»   » ಕನ್ನಡದ ಹುಡುಗಿಗೆ ಅಮೆರಿಕದಲ್ಲಿ ಭರ್ಜರಿ ಸನ್ಮಾನ

ಕನ್ನಡದ ಹುಡುಗಿಗೆ ಅಮೆರಿಕದಲ್ಲಿ ಭರ್ಜರಿ ಸನ್ಮಾನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಬಬ್ಲಿ ನಟಿ ಕೊಡಗಿನ ಸುಂದರಿ ಹರ್ಷಿಕಾ ಪೂನಚ್ಚ ಅವರು ಕನ್ನಡ ಸಿನಿಮಾದಲ್ಲಿ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ಅವರ 'ರೇ' [ವಿಮರ್ಶೆ: ಪ್ರೇತಾತ್ಮಗಳ ಜೊತೆ ಸಂಭಾಷಣೆ ಮಾಡಿದ'ರೆ'.....] ಚಿತ್ರದ ನಂತರ ಇದೀಗ ಕೆಲವು ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇದೀಗ ತಮಿಳು ಚಿತ್ರವೊಂದರ ಶೂಟಿಂಗ್ ಗಾಗಿ ಅಮೆರಿಕಕ್ಕೆ ತೆರಳಿದ್ದ ನಟಿ ಹರ್ಷಿಕಾ ಪೂನಚ್ಚ ಅವರನ್ನು ಯುಎಸ್ಎಯ ಪತ್ರಿಷ್ಠಿತ ಅಮೆರಿಕನ್ ಪೊಲಿಟಿಕಲ್ ಪಾರ್ಟಿಯ ಸದಸ್ಯರು ಸನ್ಮಾನಿಸಿದ್ದು, ನಮ್ಮ ಕನ್ನಡದ ಕುವರಿ ನಟಿ ಹರ್ಷಿಕಾ ಪೂನಚ್ಚ ಅವರಿಗೆ 'ಹ್ಯುಮಾನಿಟೇರಿಯನ್ ಆವಾರ್ಡ್' ನೀಡಿ ಸನ್ಮಾನ ಮಾಡಿದ್ದಾರೆ.

All American Political party to be honoured Actress Harshika Poonacha

ಇದಕ್ಕೆ ಬಹಳ ಖುಷಿ ವ್ಯಕ್ತಪಡಿಸಿರುವ ನಟಿ ಹರ್ಷಿಕಾ ಅವರು ಸನ್ಮಾನ ಮಾಡಿದ ಭರತ್ ಗೊರಡಿಯಾ ಅವರಿಗೆ ತಮ್ಮ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಧನ್ಯವಾದಗಳ ಸುರಿಮಳೆಯನ್ನೇ ಸುರಿಸಿದ್ದಾರೆ.[ಯುಗಾದಿ ಸಡಗರ: ತಾರೆಯರ ಮನೆಯಲ್ಲಿ ಏನು ವಿಶೇಷ?]

ಅಂದಹಾಗೆ ಶೂಟಿಂಗ್ ನಿಮಿತ್ತ ಅಮೆರಿಕದಲ್ಲಿ ಬೀಡು ಬಿಟ್ಟಿರುವ ನಟಿ ಹರ್ಷಿಕಾ ಅವರು ಶೂಟಿಂಗ್ ಜೊತೆ ಜೊತೆಗೆ ಶಾಪಿಂಗ್ ಕೂಡ ಬಹಳ ಜೋರಾಗೇ ಮಾಡುತ್ತಿದ್ದಾರೆ.

ಇನ್ನು ಈ ಸನ್ಮಾನವನ್ನು ಅಮೆರಿಕದವರು ಯಾವ ಉದ್ದೇಶಕ್ಕಾಗಿ ಮಾಡಿದ್ದಾರೆ ಅನ್ನೋದನ್ನ ನಟಿ ಹರ್ಷಿಕಾ ಅವರು ಬಹಿರಂಗ ಪಡಿಸಿಲ್ಲ. ಆದರೆ ಕನ್ನಡದ ಹುಡುಗಿಗೆ ಅಮೆರಿಕದಲ್ಲಿ ಸನ್ಮಾನ ಆಗಿದೆ ಅಂದರೆ ಅದು ನಮಗೆ ಹೆಮ್ಮೆಯ ಸಂಗತಿ ಅಲ್ವಾ?.

English summary
All American Political party to be honoured with the 'Humanitarian award' for Kannada Actress Harshika Poonacha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada