For Quick Alerts
  ALLOW NOTIFICATIONS  
  For Daily Alerts

  ಪವರ್‌ ಸ್ಟಾರ್‌ಗಾಗಿ ಕಣ್ಣೀರ ಧಾರೆ!

  |

  ನಟ ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ ಹೃದಯಾಘಾತ ಹಿನ್ನೆಲೆ ಪುನೀತ್‌ ರಾಜ್‌ಕುಮಾರ್‌ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುನೀತ್‌ ಅವನ್ನ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೇಯೆ ಇಡಿ ಸಿನಿಮಾ ರಂಗ ಮತ್ತು ಅಭಿಮಾನಿ ಬಳಗ ಆಸ್ಪತ್ರೆಗೆ ಹಾಜರಾಗುತ್ತಿದೆ. ನೋಡ ನೋಡುತ್ತಿದ್ದಂತೆಯೇ ಆಸ್ಪತ್ರೆಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಇನ್ನು ಅಪ್ಪು ಆರೋಗ್ಯ ಸರಿಯಾಗಲಿ ಅಂತ ನೆರೆದಿರುವವರು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

  ಆಸ್ಪತ್ರೆಗೆ ಇಡೀ ರಾಜ್‌ಕುಟುಂಬ ಹಾಜರಾಯ್ತು. ಇನ್ನೂ ನಟ ಶಿವರಾಜ್‌ಕುಮಾರ್‌ ಆಸ್ಪತ್ರೆಗೆ ಬರುತ್ತಲೇ ಕಣ್ಣೀರು ಹಾಕುತ್ತಾ ಬಂದ್ರು. ಪತ್ನಿ ಗೀತ ಕೈ ಹಿಡಿದು ಭಾರವಾದ ಮನಸ್ಸಿನಿಂದ ಶಿವರಾಜ್‌ಕುಮಾರ್‌ ಆಸ್ಪತ್ರೆಗೆ ಬಂದ್ರು. ಇನ್ನೂ ಆಸ್ಪತ್ರೆಗೆ ಬಂದಂತಹ ನಟಿ ಶೃತಿ ಕಣ್ಣೀರು ಹಾಕುತ್ತಲೇ ಬಂದರು. ಜೊತೆಗೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಕೂಡ ಆಸ್ಪತ್ರೆಯ ಆವರಣದಲ್ಲಿ ಕಣ್ಣೀಹಾಕಿದ್ದಾರೆ.

  ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು, ಪ್ರತಿಯೊಬ್ಬರೂ ಕಂಗಾಲಾಗಿದ್ದಾರೆ. ಕಣ್ಣೀರು ಹಾಕುತ್ತಾ ಬಿಕ್ಕಿ-ಬಿಕ್ಕಿ ಅಳುತ್ತಿದ್ದಾರೆ. ಅಭಿಮಾನಿಗಳ ಕಣ್ಣೀರು ನಿಲ್ಲುತ್ತಿಲ್ಲ. ಆಸ್ಪತ್ರೆಗೆ ಮುಂದೆ ಜಮಾಯಿಸಿದ ಸಾವಿರಾರು ಮಂದಿ ಕಣ್ಣಲ್ಲಿ ನೀರು ಜಿಗುತ್ತಿದೆ. ಅಪ್ಪುಗೆ ಏನಾಯ್ತು ಅನ್ನೋ ಆತಂಕದಲ್ಲೇ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ.

  ಅಷ್ಟೇ ಅಲ್ಲ ಆಸ್ಪತ್ರೆಗೆ ಭೇಟಡಿ ನೀಡಿದ ಸಿನಿಮಾ ಮಂದಿ, ಸಂಬಂಧಿಕರು ಕಣ್ಣೀರು ಹಾಕುತ್ತಲೆ ಆಸ್ಪತ್ರೆಗೆ ಒಳಗೆ ಹೋಗುತ್ತಿದ್ದಾರೆ. ಅಪ್ಪು ಎಲ್ಲರಿಗೂ ಅತಿ ಅಚ್ಚು ಮೆಚ್ಚು, ಹಾಗಾಗಿಯೇ ಅಪ್ಪು ಆಸ್ಪತ್ರೆಗ ದಾಖಲಾಗಿದ್ದಾರೆ ಅಂದ ಕೂಡಲೆ ಇಡೀ ಸಿನಿಮಾ ರಂಗ ಆಸ್ಪತ್ರೆಯತ್ತ ದೌಡಾಯಿಸಿದೆ.

  ಪುನೀತ್‌ ರಾಜ್‌ಕುಮಾರ್‌ ಆರೋಗ್ಯ ಈ ರೀತಿಯ ಗಂಭೀರ ಪರಿಸ್ಥಿತಿ ತಲುಪಿರೋದು ನಂಬಲು ಅಸಾಧ್ಯವಾದ ವಿಚಾರ. ಸದಾ ಫಿಟ್‌ ಅಂಡ್‌ ಫೈನ್‌ ಆಗಿರುತ್ತಿದ್ದರು ಪುನೀತ್‌. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಾಹಿಸಿದ್ದರು. ಫಿಟ್‌ನೆಸ್ ವಿಚಾರದಲ್ಲಿ ಪುನೀತ್‌ ರಾಜ್‌ಕುಮಾರ್‌ ಸಾಕಷ್ಟು ಮಂದಿಗೆ ಸ್ಪೂರ್ತಿ ಆಗಿದ್ದರು. ಹಾಗಾಗಿ ಈ ಸುದ್ದಿಯನ್ನು ಅಷ್ಟು ಸುಲಭಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

  ಸಿ.ಎಂ ಬಸವರಾಜು ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನಟ ಯಶ್, ದರ್ಶನ್ ಸೇರಿದಂತೆ ಸಾಕಷ್ಟು ಸಿನಿಮಾ ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಸದ್ಯಕ್ಕೆ ವೈದ್ಯರು ಪುನೀತ್‌ ರಾಜ್‌ಕುಮಾರ್‌ ಆರೋಗ್ಯ ಸ್ಥಿತಿ ಗಂಭೀರ ಆಗಿದೆ ಎಂದು ಮಾತ್ರ ಹೇಳಿದ್ದಾರೆ. ಕ್ಷಣ, ಕ್ಷಣಕ್ಕೂ ಆರೋಗ್ಯ ಕ್ಷೀಣಿಸುತ್ತಿದೆ ಅನ್ನೋ ಮಾತನ್ನ ವೈದ್ಯರು ಹೇಳಿದ್ರು. ಜೊತೆಗೆ ಆರೋಗ್ಯದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಹಾಗಾಗಿ ಇಡೀ ಕರ್ನಾಟಕದ ಜನರ ಮನಸಲ್ಲಿ ಆತಂಕ ಮೂಡಿದೆ. ವೈದ್ಯರ ಮಾತಿನಿಂದ ಪುನೀತ್‌ರಾಜ್‌ಕುಮಾರ್‌ ಸ್ಥಿತಿ ಗಂಭೀರ ಅನ್ನೋದು ಗೊತ್ತಾಗಿದೆ. ಹಾಗಾಗಿ ಅಭಿಮಾನಿಗಳ ಕಣ್ಣಿರು ನಿಲ್ಲುತ್ತಿಲ್ಲ. ಈ ವಿಚಾರದಲ್ಲಿ ಕೆಟ್ಟ ಸುದ್ದಿ ಕೇಳುವುದು ಬೇಡ ಎಂದು ಪ್ರತಿಯೊಬ್ಬರು ಪ್ರಾರ್ಥಿಸುತ್ತಿದ್ದಾರೆ. ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿ, ಶಿವರಾಜ್‌ಕುಮಾರ್ ಸೇರಿ ಸುದ್ದಿಗೋಷ್ಠಿ ನಡೆಸಿ ಪುನೀತ್‌ ರಾಜ್‌ಕುಮಾರ್‌ ಆರೋಗ್ಯದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಏನೇ ಇದ್ದರು ಎಲ್ಲರು ಪುನೀತ್‌ ಆರೋಗ್ಯವಂತರಾಗಿದ್ದಾರೆ ಎನ್ನುವ ಸುದ್ದಿಯನ್ನೇ ಬಯಸುತ್ತಿದ್ದಾರೆ.

  English summary
  All Are Praying For Puneeth Rajkumar Health,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X