ ಬಂದಿದ್ದು ಹೇಗೆ ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ಓದಿರಿ...

  ನಿತ್ಯ ರಾಮ್ ಮದುವೆ ಆಗುತ್ತಿರುವ ಹುಡುಗ ಯಾರು.?

  ನಿತ್ಯ ರಾಮ್ ಮದುವೆ ಆಗುತ್ತಿರುವ ಹುಡುಗ ಯಾರು.?

  ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿರುವ ಬಿಸಿನೆಸ್ ಮ್ಯಾನ್ ಗೌತಮ್ ಎಂಬುವರನ್ನ ನಿತ್ಯ ರಾಮ್ ಮದುವೆ ಆಗುತ್ತಿದ್ದಾರೆ. ನಿತ್ಯ ರಾಮ್ ಮತ್ತು ಗೌತಮ್ ರದ್ದು ಲವ್ ಮ್ಯಾರೇಜ್ ಅಲ್ಲ. ಪಕ್ಕಾ ಅರೇಂಜ್ಡ್ ಮ್ಯಾರೇಜ್.! ಗೌತಮ್ ತಾಯಿ ಮತ್ತು ನಿತ್ಯ ತಾಯಿ ಸ್ನೇಹಿತರು. ಹೀಗಾಗಿ, ತಾಯಂದಿರ ಮೂಲಕ ನಿತ್ಯಗೂ ಗೌತಮ್ ಗೂ ಪರಿಚಯ ಆಗಿದೆ. ಕುಟುಂಬಸ್ಥರು ನಿಶ್ಚಯಿಸಿದ ಈ ಮದುವೆಗೆ ನಿತ್ಯ ರಾಮ್ ಸಮ್ಮತಿ ಕೊಟ್ಟಿದ್ದಾರೆ.

  ಡಿಂಪಲ್ ಕ್ವೀನ್ ಮನೆಯಲ್ಲಿ 'ಗಟ್ಟಿಮೇಳ': ನಿತ್ಯ ರಾಮ್ ಗೆ ಕೂಡಿ ಬಂತು ಕಂಕಣ ಬಲಡಿಂಪಲ್ ಕ್ವೀನ್ ಮನೆಯಲ್ಲಿ 'ಗಟ್ಟಿಮೇಳ': ನಿತ್ಯ ರಾಮ್ ಗೆ ಕೂಡಿ ಬಂತು ಕಂಕಣ ಬಲ

  ಏಪ್ರಿಲ್ ನಲ್ಲಿ ಭಾರತಕ್ಕೆ ಬಂದಿದ್ದ ಗೌತಮ್

  ಏಪ್ರಿಲ್ ನಲ್ಲಿ ಭಾರತಕ್ಕೆ ಬಂದಿದ್ದ ಗೌತಮ್

  ಕಳೆದ ಏಪ್ರಿಲ್ ನಲ್ಲಿ ಆಸ್ಟ್ರೇಲಿಯಾದಿಂದ ಗೌತಮ್ ಭಾರತಕ್ಕೆ ಬಂದಿದ್ದರು. ಇಲ್ಲಿ ಹತ್ತು ದಿನಗಳ ಕಾಲ ನೆಲೆಸಿದ್ದರು. ಆಗ ನಿತ್ಯ ರಾಮ್ ಮತ್ತು ಗೌತಮ್ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಮದುವೆ ಆಗಲು ಪರಸ್ಪರ ಒಪ್ಪಿಗೆ ಕೊಟ್ಟ ಮೇಲೆ ಮದುವೆ ದಿನಾಂಕವನ್ನು ಫೈನಲ್ ಮಾಡಲಾಗಿದೆ.

  'ನಂದಿನಿ' ಸೀರಿಯಲ್ ನಲ್ಲಿ ನಿತ್ಯ ರಾಮ್ ಬಿಟ್ಟು ಹೋದ ಜಾಗಕ್ಕೆ ಬಂದ್ರು 'ಈ' ನಟಿ.!'ನಂದಿನಿ' ಸೀರಿಯಲ್ ನಲ್ಲಿ ನಿತ್ಯ ರಾಮ್ ಬಿಟ್ಟು ಹೋದ ಜಾಗಕ್ಕೆ ಬಂದ್ರು 'ಈ' ನಟಿ.!

  ನಟಿ ಅನ್ನೋದೇ ಗೊತ್ತಿರಲಿಲ್ಲ.!

  ನಟಿ ಅನ್ನೋದೇ ಗೊತ್ತಿರಲಿಲ್ಲ.!

  ಮೊದಲ ಬಾರಿಗೆ ನಿತ್ಯ ರಾಮ್ ರನ್ನ ಭೇಟಿ ಆದಾಗ, ಆಕೆ ಮತ್ತು ಸಹೋದರಿ ರಚಿತಾ ರಾಮ್ ನಟಿಯರು ಅಂತ ಗೌತಮ್ ಗೆ ಗೊತ್ತಿರಲಿಲ್ಲ. ವಿಷಯ ಗೊತ್ತಾದ ಮೇಲೆ ನಿತ್ಯ ರಾಮ್ ಅಭಿನಯದ 'ನಂದಿನಿ' ಸೀರಿಯಲ್ ನ ಕೆಲ ಕ್ಲಿಪ್ಪಿಂಗ್ಸ್ ವೀಕ್ಷಿಸಿದ್ದಾರೆ ಗೌತಮ್. ನಿತ್ಯ ರಾಮ್ ಅಕ್ಟಿಂಗ್ ಗೆ ಗೌತಮ್ ಕ್ಲೀನ್ ಬೌಲ್ಡ್ ಆಗಿದ್ದಾರೆ.

  ನಿಶ್ಚಿತಾರ್ಥ ಸಡಗರದಲ್ಲಿ ನಿತ್ಯ ರಾಮ್: ಹುಡುಗ ಯಾರು.?ನಿಶ್ಚಿತಾರ್ಥ ಸಡಗರದಲ್ಲಿ ನಿತ್ಯ ರಾಮ್: ಹುಡುಗ ಯಾರು.?

  ಮದುವೆ ಆದ್ಮೇಲೆ ಆಸ್ಟ್ರೇಲಿಯಾಗೆ ಶಿಫ್ಟ್

  ಮದುವೆ ಆದ್ಮೇಲೆ ಆಸ್ಟ್ರೇಲಿಯಾಗೆ ಶಿಫ್ಟ್

  ಮದುವೆ ಮುಗಿಯುತ್ತಿದ್ದಂತೆಯೇ, ಪತಿ ಜೊತೆಗೆ ನಿತ್ಯ ರಾಮ್ ಆಸ್ಟ್ರೇಲಿಯಾಗೆ ಶಿಫ್ಟ್ ಆಗಲಿದ್ದಾರೆ. ಇದೇ ಕಾರಣಕ್ಕೆ, 'ನಂದಿನಿ' ಸೀರಿಯಲ್ ನಿಂದ ನಿತ್ಯ ರಾಮ್ ಹೊರಬಂದಿದ್ದಾರೆ. ಪತಿಯ ಜೊತೆಗೆ ಸಮಯ ಕಳೆಯಲು ನಿರ್ಧರಿಸಿರುವ ನಿತ್ಯ ರಾಮ್ ಬಣ್ಣದ ಪ್ರಪಂಚದಿಂದ ಬ್ರೇಕ್ ಪಡೆಯಲು ಮನಸ್ಸು ಮಾಡಿದ್ದಾರೆ.

  ನಟನೆಗೆ ನಿತ್ಯ ಗುಡ್ ಬೈ.?

  ನಟನೆಗೆ ನಿತ್ಯ ಗುಡ್ ಬೈ.?

  ಮದುವೆ ಬಳಿಕ ನಿತ್ಯ ರಾಮ್ ನಟನೆಗೆ ಗುಡ್ ಬೈ ಹೇಳ್ತಾರಾ ಎಂಬ ಪ್ರಶ್ನೆಗೆ ಆಕೆಯ ಬಳಿ ಸದ್ಯಕ್ಕೆ ಉತ್ತರ ಇಲ್ಲ. ಆದ್ರೆ, ನಟನೆ ಮುಂದುವರಿಸುವ ಬಗ್ಗೆ ಗೌತಮ್ ಕಡೆಯಿಂದ ಯಾವುದೇ ಅಭ್ಯಂತರ ಇಲ್ಲ. ಉತ್ತಮ ಅವಕಾಶಗಳು ಸಿಕ್ಕರೆ ನಟನೆ ಮುಂದುವರೆಸುವಂತೆ ಗೌತಮ್ ಹೇಳಿದ್ದಾರೆ ಅಂತಾರೆ ನಿತ್ಯ ರಾಮ್.

  English summary
  Kannada Actress Rachita Ram sister, TV Actress Nithya Ram is getting married to Gowtham. Here is the detailed report about Gowtham.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X